ಅಮೇರಿಕಾದಲ್ಲಿ ಮುಸಲ್ಮಾನ ಧರ್ಮೋಪದೇಶಕನಿಗೆ ಥಳಿತ !

ಒಂದೆರಡು ಜಿಹಾದಿ ಭಯೋತ್ಪಾದನೆಯ ದಾಳಿಯಾದ ಬಳಿಕ ಅಮೇರಿಕಾದ ನಾಗರಿಕರಲ್ಲಿ  ಇಸ್ಲಾಂ ಕುರಿತು ದ್ವೇಷ ನಿರ್ಮಾಣವಾಗಿದೆ. ಕಳೆದ ೩ ದಶಕಗಳಿಂದ ಜಿಹಾದಿ ಭಯೋತ್ಪಾದಕರನ್ನು ಸಹಿಸುತ್ತಿರುವ ಭಾರತೀಯರು ಇಂದಿಗೂ ಸಹಿಷ್ಣುಗಳಾಗಿದ್ದಾರೆ ! ವಾಶಿಂಗ್ಟನ್ : ಅಮೇಕಾದಲ್ಲಿ ಪಾರಂಪರಿಕ ಇಮಾಮ ಉಡುಪು ಧರಿಸಿ ಮಸೀದಿಯಲ್ಲಿ ಧರ್ಮೋಪದೇಶವನ್ನು ಮಾಡಲು ಹೊರಟಿದ್ದ ರಶೀದ್ ದಾರ್ ಎಂಬ ಮುಸಲ್ಮಾನ ವ್ಯಕ್ತಿಗೆ ಒಬ್ಬ ಅಜ್ಞಾತನು ಥಳಿಸಿದ್ದಾನೆ. ಶುಕ್ರವಾರದ ಪ್ರಾರ್ಥನೆಗೆ ಹೋಗುವಾಗ ನಾನು ಎಂದಿನಂತೆ ಪಾರಂಪರಿಕ ಉಡುಪನ್ನು ಧರಿಸುತ್ತೇನೆ. ನಾನೊಬ್ಬ ಸ್ವಾಭಿಮಾನಿ ಮುಸಲ್ಮಾನನಾಗಿದ್ದೇನೆ ಮತ್ತು ಈ ಕುರಿತು ಕ್ಷಮೆಯಾಚಿಸುವ ಅವಶ್ಯಕತೆಯಿದೆಯೆಂದು ನನಗನಿಸುವುದಿಲ್ಲವೆಂದು ದಾರ್ ಇವರು ದೂರದರ್ಶನ ವಾರ್ತಾವಾಹಿನಿಗೆ ಹೇಳಿದರು. ವಾಶಿಂಗ್ಟನ್‌ನಲ್ಲಿ ಮೊದಲ ಬಾರಿ ನನಗೆ ಇಂತಹ ಪ್ರಸಂಗ ಎದುರಾಗಿದೆ. ನಾನು ಮಸೀದಿಗೆ ಹೋಗುತ್ತಿರುವಾಗ ಡ್ಯುಪಾಂಟ್ ಸರ್ಕಲ್ ಬಳಿ ಒಬ್ಬ ಅಜ್ಞಾತ ವ್ಯಕ್ತಿಯು ನನಗೆ ಮುಷ್ಠಿಯಿಂದ ಗುದ್ದಿದನು ಎಂದು ದಾರ ಇವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.

ಅಮೇರಿಕಾದ ಶಾಲಾ ಪಠ್ಯಪುಸ್ತಕದಲ್ಲಿ ಇಸ್ಲಾಂ ಕುರಿತಾದ ಪಠ್ಯವನ್ನು ರದ್ದುಗೊಳಿಸುವಂತೆ ಮನವಿ!

ಮೊಗಲರನ್ನು ಕೊಂಡಾಡುವ ಭಾರತದ ಶಿಕ್ಷಣ ಮಂಡಳಿಗಳು ಇದರಿಂದ ಏನಾದರೂ ಕಲಿಯುವುದೇ ? ವಾಶಿಂಗ್ಟನ್ : ಇಸ್ಲಾಂನ ಬೋಧನೆಯಿಂದ ತಮ್ಮ ಮಕ್ಕಳ ಮೇಲೆ ದುಷ್ಪರಿಣಾಮವಾಗಬಹುದೆಂದು ಅಮೇರಿಕಾದ ಪಾಲಕರು ಹೆದರುತ್ತಿದ್ದಾರೆ. ಇದರಿಂದ ಅಮೇರಿಕಾದ ಕೆಲವು ರಾಜ್ಯಗಳಲ್ಲಿ ಶಾಲಾ ಪಠ್ಯಪುಸ್ತಕ ದಲ್ಲಿ ಇಸ್ಲಾಂನ ಪಠ್ಯವನ್ನು ರದ್ದುಗೊಳಿಸಲು ಕೋರುತ್ತಿದ್ದಾರೆ. ಜಾರ್ಜಿಯಾದ ಕೆಲವು ಪಾಲಕರು ಇಸ್ಲಾಂ ಕುರಿತು ಪಠ್ಯವಿರುವ ಬಗ್ಗೆ ಜಾರ್ಜಿಯಾ ಶಾಲಾ ಶಿಕ್ಷಣ ಮಂಡಳಿಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದರು. ಈ ಕಾರಣದಿಂದಇಸ್ಲಾಂ ಪಠ್ಯವನ್ನು ರದ್ದುಗೊಳಿಸುವ ಪ್ರಸ್ತಾಪವನ್ನು ಶಿಕ್ಷಣ ಮಂಡಳಿಯು ರಚಿಸಿದೆ. ಅರಬಿ ಭಾಷೆಯ ಒಂದು ಪಾಠದ ಬಗ್ಗೆ ವಾದ-ವಿವಾದಗಳಾಗಿದ್ದರಿಂದ ವರ್ಜಿನಿಯಾದ ಶಾಲೆಯನ್ನು ಒಂದು ದಿನಕ್ಕಾಗಿ ಮುಚ್ಚಲಾಗಿತ್ತು. ಟೆನೆಸಿ ರಾಜ್ಯ ಶಿಕ್ಷಣ ಮಂಡಳಿಯು ಸಮಾಜಶಾಸ್ತ್ರದ ಕುರಿತು ಒಂದು ಹೊಸ ಪಠ್ಯಕ್ರಮವನ್ನು ರಚಿಸಿದ್ದು, ಅದರಲ್ಲಿ ೭ ನೇ ತರಗತಿಯಲ್ಲಿ ಕಲಿಸಲಾಗುವ ಇಸ್ಲಾಂ ಕುರಿತಾದ ಪಠ್ಯವನ್ನು ಕೈಬಿಡಲಾಗಿದೆ. ತಮ್ಮ ಮಕ್ಕಳಿಗೆ ಶಾಲೆಯಲ್ಲಿ ಇಸ್ಲಾಂ ಶಿಕ್ಷಣವನ್ನು ಕಲಿಸಲು ಪಾಲಕರು ವಿರೋಧಿಸುತ್ತಿದ್ದಾರೆ. ಈ ಕಾರಣದಿಂದ ಇನ್ನು ಮುಂದೆ ಶಾಲೆಯಲ್ಲಿ ಇಸ್ಲಾಂ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಲಾಗುವುದಿಲ್ಲವೆಂದು ಟೆನೆಸಿ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಮೈಕಲ್ ಹ್ಯೂಜಿಸ್ ತಿಳಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ಆಗಿದೆ ! – ಪಾಕ್ ಆಕ್ರಮಿತ ಕಾಶ್ಮೀರದ ಪೊಲೀಸ್ ಅಧಿಕಾರಿಗಳ ಸ್ವೀಕೃತಿ

ಪಾಕಿಸ್ತಾನಕ್ಕೆ ಪುನಃ ಮುಖಭಂಗ ! ನವ ದೆಹಲಿ : ಭಾರತೀಯ ಸೈನ್ಯವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೆ  ಭಯೋತ್ಪಾದಕರೊಂದಿಗೆ ೫ ಪಾಕಿಸ್ತಾನಿ ಸೈನಿಕರೂ ಹತರಾಗಿದ್ದಾರೆಂದು ಪಾಕ್ ಆಕ್ರಮಿತ ಕಾಶ್ಮೀರದ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಅವರು ಆಂಗ್ಲ ವಾಹಿನಿಯೊಂದಕ್ಕೆ ಇದರ ಮಾಹಿತಿ ಯನ್ನು ನೀಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದ ಮೀರಪುರದ ವಿಶೇಷ ಪೊಲೀಸ್ ದಳದ ಅಧೀಕ್ಷಕರಾದ ಗುಲಾಮ ಅಕ್ಬರ ಇವರು ಮಾತನಾಡುತ್ತಾ, ಪಾಕಿಸ್ತಾನಿ ಅಧಿಕಾರಿಗಳಿಗೆ ಇದರ ಕಲ್ಪನೆ ಹಾಗೂ ಮಾಹಿತಿಯೂ ಇರಲಿಲ್ಲ. ಇದರಲ್ಲಿ ೫ ಸೈನಿಕರೂ ಹತರಾಗಿದ್ದಾರೆ. ಬಳಿಕ ಪಾಕಿಸ್ತಾನಿ ಸೈನ್ಯ ಭಯೋತ್ಪಾದಕರ ಮೃತದೇಹಗಳನ್ನು ತಕ್ಷಣವೇ ಅಲ್ಲಿಂದ ಸಾಗಿಸಿದೆ. ಭಾರತವು ಸರ್ಜಿಕಲ್ ಸ್ಟ್ರೈಕ್ ಮಾಡಿದ ಬಳಿಕ ಪಾಕಿಸ್ತಾನಿ ಸೈನ್ಯವು ಸಂಪೂರ್ಣ ಪ್ರದೇಶವನ್ನು ಆಕ್ರಮಿಸಿತ್ತು. ಎಲ್ಲ ಮೃತದೇಹಗಳನ್ನು ಶವವಾಹನದಲ್ಲಿ ಒಯ್ಯಲಾಯಿತು. ಹತ್ತಿರದ ತಾಲೂಕಿ ನಲ್ಲಿ ಈ ಎಲ್ಲ ಮೃತದೇಹಗಳನ್ನು ಹೂಳಲಾಯಿತು. ರಾತ್ರಿ ೨ ರಿಂದ ಮುಂಜಾನೆ ೪ ರಿಂದ ೫ ಗಂಟೆಯವರೆಗೆ ಅಂದರೆ ೩-೪ ಗಂಟೆಗಳ ವರೆಗೆ ಆಕ್ರಮಣ ಮುಂದುವರಿದಿತ್ತು ಎಂದೂ ಅವರು ತಿಳಿಸಿದ್ದಾರೆ.

ದೂರದರ್ಶನವಾಹಿನಿಯಲ್ಲಿ ನಡೆಯುವ ಚರ್ಚಾಕೂಟದಲ್ಲಿ ಮತಾಂಧ ಸುಧಾರಣಾವಾದಿ ಇಮಾಮ್ ಮೇಲೆ ಚಪ್ಪಲಿ ಎಸೆತ

ಮತಾಂಧರು ಎಂದಿಗೂ ಅವರ ಧರ್ಮದ ಸುಧಾರಣೆಯ ಕುರಿತು ಒಪ್ಪುವುದಿಲ್ಲ ಎನ್ನುವುದನ್ನು ಗಮನಿಸಬೇಕು !

ಸಿಡ್ನಿ : ಒಂದು ದೂರದರ್ಶನ ವಾಹಿನಿಯಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ‘ಮುಸಲ್ಮಾನ ಮಹಿಳೆಯರು ತಲೆಯ ಮೇಲೆ ಸ್ಕಾರ್ಫ್ ಕಟ್ಟಿಕೊಳ್ಳ ಬೇಕೇ ? ಬೇಡವೇ ?’ ಎನ್ನುವ ವಿಷಯದಲ್ಲಿ ಚರ್ಚೆ ನಡೆದಿರುವಾಗ ಚರ್ಚೆಯಲ್ಲಿ ಭಾಗವಹಿಸಿದ್ದ ರಶಿಯಾದ ಮತಾಂಧ ನ್ಯಾಯವಾದಿ ನಬೀಹ-ಅಲ-ವಹಶಾ, ಸುಧಾರಣಾವಾದಿ ಇಮಾಮ್ ಮುಸ್ತಫಾ ರಾಶಿದ ಇವರಿಗೆ ಚಪ್ಪಲಿ ಎಸೆದು ಹೊಡೆದನು.

Read moreದೂರದರ್ಶನವಾಹಿನಿಯಲ್ಲಿ ನಡೆಯುವ ಚರ್ಚಾಕೂಟದಲ್ಲಿ ಮತಾಂಧ ಸುಧಾರಣಾವಾದಿ ಇಮಾಮ್ ಮೇಲೆ ಚಪ್ಪಲಿ ಎಸೆತ

ಭಾರತೀಯ ಸೈನಿಕರ ಶಿರಚ್ಛೇದ ಮಾಡಲು ಪಾಕಿಸ್ತಾನದಿಂದ ಭಯೋತ್ಪಾದಕರ ವಿಶೇಷ ದಳ !

ಭಯೋತ್ಪಾದಕರಿಂದ ಭಾರತೀಯ ಸೈನಿಕರ ಶಿರಚ್ಛೇದನವಾಗುವ ಮೊದಲೇ ಭಾರತ ಸರಕಾರವು ತನ್ನ ವಶದಲ್ಲಿರುವ ಭಯೋತ್ಪಾದಕರನ್ನು ಗಲ್ಲಿಗೇರಿಸಿ ಭಯೋತ್ಪಾದಕರಲ್ಲಿ ಭಯ ಹುಟ್ಟಿಸಬೇಕೆನ್ನುವುದೇ ಜನಸಾಮಾನ್ಯರ ಅಪೇಕ್ಷೆಯಾಗಿದೆ ! ನವ ದೆಹಲಿ : ಭಾರತೀಯ ಸೈನಿಕರ ಶಿರಚ್ಛೇದನ ಮಾಡಲು ಪಾಕಿಸ್ತಾನವು ಭಯೋತ್ಪಾದಕರ ‘ಬಾರ್ಡರ್ ಆ್ಯಕ್ಷನ್ ಟೀಮ್’ ಹೆಸರಿನ ಒಂದು ವಿಶೇಷ ದಳವನ್ನು ರಚಿಸಿದೆ. ಅವರಿಗೆ ಇದಕ್ಕಾಗಿ ತರಬೇತಿಯನ್ನೂ ನೀಡಲಾಗಿದೆ. ಈ ದಳವು ಸೈನಿಕರು ಕಾವಲು ಕಾಯುತ್ತಿರುವ ಸ್ಥಳಗಳಲ್ಲಿ ಹಾಗೂ ಪೂಂಛ್ ಜಿಲ್ಲೆಯ ಕೇಜಿ ಸೆಕ್ಟರ್ ನಲ್ಲಿಯೂ ಸಕ್ರಿಯವಾಗಿದೆ.

ಅಮೇರಿಕದಲ್ಲಿ ೧೮ ರಿಂದ ೩೪ ವಯಸ್ಸಿನ ನಾಗರಿಕರು ಪಾಲಕರೊಂದಿಗೆ ಇರುವ ಪ್ರಮಾಣದಲ್ಲಿ ಹೆಚ್ಚಳ !

ಭಾರತೀಯ ಕುಟುಂಬಪದ್ಧತಿಯನ್ನು ಅವಹೇಳನೆ ಮಾಡಿ
ಪಾಶ್ಚಾತ್ಯರ ಜೀವನಶೈಲಿಯನ್ನು ಸ್ವೀಕರಿಸುವ ಭಾರತೀಯರಿಗೆ ತಪರಾಕಿ !

ಅಮೇರಿಕದ ಯುವಕರಲ್ಲಿ ಕೌಟುಂಬಿಕ ಜೀವನದ ಬಗ್ಗೆ ಹೆಚ್ಚುತ್ತಿರುವ ಸೆಳೆತ !

ವಾಶಿಂಗ್ಟನ್ : ಆಧುನಿಕ ಇತಿಹಾಸದಲ್ಲಿ ಮೊದಲ ಬಾರಿಗೆ ೧೮ ರಿಂದ ೩೪ ವಯಸ್ಸಿನ ಬಹುಸಂಖ್ಯಾತ ಅಮೇರಿಕನ್ನರು ತಮ್ಮ ಪ್ರೇಮಿಗಳೊಡನೆ ಇರುವುದನ್ನು ಬಿಟ್ಟು ಪಾಲಕರೊಂದಿಗೆ ಇರಲು ಇಷ್ಟ ಪಡುತ್ತಿದ್ದಾರೆ, ಎಂದು ಪ್ಯೂ ರೀಸರ್ಚ್ ಸೆಂಟರ್ ಮಾಡಿದ ಹೊಸ ಜನಗಣನೆಯಲ್ಲಿ ಕಂಡುಬಂದಿದೆ. ಹಿಂದಿನ ಪೀಳಿಗೆಗಿಂತ ಈಗಿನ ಪೀಳಿಗೆಯಲ್ಲಿ ವಿವಾಹದ ಪ್ರಮಾಣವು ಕಡಿಮೆಯಾಗಿದೆ. ೨೦೧೪ ರ ಅಂಕಿಅಂಶಕ್ಕನುಸಾರ ಈ ವಯೋಮಾನದ ಶೇ. ೩೨.೧ ರಷ್ಟು ನಾಗರಿಕರು ಪಾಲಕರೊಂದಿಗೆ ಇರುತ್ತಾರೆ ಹಾಗೂ ಶೇ. ೩೧.೬ ರಷ್ಟು ನಾಗರಿಕರು ಪತಿ-ಪತ್ನಿ ಅಥವಾ ಪ್ರೇಮಿಗಳೊಡನೆ ವಾಸಿಸುತ್ತಿದ್ದಾರೆ.

Read moreಅಮೇರಿಕದಲ್ಲಿ ೧೮ ರಿಂದ ೩೪ ವಯಸ್ಸಿನ ನಾಗರಿಕರು ಪಾಲಕರೊಂದಿಗೆ ಇರುವ ಪ್ರಮಾಣದಲ್ಲಿ ಹೆಚ್ಚಳ !

ಬಾಲಿವುಡ್ ಯಾರಪ್ಪನದ್ದಲ್ಲ (ಅಂತೆ)! ಪಾಕಿಸ್ತಾನಿ ನಟ ಫವಾದ ಖಾನ್‌ನ ಬಣ್ಣ ಬಯಲು !

ಪಾಕಿಸ್ತಾನದ ಕಲಾವಿದರನ್ನು ಬೆಂಬಲಿಸುವ ಭಾರತೀಯರು ಈಗ ಬಾಯಿ ತೆರೆಯುವರೇ ? ಮುಂಬಯಿ : ಚಲನಚಿತ್ರ ನಿರ್ಮಾಪಕರ ಸಂಘಟನೆ ಇಂಡಿಯನ್ ಮೋಶನ್ ಪಿಕ್ಚರ್ಸ್ ಅಸೋಸಿಯೇಶನ್ (ಇಂಪಾ) ಪಾಕಿಸ್ತಾನ ಕಲಾವಿದರ ಮೇಲೆ ನಿಷೇಧ ಹೇರಿದೆ. ಈ ನಿರ್ಧಾರದ ವಿರುದ್ಧ ಪಾಕಿಸ್ತಾನಿ ನಟ ಫವಾದ ಖಾನನು ಬಾಲಿವುಡ್ ಯಾರಪ್ಪನ್ನದ್ದಲ್ಲ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿರುವುದಾಗಿ ಸ್ಪಾಟ್‌ಬಾಯ್ ಜಾಲತಾಣವು ಸುದ್ದಿ ನೀಡಿದೆ. ಈ ವಿಷಯವನ್ನು ‘ಇಂಪಾ’ ಇದರ ಅಧ್ಯಕ್ಷ ಹಾಗೂ ನಿರ್ಮಾಪಕ ಅಗರವಾಲ ಇವರು ದೃಢಪಡಿಸಿ, ಫವಾದ ಖಾನನ ಈ ಹೇಳಿಕೆಯ ಬಗ್ಗೆ ಅಗರವಾಲ … Read more

ಪಾಕಿಸ್ತಾನದಲ್ಲಿರುವ ಅಣ್ವಸ್ತ್ರಗಳು ಜಿಹಾದಿಗಳ ವಶವಾಗುವ ಸಾಧ್ಯತೆ ! – ಹಿಲರಿ ಕ್ಲಿಂಟನ್‌

ಪಾಕಿಸ್ತಾನದಲ್ಲಿರುವ ಜಿಹಾದಿಗಳಿಗೆ ಅಣುಬಾಂಬ್ ದೊರೆತು ಅದನ್ನು ಭಾರತದ ಮೇಲೆ ಹಾಕಿದರೆ ಅದನ್ನು ಎದುರಿಸುವ ಕ್ಷಮತೆ ಭಾರತಕ್ಕಿದೆಯೇ ? ವಾಶಿಂಗ್ಟನ್ : ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ಕಣದಲ್ಲಿರುವ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಇವರು ಪಾಕಿಸ್ತಾನದಲ್ಲಿರುವ ಅಣ್ವಸ್ತ್ರಗಳು ಜಿಹಾದಿಗಳ ವಶವಾಗುವ ಸಾಧ್ಯತೆಗಳಿವೆ ಮತ್ತು ಇದರಿಂದ ಭೀಕರ ಪರಿಸ್ಥಿತಿ ಉದ್ಭವಿಸಬಹುದೆಂದು ಭಯ ವ್ಯಕ್ತಪಡಿಸಿದ್ದಾರೆ. ಹಿಲರಿ ಕ್ಲಿಂಟನ್ ಇವರು ವರ್ಜಿನಿಯಾದಲ್ಲಿ ಚುನಾವಣೆಯ ನಿಧಿ ಸಂಗ್ರಹಕ್ಕಾಗಿ ಏರ್ಪಡಿಸಿದ್ದ ಖಾಸಗಿ ಸಭೆಯಲ್ಲಿ ಮಾತನಾಡುವಾಗ, ಭಾರತದೊಂದಿಗೆ ವೈರತ್ವವನ್ನು ಸಾಧಿಸಿರುವ ಪಾಕಿಸ್ತಾನವು ಅಣ್ವಸ್ತ್ರಗಳ ನಿರ್ಮಾಣ ಕಾರ್ಯಕ್ಕೆ … Read more

ಪಾಕಿಸ್ತಾನದಲ್ಲಿ ಭಾರತೀಯ ದೂರದರ್ಶನ ವಾಹಿನಿಗಳಿಗೆ ನಿಷೇಧ !

ಪಾಕಿಸ್ತಾನವನ್ನು ಸಮರ್ಥಿಸುವವರು ಈಗ ಬಾಯಿ ತೆರೆಯುವರೇ ? ನವ ದೆಹಲಿ : ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಪಾಕಿಸ್ತಾನದ ಕಲಾವಿದರನ್ನು ನಿಷೇಧಿಸಿದ ಬಳಿಕ ಪಾಕಿಸ್ತಾನವು ಭಾರತೀಯ ದೂರದರ್ಶನ ವಾಹಿನಿಗಳ ಪ್ರಸಾರಗಳನ್ನು ನಿಷೇಧಿಸಿದೆ. ಪಾಕಿಸ್ತಾನ ಇಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿಯು, ಅಕ್ಟೋಬರ್ ೧೫ ರ ಬಳಿಕ ಈ ಆದೇಶವನ್ನು ಪಾಲಿಸದಿರುವವರ ಮೇಲೆ ಕಠಿಣ ಕ್ರಮವನ್ನು ಜರುಗಿಸಲಾಗುವುದೆಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪಾಕಿಸ್ತಾನದ ಚಲನಚಿತ್ರ ಮಂದಿರಗಳಲ್ಲಿಯೂ ಭಾರತೀಯ ಚಲನಚಿತ್ರಗಳ ಪ್ರದರ್ಶನಗಳನ್ನು ನಿಷೇಧಿಸಲಾಗಿದೆ.

ಭಾರತೀಯ ಮೂಲದ ಜಿತೇಶ ಗಡಿಯಾ ಇವರಿಂದ ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಋಗ್ವೇದದ ಮೇಲೆ ಕೈಯಿಟ್ಟು ಶಪಥ !

ಜಿತೇಶ ಗಡಿಯಾರಿಗೆ ಅಭಿನಂದನೆ ! ಬ್ರಿಟನ್ : ಭಾರತೀಯ ಮೂಲದ ಜಿತೇಶ ಗಡಿಯಾ ಇವರು ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಭಾರತದ ಪ್ರಾಚೀನ ವೈದಿಕ ಗ್ರಂಥ ಋಗ್ವೇದದ ಮೇಲೆ ಕೈಯಿಟ್ಟು ಶಪಥವನ್ನು ಸ್ವೀಕರಿಸಿದರು. ಇವರು ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್‌ನ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಬ್ರಿಟನ್ ಸಂಸತ್ತಿನಲ್ಲಿ ಹೊಸ ಸದಸ್ಯರಿಗೆ ಶಪಥವನ್ನು ಸ್ವೀಕರಿಸುವಾಗ ಬೈಬಲ್ ಜೊತೆಗೆ ಇತರ ಯಾವುದಾದರೊಂದು ಧಾರ್ಮಿಕ ಗ್ರಂಥ ಆರಿಸಲು ಅನುಮತಿಯಿದೆ.

Kannada Weekly | Offline reading | PDF