ಪ್ರಧಾನಿ ಮೋದಿ ಅವರ ಪಂಜಾಬಿನ ಭದ್ರತೆಯ ಪ್ರಕರಣದಲ್ಲಿ ಎಲ್ಲಾ ದಾಖಲೆಗಳನ್ನು ಸೀಲ್ ಮಾಡಲು ಸರ್ವೋಚ್ಚ ನ್ಯಾಯಾಲಯದ ಆದೇಶ

ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬಿನ ಪ್ರವಾಸದ ಸಮಯದಲ್ಲಿ ಭದ್ರತಾ ಲೋಪದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಪ್ರವಾಸದ ದಾಖಲೆ ಮತ್ತು ತನಿಖಾ ದಳಕ್ಕೆ ಸಿಕ್ಕಿರುವ ಸಾಕ್ಷಿಗಳನ್ನು ಸುರಕ್ಷಿತವಾಗಿ ಇಡುವಂತೆ ಆದೇಶಿಸಿದೆ.

ಪ್ರಧಾನಿ ಮೋದಿಯವರ ಪ್ರವಾಸದಲ್ಲಿನ ಅಕ್ಷಮ್ಯತಪ್ಪು ಎಂದರೆ ಯೋಜನಾಬದ್ಧವಾಗಿ ಹೆಣೆದ ಷಡ್ಯಂತ್ರ ! ಮಾಜಿ ಪೊಲೀಸ ಮಹಾನಿರ್ದೆಶಕರಿಂದ ರಾಷ್ಟ್ರಪತಿಗಳಿಗೆ ಪತ್ರ

ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ ಪ್ರವಾಸದ ಸಮಯದಲ್ಲಿ ಭದ್ರತಾ ಲೋಪದಲ್ಲಾದ ಅಕ್ಷಮ್ಯ ತಪ್ಪಿಗಾಗಿ ಭಾರತದಲ್ಲಿನ 16 ಮಾಜಿ ಪೊಲೀಸ್ ಮಹಾನಿರ್ದೆಶಕರು ಮತ್ತು ಭಾರತೀಯ ಪೊಲೀಸ್ ಸೇವೆಯಲ್ಲಿನ ನಿವೃತ್ತ ಅಧಿಕಾರಿಗಳು ರಾಷ್ಟ್ರಪತಿ ರಾಮನಾಥ ಕೋವಿಂದ ಇವರಿಗೆ ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಸಿದ್ದಾರೆ.

ಮಹಿಳೆಯ ಕೂದಲಿನ ಮೇಲೆ ಉಗಳಿದ ಪ್ರಕರಣದಲ್ಲಿ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಕ್ಷಮಾಯಾಚನೆ !

ಪ್ರಸಿದ್ಧ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಇವನು ಒಂದು ಕಾರ್ಯಾಗಾರದಲ್ಲಿ ಮಹಿಳೆಯ ಕೂದಲಿನ ಮೇಲೆ ಉಗಳಿದ ಪ್ರಕರಣದಲ್ಲಿ ಅವನ ಮೇಲೆ ಮುಜಫ್ಫರನಗರ (ಉತ್ತರಪ್ರದೇಶ)ದಲ್ಲಿ ದೂರು ದಾಖಲಿಸಲಾಗಿದೆ.

ಉತ್ತರಾಖಂಡದ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಹರೀಶ ರಾವತರವರ ಸಭೆಯಲ್ಲಿ ಚಾಕು ತಂದಿರುವ ಯುವಕನ ಬಂಧನ !

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ ರಾವತರವರು ಕಾಶಿಪುರದಲ್ಲಿನ ಒಂದು ಸಭೆಯಲ್ಲಿ ಉಪಸ್ಥಿತರಿರುವಾಗ ಓರ್ವ ತರುಣನು ಚಾಕು ಹಿಡಿದು ನೇರವಾಗಿ ಸಭಾಮಂಟಪದ ಮೇಲೆ ಬಂದಿರುವ ಘಟನೆ ನಡೆದಿದೆ.

ಪುರಿಯಲ್ಲಿನ ಶ್ರೀ ಜಗನ್ನಾಥ ದೇವಸ್ಥಾನದ ಭೂಮಿಯನ್ನು ಸರಕಾರಿ ಅಧಿಕಾರಿಗಳು ಮಾರಾಟ ಮಾಡಬಹುದು!

ಸರಕಾರಿ ಅಧಿಕಾರಿಯು ಭ್ರಷ್ಟನಾಗಿದ್ದರೆ ಅವನು ಭ್ರಷ್ಟ ಮಾರ್ಗವನ್ನು ಅವಲಂಬಿಸಿ ದೇವಸ್ಥಾನದ ಭೂಮಿಯ ಮಾರಾಟ ಮಾಡಿ ಹಣ ಸಂಗ್ರಹಣೆ ಮಾಡುವನು ! ಇಂತಹ ಕಾನೂನುಗಳನ್ನು ಭಾವಿಕರು ಕಾನೂನುಬದ್ಧ ಮಾರ್ಗದಿಂದ ವಿರೋಧಿಸುವುದು ಅವಶ್ಯಕವಾಗಿದೆ !

ಕೋಟ್ಯಂತರ ಭ್ರಷ್ಟಾಚಾರ ಮಾಡಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ! – ವಿರೋಧಕರ ಆರೋಪ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇವರ ‘ಪಾಕಿಸ್ತಾನ ತಹರಿಕ ಏ ಇನ್ಸಾಫ್’ ಈ ಪಕ್ಷವು ವಿದೇಶಿ ನಾಗರೀಕ ಮತ್ತು ಕಂಪನಿಗಳಿಂದ ಸಿಕ್ಕಿರುವ ಪಕ್ಷ ನಿಧಿಯ ಸಂಪೂರ್ಣ ಮಾಹಿತಿ ದೇಶದ ಚುನಾವಣೆ ಆಯೋಗಕ್ಕೆ ನೀಡಿಲ್ಲ.

ಕ್ಷೌರಿಕ ಜಾವೇದ್ ಹಬಿಬ ಕೇಶ ವಿನ್ಯಾಸ ಮಾಡಿಸಿ ಬಂದ ಮಹಿಳೆಯ ತಲೆಯ ಮೇಲೆ ಉಗಳಿದ !

ಪ್ರಸಿದ್ಧ ಕೇಶ ವಿನ್ಯಾಸಕ (ಹೇರ್ ಸ್ಟೈಲಿಸ್ಟ್) ಜಾವೇದ್ ಹಬೀಬ್ ಇವನ ಕಾರ್ಯಾಗಾಋವನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಓರ್ವ ಮಹಿಳೆಯ ತಲೆಯ ಮೇಲೆ ಉಗುಳಿದ್ದರಿಂದ ವಿವಾದ ನಿರ್ಮಾಣವಾಯಿತು.

ಪ್ರಧಾನಿ ಮೋದಿಯವರ ಭದ್ರತಾ ಲೋಪದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು !

ಪಂಜಾಬಿನ ಫಿರೋಜಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಅಕ್ಷಮ್ಯ ತಪ್ಪಿನ ಕುರಿತು ಕೇಂದ್ರೀಯ ಗೃಹ ಸಚಿವಾಲಯವು ಪಂಜಾಬ ಸರಕಾರದಿಂದ ವರದಿ ಕೇಳಿದೆ ಹಾಗೂ ಇನ್ನೊಂದೆಡೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಮಹಾರಾಷ್ಟ್ರದಿಂದ ಶೇ. ೦.೩೨ ರಷ್ಟು ಕೇಂದ್ರದ ನಿಧಿಯಷ್ಟೇ ಬಳಕೆ

ಕೊರೊನಾದ ಮೂರನೆಯ ಅಲೆ ತಡೆಯಲು ಕೇಂದ್ರ ಸರಕಾರವು ಮಹಾರಾಷ್ಟ್ರ ಸರಕಾರಕ್ಕೆ ನೀಡಿರುವ ನಿಧಿಯನ್ನು ಖರ್ಚು ಮಾಡಲಿಲ್ಲ, ಎಂದು ‘ಪಿಐಬಿ’ವು (ಪ್ರೆಸ್ ಇನ್ಫರ್ಮೇಶನ್ ಬ್ಯೂರೋ – ಮಾಹಿತಿ ಮತ್ತು ಪ್ರಸಾರಣ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಸಂಸ್ಥೆ) ಹೇಳಿದೆ.

ಒಡಿಶಾದ ಬಿಜು ಜನತಾ ದಳದ ಸರಕಾರದಿಂದ ಮದರ್ ತೆರೇಸಾದ ‘ಮಿಶನರಿಸ್ ಆಫ್ ಚಾರಿಟಿ’ ಸಂಸ್ಥೆಗೆ ೭೮ ಲಕ್ಷ ೭೬ ಸಾವಿರ ರೂಪಾಯಿ ಸಹಾಯ

ಒಡಿಶಾದ ಮುಖ್ಯಮಂತ್ರಿ ಮತ್ತು ಬಿಜು ಜನತಾ ದಳದ ಅಧ್ಯಕ್ಷ ನವೀನ್ ಪಟ್ನಾಯಕ್ ಇವರು ಮದರ್ ತೆರೇಸಾ ಅವರು ಸ್ಥಾಪಿಸಿದ್ದ ‘ಮಿಶನರಿಸ್ ಆಫ್ ಚಾರಿಟಿ’ಯಿಂದ ನಡೆಸಲಾಗುವ ೧೩ ಸಂಸ್ಥೆಗಳಿಗೆ ಮುಖ್ಯಮಂತ್ರಿ ಸಹಾಯ ನಿಧಿಯಿಂದ ಆರ್ಥಿಕ ಸಹಾಯ ನೀಡುವಾಗ ೭೮ ಲಕ್ಷ ೭೬ ಸಾವಿರ ರೂಪಾಯಿ ನೀಡಿದೆ.