ವಿಜಯದಶಮಿಯ ದಿನದಂದು ಮಾಡುವಂತಹ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ

ಈ ದಿನ ರಾಜರು, ಸಾಮಂತರು, ಸರದಾರರು ತಮ್ಮ ತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ.

ಹಿಂದೂಗಳೇ, ವಿಜಯದಶಮಿಯ ಐತಿಹಾಸಿಕ ಮತ್ತು ಧಾರ್ಮಿಕ ಮಹಾತ್ಮೆ ನಿಮಗೆ ತಿಳಿದಿದೆಯೇ ?

‘ರಾಮನ ಪೂರ್ವಜ ಮತ್ತು ಅಯೋಧ್ಯೆಯ ರಾಜನಾದ ರಘುವು ವಿಶ್ವಜಿತ ಯಜ್ಞವನ್ನು ಮಾಡಿದನು. ಅವನು ತನ್ನ ಎಲ್ಲ ಸಂಪತ್ತನ್ನು ದಾನಮಾಡಿ ಒಂದು ಪರ್ಣಕುಟೀರದಲ್ಲಿ ವಾಸಿಸತೊಡಗಿದನು. ಒಂದು ದಿನ ಕೌತ್ಸನು ಅವನ ಪರ್ಣ ಕುಟೀರಕ್ಕೆ ಬಂದನು. ಅವನಿಗೆ ಗುರುದಕ್ಷಿಣೆ ಕೊಡಲು ೧೪ ಕೋಟಿ ಸುವರ್ಣಮುದ್ರೆಗಳು ಬೇಕಾಗಿದ್ದವು. ರಘುವು ಕುಬೇರನ ಮೇಲೆ ಆಕ್ರಮಣ ಮಾಡಲು ಸಿದ್ಧನಾದನು.