ಪುರುಷರು ವೈರಾಗ್ಯರೂಪಿ ಶಿವತತ್ತ್ವದ ಪ್ರತೀಕವಾಗಿದ್ದಾರೆ, ಆದುದರಿಂದ ಪುರುಷರು ಸಾಮಾನ್ಯವಾಗಿ ಆಭರಣಗಳನ್ನು ಧರಿಸುವುದಿಲ್ಲ

ಪುರುಷರು ಮಾಯಾರೂಪಿ ಅಗಾಧ ವ್ಯಾಪ್ತಿಯಲ್ಲಿರುವ ವೈರಾಗ್ಯರೂಪಿ ಶಿವತತ್ತ್ವದ ಪ್ರತೀಕವಾಗಿರುತ್ತಾರೆ. ವೈರಾಗ್ಯ ಸ್ವರೂಪ ಶಿವತತ್ತ್ವ್ವವು ಮಾಯೆಯನ್ನು ಅವಲಂಬಿಸಿ ಕಾರ್ಯ ಮಾಡುತ್ತದೆ. ಆದರೆ ಅದು ಮಾಯೆಯ ಸ್ವರೂಪವನ್ನು ತನ್ನಲ್ಲಿ ಆಕರ್ಷಿಸಿಕೊಳ್ಳುವುದಿಲ್ಲ. ಆಭರಣಗಳು ಆಕರ್ಷಣೆಯ ಪ್ರತೀಕವಾಗಿರುವುದರಿಂದ ಪುರುಷರು ಸಾಮಾನ್ಯವಾಗಿ ಆಭರಣಗಳನ್ನು ಧರಿಸುವುದಿಲ್ಲ.

ಸ್ತ್ರೀಯರು ಆಭರಣಗಳನ್ನು ಧರಿಸುವುದರ ಮಹತ್ವ ಮತ್ತು ಲಾಭಗಳು

ಆಭರಣಗಳಲ್ಲಿನ ತೇಜದಿಂದ ಸ್ತ್ರೀಯರಲ್ಲಿನ ಸ್ತ್ರೀತ್ವ, ಅಂದರೆ ರಜೋತತ್ತ್ವವು ಜಾಗೃತವಾಗುವುದು : ಆಭರಣಗಳು ರಜೋಗುಣೀ, ಹಾಗೆಯೇ ತೇಜದಾಯಿಯಾಗಿವೆ. ಈ ತೇಜವು ಸ್ತ್ರೀರೂಪ ದೇಹದಲ್ಲಿನ ರಜೋಗುಣದ ಕಾರ್ಯಕ್ಕೆ ಯೋಗ್ಯ ಮಾರ್ಗವನ್ನು ತೋರಿಸುತ್ತದೆ.

ಉಂಗುರ

ಉಂಗುರದಲ್ಲಿರುವ ಚೈತನ್ಯದಿಂದಾಗಿ ಬೆರಳಿನ ಮೃದುಭಾಗದ ಮೇಲೆ ಒತ್ತಡವಾಗಿ ಬಿಂದುಒತ್ತಡದ ಉಪಾಯವಾಗುತ್ತದೆ ಮತ್ತು ಅಲ್ಲಿನ ಕಪ್ಪು ಶಕ್ತಿಯ ಅಡಚಣೆಯು ದೂರವಾಗಿ ಪ್ರತಿಯೊಂದು ಬೆರಳಿನಲ್ಲಿ ಚೈತನ್ಯವು ತಲುಪುತ್ತದೆ.

ಮಂಗಳಸೂತ್ರ

ಮಂಗಳಸೂತ್ರವು ಅನಾಹತ ಚಕ್ರದವರೆಗಿದ್ದರೆ, ಅನಾಹತಚಕ್ರದ ಜಾಗೃತಿಯಿಂದ ನಿರ್ಮಾಣವಾಗುವ ಕ್ರಿಯಾಶಕ್ತಿಯ ರಜೋಗುಣೀ ಕಾರ್ಯವನ್ನು ತನ್ನಲ್ಲಿರುವ ಸತ್ತ್ವಗುಣದ ಸಹಾಯದಿಂದ ಲಯಗೊಳಿಸಿ ಸ್ತ್ರೀಯರನ್ನು ವೈರಾಗ್ಯದೆಡೆಗೆ, ಅಂದರೆ ಕಾರ್ಯವನ್ನು ಮಾಡಿಯೂ ಮಾಡದಂತಹ ಸ್ಥಿತಿಗೆ ಕೊಂಡೊಯ್ಯುತ್ತದೆ

ಮಂಗಳಸೂತ್ರವನ್ನು ಚಿನ್ನದ ತಂತಿಯಲ್ಲಿ ಕಟ್ಟಿಸಿರುವುದರಿಂದಾಗುವ ಲಾಭಗಳು

ಮಂಗಳಸೂತ್ರವನ್ನು ಚಿನ್ನದ ತಂತಿಯಲ್ಲಿ ಕಟ್ಟಿಸಿರುತ್ತಾರೆ. ಚಿನ್ನವು ಬ್ರಹ್ಮಾಂಡದಲ್ಲಿನ ತೊಂದರೆದಾಯಕ ಸ್ಪಂದನಗಳನ್ನು ತನ್ನಲ್ಲಿ ಜಾಗೃತವಾಗಿರುವ ತೇಜಶಕ್ತಿಯಿಂದ ನಾಶಗೊಳಿಸುತ್ತದೆ.

ವ್ಯಕ್ತಿತ್ವಕ್ಕನುಸಾರ ಆಭರಣಗಳ ಆಯ್ಕೆ :

ವ್ಯಕ್ತಿಯು ತನ್ನ ವ್ಯಕ್ತಿತ್ವಕ್ಕೆ ಪೂರಕವಾಗಿರುವ ಆಭರಣಗಳ ಆಯ್ಕೆಯನ್ನು ಮಾಡುತ್ತಾನೆ. ಸಾತ್ತ್ವಿಕ ವ್ಯಕ್ತಿಗಳು ಸಾತ್ತ್ವಿಕ ಆಭರಣ, ರಾಜಸಿಕ ವ್ಯಕ್ತಿಗಳು ರಾಜಸಿಕ ಆಭರಣ ಮತ್ತು ತಾಮಸಿಕ ವ್ಯಕ್ತಿಗಳು ತಾಮಸಿಕ ಆಭರಣಗಳ ಆಯ್ಕೆಯನ್ನು ಮಾಡುತ್ತಾರೆ.

‘ಆಭರಣ ಎಂಬ ಶಬ್ದದ ಉತ್ಪತ್ತಿ ಮತ್ತು ಅರ್ಥ

ಆಭರಣವೆಂದರೆ ಆಭೂಷಣ. ‘ಆಭೂಷಣ ಶಬ್ದಕ್ಕೆ ಸಂಬಂಧಿಸಿದ ‘ಆಭರಣ ಎಂಬ ಶಬ್ದವು ‘ಭೃ (ಭರ್) ಎಂಬ ಧಾತುವಿನಿಂದಾಗಿದೆ. ಇದರ ಅರ್ಥವು ‘ಶರೀರದ ಮೇಲೆ ಇಡುವುದು, ಇಟ್ಟುಕೊಳ್ಳುವುದು ಅಥವಾ ಏರಿಸುವುದು ಎಂದಾಗಿದೆ.

ಅಕ್ಷಯ ತದಿಗೆಯಂದು ಬಿಡಿಸುವ ಸಾತ್ತ್ವಿಕ ರಂಗೋಲಿಗಳು (೯-೫ ಚುಕ್ಕೆಗಳು)

(ರಂಗೋಲಿಗೆ ಸಾತ್ತ್ವಿಕ ಬಣ್ಣವನ್ನು ತುಂಬಿರಿ. ಹೆಚ್ಚಿನ ಮಾಹಿತಿಗಾಗಿ ಸನಾತನದ ಕಿರುಗ್ರಂಥ, ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ‘ಸಾತ್ತ್ವ್ವಿಕ ರಂಗೋಲಿಗಳು ಇದನ್ನು ಓದಿರಿ.)

ಆಭರಣಗಳನ್ನು ಖರೀದಿಸುವಾಗ ವಹಿಸಬೇಕಾದ ಕಾಳಜಿ

ಸನಾತನದ ಗ್ರಂಥಗಳಲ್ಲಿ ವಿವಿಧ ಆಭರಣಗಳ ಛಾಯಾಚಿತ್ರಗಳನ್ನು ಮತ್ತು ಅವುಗಳ ಬಗ್ಗೆ ಮಾಡಿದ ಸೂಕ್ಷ್ಮಜ್ಞಾನ ವಿಷಯದಲ್ಲಿನ ಪ್ರಯೋಗಗಳನ್ನು ನೀಡಲಾಗಿದೆ. ಅವುಗಳಿಂದ ಆಭರಣಗಳು ಸಾತ್ತ್ವಿಕವಾಗಿವೆಯೋ ಅಥವಾ ತಾಮಸಿಕವಾಗಿವೆಯೋ ಎಂಬುದು ಗೊತ್ತಾಗುತ್ತದೆ. ಯಾವಾಗಲೂ ಸಾತ್ತ್ವಿಕ ಆಭರಣಗಳನ್ನೇ ಖರೀದಿಸಿರಿ.

ಆಭರಣಗಳನ್ನು ಧರಿಸುವುದರ ಬಗ್ಗೆ ಕೆಲವು ವ್ಯಾವಹಾರಿಕ ಸೂಚನೆಗಳು

ಇದುವರೆಗಿನ ವಿವರಣೆಯಿಂದ ಆಭರಣಗಳ ಮಹತ್ವವು ಗಮನಕ್ಕೆ ಬಂದಿರಬಹುದು. ಆದುದರಿಂದ ಹೊರಗೆ ಹೋಗುವಾಗ ಧರಿಸಲು ಆಗದಿದ್ದರೂ, ಮನೆಯಲ್ಲಿರುವಾಗಲಾದರೂ ಧರ್ಮಶಾಸ್ತ್ರದಲ್ಲಿ ಹೇಳಿದ ರೀತಿಯಲ್ಲಿ ಒಂದೆರೆಡು ಆಭರಣಗಳನ್ನಾದರೂ ಧರಿಸಬೇಕು.

Kannada Weekly | Offline reading | PDF