ಪ್ರಧಾನಿ ನರೇಂದ್ರ ಮೋದಿಯವರು ಕನ್ಹಯ್ಯಾಲಾಲ್ ಹತ್ಯೆ ಬಗ್ಗೆ ಕಾಂಗ್ರೆಸ್ ಸರಕಾರದ ಕಿವಿ ಹಿಂಡಿದರು !
ಚಿತ್ತೋರ್‌ಗಢ (ರಾಜಸ್ಥಾನ) – ಕಾಂಗ್ರೆಸ್ ಸರಕಾರವು ಜನರ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ಸರಕಾರವನ್ನು ಕಿತ್ತುಗೆಯುವುದು ಅವಶ್ಯಕವಿದೆ. ಉದಯಪುರದಲ್ಲಿ ಕೆಲವು ತಿಂಗಳ ಹಿಂದೆ ಏನಾಯಿತು ಎಂದು ಯಾರೂ ಊಹಿಸಲಿಲ್ಲ. ಯಾವ ರಾಜಸ್ಥಾನದಲ್ಲಿ ಶತ್ರುಗಳ ಮೇಲೆ ವಿಶ್ವಾಸ ಘಾತದಿಂದ ಆಕ್ರಮಣ ಮಾಡುವ ಸಂಪ್ರದಾಯ ವಿಲ್ಲವೋ, ಆ ರಾಜಸ್ಥಾನದ ಭೂಮಿ ಮೇಲೆ ಒಬ್ಬ ಹೊಲಿಗೆ ಕೆಲಸ ಮಾಡುವ ವ್ಯಕ್ತಿಯ ಮೇಲೆ (ಕನ್ಹಯ್ಯಾಲಾಲ್ ಇವರ) ಬಟ್ಟೆ ಹೊಲಿಯುವ ಉದ್ದೇಶದಿಂದ ಬಂದು ಯಾವುದೇ ಹಿಂಜರಿಕೆಯಿಲ್ಲದೆ ಶಿರಚ್ಛೇದನ ಮಾಡಲಾಗಿದೆ. ಇದು ರಾಜಸ್ಥಾನದಲ್ಲಿ ನಡೆದ ದೊಡ್ಡ ಪಾಪವಾಗಿದೆ, ಎಂಬ ಶಬ್ದದಿಂದ ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಟೀಕಿಸಿದರು. ಅವರು ಇಲ್ಲಿ 7 ಸಾವಿರ ಕೋಟಿ ರೂಪಾಯಿಗಳ ಒಂದು ಪ್ರಕಲ್ಪದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.
#WATCH …उदयपुर में जो हुआ उसकी किसी ने कल्पना भी नहीं की थी… लोग कपड़े सिलवाने के बहाने आते हैं और बिना किसी डर या खौफ के दर्जी का गला काट देते हैं… इस मामले में भी कांग्रेस को वोट बैंक नजर आया। मैं कांग्रेस से पूछना चाहता हूं कि उदयपुर दर्जी हत्याकांड में कांग्रेस पार्टी… pic.twitter.com/EIpxjIL6X5
— ANI_HindiNews (@AHindinews) October 2, 2023
ಪ್ರಧಾನಿ ಮೋದಿ ಅವರು, ನಾನು ಅತ್ಯಂತ ದುಃಖ ಮನಸ್ಸಿನಿಂದ ಹೇಳುತ್ತಿದ್ದೇನೆ, ಯಾವಾಗ “ಅಪರಾಧದ ಕುರಿತು ಚರ್ಚೆಯಾಗುತ್ತದೆ ಆಗ ರಾಜಸ್ಥಾನವು ಮೊದಲ ಪ್ರಮಾಂಕಕ್ಕೆ ಬರುತ್ತದೆ. ಎಂದು ಹೇಳಿದರು.ಇವತ್ತು ಯಾವಾಗ ಅರಾಜಕತೆ, ಗಲಭೆ, ಕಲ್ಲು ತೂರಾಟ ಇತ್ಯಾದಿ ವಿಷಯಗಳ ಚರ್ಚೆ ಆಗುವುದು ಆಗ ರಾಜಸ್ಥಾನದ ಹೆಸರು ಕೆಡುತ್ತದೆ. ಮಹಿಳೆಯರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲಿನ ದೌರ್ಜನ್ಯದ ಘಟನೆಗಳಿಗೆ ರಾಜಸ್ಥಾನ ಅತ್ಯಂತ ಅಪಕೀರ್ತಿಯಾಗುತ್ತಿದೆ ಎಂದು ಹೇಳಿದರು.