ಬಂಗಾಲದ ಜಾದವಪುರ ಕಾಲೇಜಿನ ವಿದ್ಯಾರ್ಥಿ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಸಾವು

ಸಾವಿನ ಮೊದಲು ವಿದ್ಯಾರ್ಥಿಗೆ ಬೆತ್ತಲೆಗೊಳಿಸಿ ವಸತಿಗೃಹದ ಪ್ಯಾಸೇಜಿನಲ್ಲಿ ಸುತ್ತಿಸಿದರು !

ಮೃತ ವಿದ್ಯಾರ್ಥಿಯನ್ನು ರಾಗಿಂಗ್ ಮಾಡಿರುವ ೧೨ ವಿದ್ಯಾರ್ಥಿಗಳ ಬಂಧನ

ಕೋಲಕಾತಾ (ಬಂಗಾಲ) – ಬಂಗಾಲದಲ್ಲಿನ ಜಾದವಪುರ ಕಾಲೇಜಿನಲ್ಲಿ ಸ್ವಪ್ನದೀಪ ಕುಂಡು ಎಂಬ ೧೮ ವರ್ಷದ ಓರ್ವ ವಿದ್ಯಾರ್ಥಿ ವಸತಿಗೃಹದ ಕಟ್ಟಡದ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಸಾವಿನ ಮೊದಲು ಅವನಿಗೆ ರಾಗಿಂಗ ಮಾಡಿರುವುದು ಬೆಳಕಿಗೆ ಬಂದಿದೆ. ಅವನ ಸಾವಿನ ಕೆಲವು ನಿಮಿಷಗಳ ಹಿಂದೆ ಅವನಿಗೆ ವಸತಿಗೃಹದ ೭೦ ಸಂಖ್ಯೆಯ ಕೋಠಡಿಯಲ್ಲಿ ಬಟ್ಟೆ ಬಿಚ್ಚಲು ಅನಿವಾರ್ಯಗೊಳಿಸಿದ್ದರು. ಅದರ ನಂತರ ಎರಡನೇ ಅಂತಸ್ತಿನ ಪ್ಯಾಸೇಜಿನಲ್ಲಿ ಬೆತ್ತಲಾಗಿ ಸುತ್ತಾಡಿಸಿದರು. ಈ ಪ್ರಕರಣದಲ್ಲಿ ಪೊಲೀಸರು ೧೨ ಯುವಕರನ್ನು ಬಂಧಿಸಿದ್ದಾರೆ. ಇದರಲ್ಲಿ ವಿದ್ಯಾರ್ಥಿ ಮತ್ತು ಮಾಜಿ ವಿದ್ಯಾರ್ಥಿಗಳ ಸಮಾವೇಶವಿದೆ, ಅವರು ಕಾನೂನ ಬಾಹಿರವಾಗಿ ವಸತಿಗೃಹದಲ್ಲಿ ವಾಸಿಸುತ್ತಿದ್ದರು. ಸ್ವಪ್ನದೀಪ ಕೆಲವು ದಿನಗಳ ಹಿಂದೆ ಕಾಲೇಜಿನಲ್ಲಿ ಬಂಗಾಳಿ ಭಾಷೆಯ ವಿಭಾಗಕ್ಕೆ ಪ್ರವೇಶ ಪಡೆದಿದ್ದನು.

ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು, ಜಾದವಪುರದ ಕಾಲೇಜಿನಲ್ಲಿನ ಘಟನೆಯಿಂದ ನಮ್ಮ ಕಣ್ಣು ತೆರೆದಿದೆ. ನಾವು ವಿದ್ಯಾರ್ಥಿಗಳಿಗಾಗಿ ‘ಎಂಟಿ ರಾಗಿಂಗ್ ಹೆಲ್ಪಲೈನ್ ಸಂಖ್ಯೆ ಜಾರಿಗೊಳಿಸುತ್ತೇವೆ. ಇಂತಹ ಯಾವುದೇ ಘಟನೆ ಘಟಿಸಿದರು ತಕ್ಷಣ ಪೊಲೀಸರಿಗೆ 18003455678 ಗೆ ಸಂಪರ್ಕಿಸಿ. ಸಂಪರ್ಕ ಮಾಡಿರುವ ವ್ಯಕ್ತಿಯ ಗುರುತು ಬಹಿರಂಗಪಡಿಸಿವುದಿಲ್ಲ. ವಿದ್ಯಾರ್ಥಿಯ ಸಾವಿನ ತನಿಖೆ ಈಗ ಸಿಐಡಿ ಗೆ ಒಪ್ಪಿಸಲಾಗಿದೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಭಾಜಪದಿಂದ ಟೀಕೆ

ವಿದ್ಯಾರ್ಥಿಯ ಸಾವಿನ ಪ್ರಕರಣ ಬಂಗಾಲ ವಿಧಾನಸಭೆಯಲ್ಲಿ ಭಾಜಪದ ನಾಯಕ ಮತ್ತು ವಿರೋಧಿ ಪಕ್ಷದ ನಾಯಕರಾಗಿರುವ ಶುಭೆಂದು ಅಧಿಕಾರಿ ಇವರು ಉಪಸ್ಥಿತಗೊಳಿಸಿದರು. ಅವರು, ಕಾಲೇಜಗಳು ದೇಶದ್ರೋಹದ ಕೇಂದ್ರಗಳಾಗಿವೆ. ಅಲ್ಲಿ ಬಹಿರಂಗವಾಗಿ ಮಾದಕ ಪದಾರ್ಥಗಳು ಮತ್ತು ಮದ್ಯ ಸೇವನೆ ಮಾಡಲಾಗುತ್ತದೆ. ರಾಜ್ಯ ಸರಕಾರ ಕೇವಲ ಮುಕ ಪ್ರೇಕ್ಷಕರಾಗಿ ಉಳಿದಿದೆ ಎಂದು ಹೇಳಿದರು.

ರಾಗಿಂಗ್ ಅಂದರೆ ಏನು ?

ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ವಿದ್ಯಾರ್ಥಿಗೆ ಶಾರೀರಿಕ ಅಥವಾ ಮಾನಸಿಕ ಹಾನಿ ಆಗುತ್ತಿದ್ದರೆ ಅಥವಾ ಆಗುತ್ತಿರುವ ಸಾಧ್ಯತೆ ಇದ್ದರೆ ಅಥವಾ ಅವನಿಗೆ ಹೆದರಿಕೆ, ಆತಂಕ, ನಾಚಿಕೆ ಅಥವಾ ಕಿರುಕುಳ ಅನಿಸುವ ಭಾವನೆ ನಿರ್ಮಾಣವಾಗುತ್ತಿದ್ದರೆ ಅಂತಹ ದುರ್ವರ್ತನೆ ಮಾಡುವ ಅಥವಾ ಅಂತಹ ಯಾವುದೇ ಕೃತ್ಯ ಮಾಡುವುದು ಎಂದರೆ ‘ರಾಗಿಂಗ್’ ಅಂತ ಕಾನೂನಿನಲ್ಲಿ ವಿಶ್ಲೇಷಿಸಲಾಗಿದೆ.

ಸಂಪಾದಕರ ನಿಲುವು

* ಕಾಲೇಜಿಗೆ ವಿದ್ಯಾರ್ಥಿಗಳು ಕಲಿಯಲು ಬರುತ್ತಾರೆ. ಅಲ್ಲಿ ಅವರಿಗೆ ನೈತಿಕ ಶಿಕ್ಷಣ ನೀಡಿ ಅವರಿಗೆ ಯೋಗ್ಯ ಸಂಸ್ಕಾರ ನೀಡಿ ಅವರು ಒಬ್ಬ ಆದರ್ಶ ನಾಗರೀಕನನ್ನಾಗಿ ನೋಡುವುದು ಮಹತ್ವದ್ದಾಗಿರುತ್ತದೆ; ಆದರೆ ಇಂತಹ ಘಟನೆಗಳು ನಡೆಯುವುದು ಲಜ್ಜಾಸ್ಪದವಾಗಿದೆ. ಇದರಿಂದ ಕಾಲೇಜಿನ ಸ್ಥಿತಿ ಬಹಿರಂಗವಾತ್ತದೆ.