ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ‘ಅಮೃತ್ ಭಾರತ್ ರೈಲು ನಿಲ್ದಾಣ’ ಯೋಜನೆ ಉದ್ಘಾಟನೆ !

  • ದೇಶದ 1 ಸಾವಿರದ 309 ನಿಲ್ದಾಣಗಳ ಪುನರಾಭಿವೃದ್ಧಿ ಮಾಡಲಾಗುವುದು

  • ಮೊದಲ ಹಂತದಲ್ಲಿ 508 ನಿಲ್ದಾಣಗಳು

ನವ ದೆಹಲಿ – ಆಗಸ್ಟ್ 6 ರಂದು ಪ್ರಧಾನಿ ನರೇಂದ್ರ ಮೋದಿಯವರು ‘ಅಮೃತ್ ಭಾರತ್ ರೈಲು ನಿಲ್ದಾಣ’ ಯೋಜನೆಯನ್ನು ಉದ್ಘಾಟಿಸಿದರು. ಈ ಯೋಜನೆಯಡಿ ದೇಶಾದ್ಯಂತ ಸುಮಾರು 1 ಸಾವಿರದ 309 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು. ಈ ಯೋಜನೆಯ ಮೊದಲ ಹಂತದಲ್ಲಿ 508 ನಿಲ್ದಾಣಗಳನ್ನು ಸೇರ್ಪಡೆಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಮೋದಿಯವರು, ಈ ಯೋಜನೆಯಿಂದ ದೇಶದ ಎಲ್ಲಾ ರಾಜ್ಯಗಳಿಗೂ ಲಾಭವಾಗಲಿದೆ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಸುಮಾರು 4 ಸಾವಿರದ 500 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ 55 ಅಮೃತ್ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ರಾಜಸ್ಥಾನದ 55 ರೈಲು ನಿಲ್ದಾಣಗಳನ್ನು ಸಹ ಮರುನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

(ಸೌಜನ್ಯ – Vijay Karnataka | ವಿಜಯ ಕರ್ನಾಟಕ)

ಉತ್ತರ ರೈಲ್ವೆಯ 144 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು

ಈ ಯೋಜನೆಯಡಿಯಲ್ಲಿ ಉತ್ತರ ರೈಲ್ವೆಯ 144 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು. ಮೊದಲ ಹಂತದಲ್ಲಿ 71 ರೈಲು ನಿಲ್ದಾಣಗಳನ್ನು ಸೇರಿಸಲಾಗಿದೆ. ದೆಹಲಿ ವಿಭಾಗದ ಒಟ್ಟು 33 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು, ಈ ಪೈಕಿ ಮೊದಲ ಹಂತಕ್ಕೆ 14 ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ 30 ವರ್ಷಗಳನ್ನು ಪರಿಗಣಿಸಿ ಪುನರಾಭಿವೃದ್ಧಿ ಮಾಡಲಾಗುವುದು ಎಂದು ಉತ್ತರ ರೈಲ್ವೆ ಪ್ರಧಾನ ವ್ಯವಸ್ಥಾಪಕ ಶೋಭನ್ ಚೌಧರಿ ಹೇಳಿದ್ದಾರೆ. ಈ ಯೋಜನೆಯಡಿ ರೈಲು ನಿಲ್ದಾಣಗಳನ್ನು ನಗರದ ಕೇಂದ್ರವೆಂದು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 24 ಸಾವಿರದ 470 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.