ವೀರ್ ಸಾವರ್ಕರ್ ಅವರ ತ್ಯಾಗ, ಧೈರ್ಯ ಮತ್ತು ಸಂಕಲ್ಪ ಶಕ್ತಿಯ ಯಶೋಗಾಥೆ ಇಂದಿಗೂ ಸ್ಫೂರ್ತಿದಾಯಕ ! – ಪ್ರಧಾನಿ ನರೇಂದ್ರ ಮೋದಿ

ಸ್ವತಂತ್ರ ವೀರ ಸಾವರ್ಕರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ವಂದನೆ !

ನವದೆಹಲಿ – ಮೇ ೨೮ ರಂದು ಹೊಸ ಸಂಸತ್ ಭವನದಲ್ಲಿರುವ ಸ್ವತಂತ್ರ ವೀರ ಸಾವರ್ಕರ್ ಅವರ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ಅರ್ಪಣೆ ಮಾಡಿ ನಮನ ಸಲ್ಲಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಲಾದ್ ಜೋಶಿ, ಭಾಜಪದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಸದರು ಪುಷ್ಪ ಅರ್ಪಿಸಿದರು. ಪ್ರಧಾನಿ ಮೋದಿ ಅವರು ಆಕಾಶವಾಣಿಯಲ್ಲಿ ತಮ್ಮ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ಸ್ವತಂತ್ರ ವೀರ ಸಾವರ್ಕರ್ ಅವರ ಬಗ್ಗೆ ಮಾತನಾಡಿದರು. ವೀರ ಸಾವರ್ಕರ್ ಅವರ ತ್ಯಾಗ, ಧೈರ್ಯ ಮತ್ತು ಸಂಕಲ್ಪ ಶಕ್ತಿಯ ಯಶೋಗಾಥೆ ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತಿವೆ ಎಂದು ಅವರು ಹೇಳಿದರು. ಅವರ ವ್ಯಕ್ತಿತ್ವವು ವೀರತ್ವ ಮತ್ತು ಉದಾತ್ತತೆಯಿಂದ ತುಂಬಿತ್ತು. ಅವರ ನಿರ್ಭಯತೆ ಮತ್ತು ಸ್ವಾಭಿಮಾನದ ಸ್ವಭಾವವು ಗುಲಾಮಗಿರಿಯ ಮನಸ್ಥಿತಿಗೆ ಒಪ್ಪುತ್ತಿರಲಿಲ್ಲ ಎಂದು ಹೇಳಿದರು.