ಹೊಸ ಸಂಸತ್ ಭವನಕ್ಕೆ ತೆರಳಲು ಯತ್ನಿಸಿದ ಜಂತರ್‌ಮಂತರ್ ನಲ್ಲಿ ಪ್ರತಿಭಟಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ತಡೆದರು !

ನವ ದೆಹಲಿ – ಕಳೆದ ತಿಂಗಳಿನಿಂದ ಜಂತರ್ ಮಂತರ್‌ನಲ್ಲಿ ಭಾರತದ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಅವರ ವಿರುದ್ಧ ಕೆಲವು ಕುಸ್ತಿಪಟುಗಳು ಪ್ರತಿಭಟನೆ ಆರಂಭಿಸಿದ್ದಾರೆ. ಅವರ ಬೇಡಿಕೆಗಳಿಗೆ ಮನ್ನಣೆ ದೊರೆಯದ ಕಾರಣ ಮೇ ೨೮ ರಂದು ಸಂಸತ್ತಿಗೆ ತೆರಳಲು ಯತ್ನಿಸಿದನ್ನು ಪೊಲೀಸರು ತಡೆದರು. ಪೊಲೀಸರು ಈ ಕುಸ್ತಿಪಟುಗಳನ್ನು ವಶಕ್ಕೆ ಪಡೆದರು. ಹೀಗಾಗಿ ಇಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ಸಂಸತ್ ಭವನದ ಬಳಿ ಮಹಾ ಪಂಚಾಯತ್ ಆಯೋಜಿಸಲಾಗಿತ್ತು. ಮಹಿಳೆಯರೇ ಈ ಮಹಾ ಪಂಚಾಯತ್ತಿನ ನೇತೃತ್ವವನ್ನು ವಹಿಸಲಿದ್ದರು.