ಬ್ರಿಟನ್ ನಿಂದ ಕೊಹಿನೂರ ವಜ್ರವನ್ನು ಮರಳಿ ತರಲು ಭಾರತದಿಂದ ಕ್ರಮ !

ಕೊಹಿನೂರ್ ವಜ್ರ

ನವ ದೆಹಲಿ – ಬ್ರಿಟನ್ನಿನ ಅನೇಕ ವಸ್ತು ಸಂಗ್ರಹಾಲಯಗಳಲ್ಲಿ ಕೊಹಿನೂರ ವಜ್ರದಂತಹ ಅನೇಕ ಕಲಾಕೃತಿಗಳನ್ನು ಇಡಲಾಗಿದೆ. ಅವುಗಳನ್ನು ಮರಳಿ ಭಾರತಕ್ಕೆ ತರಬೇಕು ಎಂದು ಮೇಲಿಂದ ಮೇಲೆ ಬ್ರಿಟನ ಬಳಿ ಮನವಿಯನ್ನು ಮಾಡಲಾಗಿದೆ. ಇದರಲ್ಲಿ ಕೆಲವು ವಸ್ತುಗಳನ್ನು ಭಾರತಕ್ಕೆ ಮರಳಿಸಲಾಗಿದೆ. ಈಗ ಕೊಹಿನೂರ ಮತ್ತು ಇತರೆ ಮೂರ್ತಿಗಳನ್ನು ಮರಳಿ ಪಡೆಯಲು ಬ್ರಿಟನನೊಂದಿಗೆ ಚರ್ಚೆಯನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಸರಕಾರದಿಂದ `ಪ್ರತ್ಯಾರ್ಪಣ ಅಭಿಯಾನ’ ನಡೆಸಲಾಗಿದೆ. ಭಾರತೀಯ ಸಂಸ್ಕೃತಿ ಸಚಿವಾಲಯದ ಸಚಿವರಾದ ಗೋವಿಂದ ಮೋಹನ ಇವರು, ಈ ವಸ್ತುಗಳು ಭಾರತಕ್ಕೆ ಮರಳಿ ತರುವಲ್ಲಿ ಮೋದಿ ಸರಕಾರ ಪ್ರಾಧಾನ್ಯತೆ ನೀಡಿ ಪ್ರಯತ್ನಿಸುತ್ತಿದೆ. ಈ ವಸ್ತುಗಳನ್ನು ಮತ್ತು ಮೂರ್ತಿಗಳನ್ನು ತರುವುದು ಭಾರತದ ಧೋರಣೆಗಳ ದೃಷ್ಟಿಯಿಂದ ಮಹತ್ವದ ಭಾಗವಾಗಿದೆ.