ಬೃಜಭೂಷಣ ಶರಣ ಸಿಂಹ ಇವರ ಮೇಲೆ ದೂರು ದಾಖಲಿಸುವೆವು !

  • ಮಹಿಳಾ ಕುಸ್ತಿಪಟುವಿನ ಲೈಂಗಿಕ ಕಿರುಕುಳ ಪ್ರಕರಣ

  • ದೆಹಲಿ ಪೋಲಿಸರಿಂದ ನ್ಯಾಯಾಲಯಕ್ಕೆ ನೀಡಿದ ಮಾಹಿತಿ !

ನವ ದೆಹಲಿ – ಭಾರತೀಯ ಕುಸ್ತಿ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷ ಮತ್ತು ಭಾಜಪದ ಸಂಸದ ಬೃಜಭೂಷಣ ಶರಣ ಸಿಂಹ ಇವರ ಮೇಲೆ ನಿನ್ನೆ ಎಂದರೆ ಏಪ್ರಿಲ್ ೨೮ ರಂದು ದೂರು ನೀಡಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಮಾಹಿತಿ ನೀಡಿದರು. ೭ ಮಹಿಳಾ ಕುಸ್ತಿಪಟುಗಳು ಬೃಜಭೂಷಣ ಶರಣ ಸಿಂಹ ಇವರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ದೂರು ನೀಡಿದ್ದರು; ಆದರೆ ಮಹಾಸಂಘ ಮತ್ತು ಕ್ರೀಡಾ ಸಚಿವಾಲಯದಿಂದ ಇದರ ಕಡೆಗೆ ನಿರ್ಲಕ್ಷ ಮಾಡಿರುವುದರಿಂದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಪೊಲೀಸರಿಂದ ಈ ಮಾಹಿತಿ ನೀಡಲಾಯಿತು.

ಬೃಜಭೂಷಣ ಸಿಂಹ ಇವರಿಗೆ ಬಂದಿಸುವವರೆಗೆ ಆಂದೋಲನ ಮುಂದುವರೆಯುವುದು ! – ಕುಸ್ತಿಪಟುಗಳ ನಿರ್ಧಾರ

ಇನ್ನೊಂದು ಕಡೆಗೆ ಬೃಜಭೂಷಣ ಶರಣ ಸಿಂಹ ಇವರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ಇಲ್ಲಿಯ ಜಂತರಮಂತರದಲ್ಲಿ ಧರಣಿ ಆಂದೋಲನ ನಡೆಸುವ ಭಾರತೀಯ ಕುಸ್ತಿಪಟುಗಳು ಪತ್ರಿಕಾಗೋಷ್ಠೀ ನಡೆಸಿ, ಎಲ್ಲಿಯವರೆಗೆ ಬೃಜಭೂಷಣ ಶರಣ ಸಿಂಹ ಇವರನ್ನು ಅವರ ಹುದ್ದೆಯಿಂದ ಕೆಳಗಿಳಿಸುವುದಿಲ್ಲವೋ, ಅವರನ್ನು ಜೈಲಿಗೆ ಅಟ್ಟುವುದಿಲ್ಲ ಅಲ್ಲಿಯವರೆಗೆ ಆಂದೋಲನ ಮುಂದುವರೆಯುವುದು ಎಂದು ಹೇಳಿದರು. ಅವರು ಈ ಸ್ಥಾನದಲ್ಲಿ ಉಳಿದರೆ ಹುದ್ದೆಯ ದುರುಪಯೋಗ ಮಾಡಬಹುದು. ಈ ಹೋರಾಟ ಕೇವಲ ದೂರು ದಾಖಲಿಸುವವರೆಗೆ ಸೀಮಿತವಿಲ್ಲ. ಇಂತಹ ಜನರಿಂದ ಆಟವನ್ನು ಉಳಿಸಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಹೀಗೆ ಸಾಧ್ಯವಾಗುತ್ತಿದ್ದರೇ, ಕಳೆದ ಕೆಲವು ತಿಂಗಳಲ್ಲಿ ಪೊಲೀಸರು ಏಕೆ ದೂರು ದಾಖಲಿಸಲಿಲ್ಲ, ಇದರ ಉತ್ತರ ಕೂಡ ಜನರಿಗೆ ನೀಡಬೇಕು ! ಹಾಗೂ ಅವರು ಈಗ ಕೇವಲ ದೂರು ದಾಖಲಿಸಿಕೊಂಡು ಅದನ್ನು ನಿರ್ಲಕ್ಷ ಮಾಡುವರೇ ಅಥವಾ ಮುಂದಿನ ಕ್ರಮ ಕೂಡ ಕೈಗೊಳ್ಳುವರೇ, ಇದನ್ನು ಕೂಡ ಸ್ಪಷ್ಟಪಡಿಸಬೇಕು !