‘OTT’ ಯ ವೆಬ್ ಸಿರೀಸ್ ಗಳೊ ಅಥವಾ ಅಶ್ಲೀಲ ಮಾಧ್ಯಮಗಳೋ ?’ ಈ ವಿಷಯದ ಕುರಿತು ವಿಶೇಷ ಸಂವಾದ !
ಇಂದು ವೆಬ್ ಸಿರೀಸ್ ಪರಿಣಾಮಕಾರಿ ಮಾಧ್ಯಮವಾಗಿ ಮಾರ್ಪಟ್ಟಿದೆ. ವೆಬ್ ಸರಣಿ/ಒ.ಟಿ.ಟಿ.ಗೆ ಯಾವುದೇ ಸೆನ್ಸಾರ್‌ಶಿಪ್ ವಿಧಿಸಲಾಗಿಲ್ಲ. ವೆಬ್ ಸಿರೀಸ್ ಮೇಲೆ ಸರಕಾರ ನಿಯಂತ್ರಣ ಹೇರಬೇಕು. ವೆಬ್ ಸಿರೀಸ್ ಜೊತೆ ವಾಹಿನಿಗಳಲ್ಲಿ ತೋರಿಸಲಾಗುವ ಸಿರೀಸ್ ಗಳು, ಕಾರ್ಯಕ್ರಮಗಳ ಮೇಲೆಯೂ ಸೆನ್ಸಾರ್ ಬೋರ್ಡ್ ಜಾರಿಗೊಳಿಸಬೇಕು, ಎಂದು ‘ಕೇಂದ್ರ ಚಲನಚಿತ್ರ ಪರೀಕ್ಷಣಾ ಮಂಡಳಿ’ಯ ಮಾಜಿ ಸದಸ್ಯ ಶ್ರೀ. ಸತೀಶ್ ಕಲ್ಯಾಣಕರ್ ಇವರು ಆಗ್ರಹಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ `ಓ.ಟಿ.ಟಿ.’ಯ ವೆಬ್ ಸರಣಿಯೋ ಅಶ್ಲೀಲ ಮಾಧ್ಯಮವೋ ?’ ಈ ವಿಷಯದ ಕುರಿತು ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
ಶ್ರೀ. ಸತೀಶ್ ಕಲ್ಯಾಣಕರ ಮಾತು ಮುಂದುವರೆಸುತ್ತಾ, ‘ಸೆನ್ಸಾರ್ ಬೋರ್ಡ್ ಈಗಾಗಲೇ ಸೂಕ್ತ ಮತ್ತು ತಿಳಿದಿರುವ ವ್ಯಕ್ತಿಗಳನ್ನು ನೇಮಿಸಿಲ್ಲ.ಸೆನ್ಸಾರ್ ಮಂಡಳಿಯಲ್ಲಿರುವ ಜನರಿಗೆ ದೇಶ, ಸಮಾಜ ಮತ್ತು ಸಂಸ್ಕೃತಿಯ ಬಗ್ಗೆ ಅವರ ಜವಾಬ್ದಾರಿಯ ಬಗ್ಗೆ ಕಾನೂನುಗಳು ಯಾವುವು ಎಂದು ತಿಳಿದಿದೆಯೇ ? ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರದೊಂದಿಗೆ ಪತ್ರ ವ್ಯವಹಾರ ನಡೆಸಿದ್ದೇನೆ. ಸೆನ್ಸಾರ್ ಬೋರ್ಡ್ ಗೆ ನೇಮಕಗೊಂಡವರಿಗೆ ತರಬೇತಿ ನೀಡಲು ಅವಕಾಶವಿದ್ದರೂ ತರಬೇತಿ ನೀಡದಿರುವುದು ಆಘಾತಕಾರಿಯಾಗಿದೆ. ಸೆನ್ಸಾರ್ ಬೋರ್ಡ್ ನ ತರಬೇತಿಯಲ್ಲಿ ಉತ್ತೀರ್ಣರಾದವರಿಗೆ ಅಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ನ್ಯಾಯವಾದಿ ಅಮಿತಾ ಸಚದೇವ ಇವರು ಮಾತನಾಡುತ್ತಾ, ‘ಇಂದು ವೆಬ್ ಸಿರೀಸ್ ಗಳ ಮೂಲಕ ಹಿಂಸೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ವೆಬ್ ಸಿರೀಸ್ ನಲ್ಲಿ ಹಿಂದೂ ಧರ್ಮ, ದೇಶದ ಸೇನೆ ಇತ್ಯಾದಿಗಳ ತಪ್ಪು ಚಿತ್ರಣವನ್ನು ತೋರಿಸುವ ವೆಬ್ ಸಿರೀಸ್ ಗಳಿಗೆ ಸೆನ್ಸಾರ್ ಬೋರ್ಡ್ ಇಲ್ಲ. ಈ ನಿಟ್ಟಿನಲ್ಲಿ ಹಿಂದೂ ಜನಜಾಗೃತಿ ಸಮಿತಿ ಕಳೆದ ಕೆಲವು ವರ್ಷಗಳಿಂದ ನ್ಯಾಯಾಂಗ ಹೋರಾಟ ನಡೆಸುತ್ತಿದೆ. ವೆಬ್ ಸರಣಿಯ ಬಗ್ಗೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವವರೆಗೂ ಈ ಹೋರಾಟ ಮುಂದುವರಿಯಲಿದೆ.’ ಎಂದು ಹೇಳಿದರು.