ಹನುಮಂತನ ದೇವಸ್ಥಾನ ಪರಿಸರದಲ್ಲಿನ ಅಂಗಡಿಗೆ ಮಟನ್ ವಿತರಿಸಲು ನಿರಾಕರಿಸಿದ ಡೆಲವರಿ ಬಾಯ್ ನನ್ನು ವಜಾಗೊಳಿಸಿದ ‘ಸ್ವಿಗ್ಗಿ’ !

ನವ ದೆಹಲಿ – ಇಲ್ಲಿಯ ಹನುಮಾನ ದೇವಸ್ಥಾನದ ಹತ್ತಿರ ಮಟನ್ ತಲುಪಿಸಲು ನಿರಾಕರಿಸಿದ ಡೆಲವರಿ ಬಾಯ್ ನನ್ನು ‘ಸ್ವಿಗಿ’ ಈ ಆನ್ಲೈನ್ ಆಹಾರ ಪದಾರ್ಥ ಪೂರೈಕೆ ಮಾಡುವ ಕಂಪನಿಯು ನೌಕರಿಯಿಂದ ತಕ್ಷಣ ತೆಗೆದುಹಾಕಿರುವ ಆರೋಪ ಮಾಡಿದ್ದಾನೆ.

ಪ್ರಸಾರ ಮಾಧ್ಯಮಗಳು ನೀಡಿರುವ ವಾರ್ತೆಯ ಪ್ರಕಾರ, ದೆಹಲಿಯ ಮಾರ್ಗಘಾಟ್ ಬಾಬಾ ಹನುಮಾನ ದೇವಸ್ಥಾನದ ಪರಿಸರದಲ್ಲಿ ಒಂದು ಅಂಗಡಿಗೆ ‘ಸ್ವಿಗೀ’ಯ ಮೂಲಕ ‘ಮಟನ್ ಕೋರಮಾ’ ಕೇಳಿದ್ದನು. ನಂತರ ಡೆಲವರಿ ಬಾಯ್ ‘ಮಟನ ಕೋರಮಾ’ ತೆಗೆದುಕೊಂಡು ಅಂಗಡಿಯ ವಿಳಾಸಕ್ಕೆ ತಲುಪಿದನು, ಆಗ ಅವನಿಗೆ ಗಿರಾಕಿಯ ಸ್ಥಳವು ಶ್ರೀ ಹನುಮಾನ ದೇವಸ್ಥಾನದ ಪರಿಸರದಲ್ಲಿರುವುದು ಗಮನಕ್ಕೆ ಬಂದಿತು. ಆದ್ದರಿಂದ ಡೆಲವರಿ ಬಾಯ್ ‘ಮಟನ್ ಕೋರಮಾ’ ತಲುಪಿಸಲು ನಿರಾಕರಿಸಿದನು. ಡೆಲವರಿ ಬಾಯ್ ಗಿರಾಕಿಗೆ ದೇವಸ್ಥಾನದ ಪರಿಸರದ ಹೊರಗೆ ಬಂದು ‘ಮಟನ ಕೋರಮಾ’ ತೆಗೆದು ಕೊಂಡು ಹೋಗಲು ವಿನಂತಿಸಿದನು; ಆದರೆ ಗಿರಾಕಿಯು ಒಪ್ಪಲಿಲ್ಲ. ಡೆಲವರಿ ಬಾಯ್ ಗಿರಾಕಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದಾಗ, ಅದೇ ವಿಷಯ ಗಿರಾಕಿಯು ಕಂಪನಿಯವರಿಗೆ ಹೇಳಿದನು. ಈ ಘಟನೆಯ ನಂತರ ‘ಸ್ವಿಗಿ’ಯು ಆ ಡೆಲವರಿ ಬಾಯ್ ನನ್ನ ಕೆಲಸದಿಂದ ತೆಗೆದುಹಾಕಿತು. ‘ಸ್ವಿಗಿ’ ಮಾತ್ರ ಡೆಲವರಿ ಬಾಯ್ ನ ಆರೋಪ ತಳ್ಳಿ ಹಾಕಿದೆ.

ಹನುಮಾನ ದೇವಸ್ಥಾನದ ವ್ಯವಸ್ಥಾಪಕರಿಂದ ಡೆಲವರಿ ಬಾಯ್ ನ ಸತ್ಕಾರ

ಇನ್ನೊಂದು ಕಡೆ ಶ್ರೀ ಹನುಮಾನ ದೇವಸ್ಥಾನದ ವ್ಯವಸ್ಥಾಪಕರಿಂದ ಆ ಡೆಲವರಿ ಬಾಯ್ ನನ್ನು ಶ್ಲಾಘಿಸಿ ಅವನ ಸತ್ಕಾರ ಮಾಡಿದರು.