ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಇಲ್ಲಿನ ಕಾನೂನನ್ನು ಪಾಲಿಸಲೇಬೇಕು ! – ಭಾರತದ ವಿದೇಶಾಂಗ ಸಚಿವ ಜೈಶಂಕರ

ಬಿಬಿಸಿ ಸರ್ವೇಕ್ಷಣೆಯ ಕುರಿತು ಬ್ರಿಟನ ವಿದೇಶಾಂಗ ಸಚಿವರ ಕಿವಿ ಹಿಂಡಿದ ಭಾರತದ ವಿದೇಶಾಂಗ ಸಚಿವ ಜೈ ಶಂಕರ

ಎಡಬದಿಗೆ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಮತ್ತು ಬ್ರಿಟನ್ ನ ವಿದೇಶಾಂಗ ಸಚಿವ ಜೇಮ್ಸ ಕ್ಲೆವರ್ಲಿ

ನವ ದೆಹಲಿ – ಬ್ರಿಟನ್ ವಿದೇಶಾಂಗ ಸಚಿವ ಜೇಮ್ಸ ಕ್ಲೇವರ್ಲಿ ‘ಜಿ-20’ಯ ವಿದೇಶಾಂಗ ಸಚಿವರುಗಳ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಭಾರತಕ್ಕೆ ಬಂದಾಗ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ಸಭೆಯಲ್ಲಿ ಜೇಮ್ಸ ಕ್ಲೆವರ್ಲಿಯವರು ಬಿಬಿಸಿಯ ದೆಹಲಿ ಮತ್ತು ಮುಂಬಯಿ ಕಚೇರಿಯ ಮೇಲೆ ಆದಾಯ ತೆರಿಗೆ ಇಲಾಖೆಯ ಸಮೀಕ್ಷೆಯ ಅಂಶ ಮಂಡಿಸಿದರು. ಅದಕ್ಕೆ ಭಾರತದ ಡಾ. ಎಸ್. ಜೈಶಂಕರ ಇವರು ಕ್ಲೆವರ್ಲಿಯವರಿಗೆ ಉತ್ತರ ನೀಡುವಾಗ ‘ಯಾವುದೇ ಸಂಸ್ಥೆ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಕಾನೂನನ್ನು ಪೂರ್ಣವಾಗಿ ಪಾಲಿಸಬೇಕು’, ಎಂದು ಕಿವಿಹಿಂಡಿದರು.

ಈ ಹಿಂದೆ ಬ್ರಿಟನ ಸರಕಾರವು, ಭಾರತದ ಬಿಬಿಸಿ ಕಾರ್ಯಾಲಯದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸೂಕ್ಷ್ಮವಾಗಿ ನಿಗಾವಹಿಸುತ್ತಿದೆ ಎಂದು ಹೇಳಿತ್ತು.

ಸಂಪಾದಕೀಯ ನಿಲುವು

ಯಾರಿಗೆ ಯಾವ ಭಾಷೆ ಅರ್ಥವಾಗುತ್ತದೆಯೋ, ಅದೇ ಭಾಷೆಯಲ್ಲಿಯೇ ಉತ್ತರಿಸುವುದು ಆವಶ್ಯಕವಾಗಿದೆ, ಎನ್ನುವುದನ್ನು ಭಾರತ ಈಗ ಮಾಡುತ್ತಿರುವುದು ಒಳ್ಳೆಯ ಲಕ್ಷಣವಾಗಿದೆ !