ಈ ವರ್ಷ ನಡೆಯುವ ಚಾರಧಾಮ ಯಾತ್ರೆಯಲ್ಲಿ ಸಹಭಾಗಿಯಾಗುವ ಭಕ್ತರಿಗಾಗಿ ಹೆಸರು ನೋಂದಣಿ ಅನಿವಾರ್ಯ !

ನವದೆಹಲಿ – ಹಿಂದೂ ಧರ್ಮದಲ್ಲಿ ಚಾರಧಾಮ ಯಾತ್ರೆಗೆ ವಿಶಿಷ್ಟವಾದ ಮಹತ್ವವಿದೆ. ಕೇದಾರನಾಥ, ಬದ್ರಿನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಇವುಗಳ ದರ್ಶನಕ್ಕಾಗಿ ಹಿಂದೂಗಳು ಅನೇಕ ತಿಂಗಳಗಳಿಂದ ದಾರಿ ಕಾಯುತ್ತಿರುತ್ತಾರೆ. ಈ ಎಲ್ಲಾ ತೀರ್ಥಕ್ಷೇತ್ರಗಳು ಉತ್ತರಖಂಡ ರಾಜ್ಯದಲ್ಲಿದ್ದು ಈ ವರ್ಷ ರಾಜ್ಯ ಸರಕಾರ ಯಾತ್ರೆಗಾಗಿ ಕೆಲವು ನಿಯಮ ರೂಪಿಸಿದೆ. ದರ್ಶನಕ್ಕೆ ಹೋಗುವ ಮೊದಲು ಭಕ್ತರ ಹೆಸರು ನೋಂದಣಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಈ ಚಾರಧಾಮ ಯಾತ್ರೆಗೆ ಹೋಗಲು ಸಾಧ್ಯವಿಲ್ಲ.

೧. ಪ್ರತಿ ವರ್ಷ ಚಾರಧಾಮ ಯಾತ್ರೆ ಏಪ್ರಿಲ್ ನಿಂದ ಮೇ ತಿಂಗಳಲ್ಲಿ ಶುರುವಾಗುತ್ತದೆ ಮತ್ತು ಅಕ್ಟೋಬರ್ ನಿಂದ ನವಂಬರ್ ವರೆಗೆ ನಡೆಯುತ್ತದೆ.

೨. ಚಾರಧಾಮ ಯಾತ್ರೆಗಾಗಿ ಭಕ್ತರು ಆನ್ಲೈನ್ ಅಥವಾ ಆಫ್ ಲೈನ್ ಹೀಗೆ ಎರಡೂ ರೀತಿಯಲ್ಲಿ ನೋಂದಣಿ ಮಾಡಬಹುದು. ಪ್ರಸ್ತುತ ಪರಿಸ್ಥಿತಿಯಲ್ಲಿ ಬದ್ರಿನಾಥ ಮತ್ತು ಕೇದಾರನಾಥ ಈ ತೀರ್ಥಕ್ಷೇತ್ರಗಳಿಗಾಗಿ ನೋಂದಣಿ ಪ್ರಾರಂಭವಾಗಿದೆ ಹಾಗೂ ಗಂಗೋತ್ರಿ ಮತ್ತು ಯಮುನೊತ್ರಿ ಈ ತೀರ್ಥಕ್ಷೇತ್ರಗಳಿಗಾಗಿ ನೋಂದಣಿ ಇನ್ನೂ ಪ್ರಾರಂಭವಾಗಿಲ್ಲ. ಎರಡು ದೇವಸ್ಥಾನದ ಬಾಗಿಲು ತೆರೆಯುವ ಘೋಷಣೆಯಾದನಂತರ ನೊಂದಣಿ ಪ್ರಕ್ರಿಯೆ ಆರಂಭವಾಗುತ್ತದೆ.

೩. ರಾಜ್ಯದ ಮುಖ್ಯಮಂತ್ರಿ ಪುಷ್ಕರಿಸಿಂಹ ಧಾಮಿ ಇವರ ಅಧ್ಯಕ್ಷತೆಯಲ್ಲಿನ ಸಮಿತಿ ಚಾರಧಾಮ ಯಾತ್ರೆಯ ಸಿದ್ಧತೆಯ ವರದಿ ಪಡೆಯಲಿದೆ. ಕಳೆದ ವರ್ಷ ಚಾರಧಾಮ ಯಾತ್ರೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಿನ ಜನದಟ್ಟಣೆ ಇತ್ತು. ಈ ವರ್ಷ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆ ಇದೆ. ರಾಜ್ಯದ ಪ್ರವಾಸೋದ್ಯಮ ಇಲಾಖೆಯಿಂದ ಕಳೆದ ವರ್ಷದ ಆಧಾರದಲ್ಲಿ ಈ ವರ್ಷ ಕೇದಾರನಾಥ ಧಾಮಕ್ಕಾಗಿ ಪ್ರತಿದಿನ ೧೫ ಸಾವಿರ, ಬದ್ರಿನಾಥ ಧಮಕ್ಕಾಗಿ ಪ್ರತಿ ದಿನ ೧೮ ಸಾವಿರ, ಗಂಗೋತ್ರಿ ಧಾಮಕ್ಕಾಗಿ ೯ ಸಾವಿರ ಹಾಗೂ ಯಮನೋತ್ರಿಗಾಗಿ ೬ ಸಾವಿರ ಭಕ್ತರು ದರ್ಶನಕ್ಕಾಗಿ ಬಿಡುವ ನಿರ್ಣಯ ತೆಗೆದುಕೊಂಡಿದ್ದಾರೆ.

೪. ಚಾರಧಾಮ ಯಾತ್ರೆಯ ಮಾರ್ಗದಲ್ಲಿ ಭಕ್ತರಿಗೆ ಆರೋಗ್ಯ ಸೌಲಭ್ಯ, ನಿವಾಸದ ವ್ಯವಸ್ಥೆ, ಬಸ್ ಸೌಲಭ್ಯ, ಕುದುರೆ ಮತ್ತು ಹೇಸರಗತ್ತೆಯ ಆರೋಗ್ಯ ತಪಾಸಣೆ, ವಿದ್ಯುತ್ ಮತ್ತು ಕುಡಿಯುವ ನೀರು ಮುಂತಾದರ ವ್ಯವಸ್ಥೆ ನೀಡುವ ನಿರ್ಣಯ ತೆಗೆದುಕೊಳ್ಳಲಾಗಿದೆ.