ಟರ್ಕಿಯಲ್ಲಿ ೬ ವರ್ಷದ ಹುಡುಗಿಯ ಪ್ರಾಣ ಉಳಿಸಿದ ಭಾರತೀಯ ಶ್ವಾನ !

ಅಂಕಾರಾ – ಟರ್ಕಿಯಲ್ಲಿ ವಿನಾಶಕಾರಿ ಭೂಕಂಪದ ನಂತರ ಅಲ್ಲಿ ಭಾರತವು ಸಹಾಯ ಕಾರ್ಯ ಮಾಡುಲು ಎನ್.ಡಿ.ಆರ್.ಎಫ್. ಸೈನಿಕರನ್ನು ಮತ್ತು ಶ್ವಾನ ದಳವನ್ನು ಕಳಿಸಿದೆ. ದೇಶದ ನುರದಾಗಿ ಪರಿಸರದಲ್ಲಿ ನೆಲೆಸಮವಾಗಿರುವ ಕಟ್ಟಡದ ರಾಶಿ ತೆರವುಗೊಳಿಸುವಾಗ ಎನ್.ಡಿ.ಆರ್.ಎಫ್. ನ ಶ್ವಾನ ದಳವೂ ಕೂಡ ಉಪಸ್ಥಿತವಿತ್ತು. ಈ ಶ್ವಾನಗಳಿಗೆ ಕಟ್ಟಡದ ರಾಶಿಯ ಕೆಳಗೆ ಜೀವಂತ ವ್ಯಕ್ತಿ ಇರುವುದನ್ನು ನಿಖರವಾಗಿ ಗುರುತಿಸುವ ತರಬೇತಿ ನೀಡಿರುತ್ತದೆ. ಕಟ್ಟಡದ ರಾಶಿ ತೆರವುಗೊಳಿಸುವಾಗ ವಿಶಿಷ್ಟ ಸ್ಥಳಕ್ಕೆ ತಲುಪಿದಾಗ ‘ರೋಮಿಯೋ’ ಮತ್ತು ‘ಜೂಲಿ’ ಎಂಬ ಶ್ವಾನ ಬಗಳಲಾರಂಭಿಸಿತು. ಆದ್ದರಿಂದ ಎನ್.ಡಿ.ಆರ್.ಎಫ್. ನ ಸೈನಿಕರಿಗೆ ಸೂಚನೆ ಸಿಕ್ಕಿರುವುದರಿಂದ ಅವರು ಜಾಗರೂಕತೆಯಿಂದ ಆ ಸ್ಥಳದಲ್ಲಿ ಆಗಿಯುವ ಕಾರ್ಯ ಆರಂಭಿಸಿದರು. ಅಗಿಯುವಾಗ ೬ ವರ್ಷದ ಹುಡುಗಿಯನ್ನು ಕಟ್ಟಡದ ರಾಶಿಯ ಕೆಳಗೆನಿಂದ ಜೀವಂತವಾಗಿ ಹೊರ ತೆಗೆದರು. ಈ ಘಟನೆಯ ನಂತರ ಕೇಂದ್ರ ಗೃಹ ಸಚಿವ ಅಮಿತ ಶಾಹ ಇವರು ಈ ಶ್ವಾನಗಳನ್ನು ಶ್ಲಾಘಿಸಿದ್ದಾರೆ.

(ಸೌಜನ್ಯ: India Today)