ಸಿಂಗಪುರದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ೨೦ ಸಾವಿರ ಭಕ್ತರ ಉಪಸ್ಥಿತಿ !

ಸಿಂಗಾಪುರ – ಇಲ್ಲಿ ೨೦೦ ವರ್ಷಗಳ ಪ್ರಾಚೀನ ಶ್ರೀ ಮರಿಅಮ್ಮನ್ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ರಮದಲ್ಲಿ ೨೦ ಸಾವಿರ ಜನರು ಭಾಗವಹಿಸಿದ್ದರು. ಫೆಬ್ರವರಿ ೧೨ ರಂದು ಜೀರ್ಣೋದ್ಧಾರದ ಕಾರ್ಯಕ್ರಮ ನೆರವೇರಿತು. ಈ ದಿನ ಭಾರೀ ಪ್ರಮಾಣದಲ್ಲಿ ಮಳೆ ಬರುತ್ತಿದ್ದರೂ ಭಕ್ತರ ಉತ್ಸಾಹ ಸ್ವಲ್ಪವೂ ಕಡಿಮೆ ಆಗಿರಲಿಲ್ಲ. ಈ ಕಾರ್ಯಕ್ರಮದಲ್ಲಿ ದೇಶದ ಉಪ ಪ್ರಧಾನಮಂತ್ರಿ ಲಾರೆನ್ಸ್ ವೊಂಗ್ ಕೂಡ ಸಹಭಾಗಿಯಾಗಿದ್ದರು. ಈ ದೇವಸ್ಥಾನದ ಜೀರ್ಣೋದ್ಧಾರ ಕಳೆದ ೧ ವರ್ಷದಿಂದ ನಡೆಯುತ್ತಿತ್ತು. ೨೦೦ ವರ್ಷಗಳ ಹಿಂದೆ ಸಿಂಗಪುರಕ್ಕೆ ಹೋಗಿದ್ದ ಹಿಂದುಗಳು ಈ ದೇವಸ್ಥಾನ ಕಟ್ಟಿದ್ದರು. ಈ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ೧೨ ವಿಶೇಷ ಮೂರ್ತಿಕಾರರನ್ನು ಮತ್ತು ೭ ಕುಶಲ ಕಾರ್ಮಿಕರು ಭಾರತದಿಂದ ಸಿಂಗಪುರಕ್ಕೆ ಹೋಗಿದ್ದರು. ದೇವಸ್ಥಾನದ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ಅಲಂಕಾರ ಮಾಡುವ ಜವಾಬ್ದಾರಿಯು ಈ ವಿಶೇಷ ತಜ್ಞರಿಗೆ ಒಪ್ಪಿಸಿದ್ದರು.