ಇನ್ನು ರೈಲಿನಲ್ಲಿ ವಾಟ್ಸಾಪ್ ಮೂಲಕ ಇಷ್ಟವಾದ ರೆಸ್ಟೋರೆಂಟ್ ನಿಂದ ಭೋಜನ ತರಿಸಬಹುದು !

ನವ ದೆಹಲಿ – ಭಾರತೀಯ ರೈಲು ಪ್ರಯಾಣಿಕರಿಗಾಗಿ ‘ವಾಟ್ಸಪ್ ಫೂಡ್ ಡೆಲಿವರಿ’ ಯೋಜನೆಯ ಶುಭಾರಂಭ ಮಾಡಿದೆ. ಈ ಸೇವೆಯ ಲಾಭ ಪಡೆಯುವುದಕ್ಕಾಗಿ ಪ್ರಯಾಣಿಕರಿಗೆ ಅವರ ಟಿಕೆಟಿನ ‘ಪಿ.ಎನ್.ಆರ್’ (ಕೋಡ್) ಸಂಖ್ಯೆಯನ್ನು ಉಪಯೋಗಿಸಬೇಕಾಗುತ್ತದೆ. ಪ್ರಯಾಣಿಕರು ೮೭೫೦೦೦೧೩೨೩ ಈ ಸಂಖ್ಯೆಯಲ್ಲಿ ಆಹಾರ ತರಿಸಿಕೊಳ್ಳಬಹುದು. ಇದರ ಮೂಲಕ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಅವರ ಇಷ್ಟದ ರೆಸ್ಟೋರೆಂಟ್ ನಿಂದ ಭೋಜನ ತರಿಸಲು ಸಾಧ್ಯವಾಗುವುದು.

ಮೊದಲ ಹಂತದಲ್ಲಿ ಗ್ರಾಹಕರಿಗೆ ಈ ಟಿಕೆಟ್ ಬುಕ್ ಮಾಡಿದ ಸಂಖ್ಯೆಗೆ ಸಂದೇಶ ಕಳುಹಿಸಲಾಗುವುದು. ಈ ಸಂದೇಶದಲ್ಲಿ ಅವರಿಗೆ ಜಾಲತಾಣದ ಮಾಹಿತಿ ಕಳುಹಿಸುತ್ತೇವೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ ಪ್ರಯಾಣಿಕರಿಗೆ ಈ ಕೇಟರಿಂಗ್ ಸೌಲಭ್ಯ ಆಯ್ಕೆ ಮಾಡಬಹುದು. ಈ ಪರ್ಯಾಯದಿಂದ ಪ್ರಯಾಣಿಕರಿಗೆ ರೈಲು ನಿಲ್ದಾಣದಲ್ಲಿರುವ ಇಷ್ಟವಾದ ರೆಸ್ಟೋರೆಂಟ್ ನಿಂದ ಭೋಜನ ತರಿಸಲು ಸಾಧ್ಯವಾಗುವುದು. ಇದಕ್ಕಾಗಿ ಪ್ರಯಾಣಿಕರಿಗೆ ಯಾವುದೇ ಬೇರೆ ಅಪ್ ಡೌನ್ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ.