ಇರಾನ್ ನಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಗೆದ್ದ ಭಾರತೀಯ ಮಹಿಳಾ ಆಟಗಾರ್ತಿ ಪದಕ ಸ್ವೀಕರಿಸುವಾಗ ಹಿಜಾಬ್ ಧರಿಸಬೇಕಾಯಿತು !

ಪದಕ ಪಡೆಯುವ ಮಹಿಳಾ ಆಟಗಾರರಿಗೆ ಹಿಜಾಬ್ ಧರಿಸಲು ಮೊದಲೇ ಸ್ಪಷ್ಟಪಡಿಸಲಾಗಿತ್ತು ಎಂದು ಆಯೋಜಕರ ದಾವೆ !

(ಹಿಜಾಬ್ ಎಂದರೆ ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚುವುದಕ್ಕಾಗಿ ಉಪಯೋಗಿಸುವ ವಸ್ತ್ರ)

ತೆಹರನ್ (ಇರಾನ್) – ಭಾರತೀಯ ಬ್ಯಾಡ್ಮಿಂಟನ್ ಆಟಗಾರರ್ತಿ ತಾನ್ಯಾ ಹೇಮಂತ್ ಈಕೆಯು ಇಲ್ಲಿಯ ೩೧ ನೇ ಇರಾನ್ ಫ್ರಜ್ ಇಂಟರ್ನ್ಯಾಷನಲ್ ಸ್ಪರ್ಧೆ ಗೆದ್ದಳು. ಆಕೆಗೆ ಚಿನ್ನದ ಪದಕ ನೀಡುವಾಗ ಹಿಜಾಬ್ ಧರಿಸಲು ಕಡ್ಡಾಯ ಗೋಳಿಸಿದರು ಸ್ಪರ್ಧೆಯ ಆಯೋಜಕರು, ‘ನಾವು, ಪದಕ ಸ್ವೀಕರಿಸುವಾಗ ಯುವತಿಗೆ ಹಿಜಾಬ್ ಧರಿಸುವುದು ಅನಿವಾರ್ಯ’ವೆಂದು ಮೊದಲೇ ಹೇಳಿದ್ದೇವು ಎಂದು ಹೇಳಿದರು. ವಿಶೇಷ ಎಂದರೆ ಮಹಿಳೆಯರ ಸ್ಪರ್ಧೆ ನೋಡಲು ಪುರುಷರಿಗೆ ಅನುಮತಿ ನೀಡಿರಲಿಲ್ಲ. ಇಲ್ಲಿ ಪ್ರವೇಶ ದ್ವಾರದಲ್ಲೇ ಪುರುಷರಿಗೆ ಅನುಮತಿ ಇಲ್ಲ ಎಂದು ಫಲಕ ಹಾಕಿದ್ದರು.

ಸಂಪಾದಕೀಯ ನಿಲುವು

ಇರಾನ ಕಟ್ಟರವಾದಿ ಇಸ್ಲಾಮಿ ದೇಶವಾಗಿದೆ. ಆದ್ದರಿಂದ ಭಾರತದಲ್ಲಿನ ಕಪಟ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಹಾಗೂ ಮಹಿಳಾ ಸಂಘಟನೆ ಈ ಘಟನೆಯ ಬಗ್ಗೆ ಮೌನ ವಹಿಸುವರು ಇದರಲ್ಲಿ ಆಶ್ಚರ್ಯವೇನು ?