ಅದಾನಿ ಉದ್ಯೋಗಸಮೂಹದ ಶೇರ್ಸ್ ನಲ್ಲಿ ಶೇಕಡ ೩೫ ರಷ್ಟು ಇಳಿಕೆ

ನವದೆಹಲಿ – ಹಿಂಡೆನ್ ಬರ್ಗ್ ಕಂಪನಿಯ ವರದಿ ಬಂದ ನಂತರ ಅದಾನಿ ಉದ್ಯೋಗ ಸಮೂಹಕ್ಕೆ ದುಸ್ಥಿತಿ ಉಂಟಾಗಿದೆ. ಈ ವರದಿಯಲ್ಲಿ ಈ ಉದ್ಯೋಗ ಸಮೂಹ ಅವ್ಯವಹಾರ ನಡೆದಿರುವ ಆರೋಪ ಮಾಡಿದೆ. ಇದರ ಪರಿಣಾಮ ಈ ಕಂಪನಿಯ ಮೇಲೆ ಆಗಿದೆ. ಅದಾನಿ ಎಂಟರ್ಪ್ರೈಸಸ್ ಶೇರ್ಸ್ ನಲ್ಲಿ ಫೆಬ್ರುವರಿ ೩ ರಂದು ಬೆಳಿಗ್ಗೆ ಶೇಖಡ ೩೫ ರಷ್ಟು ಇಳಿಕೆ ದಾಖಲಾಗಿದೆ. ಆದ್ದರಿಂದ ಒಂದು ಶೇರ್ ನ ಬೆಲೆ ೩ ಸಾವಿರ ೫೦೦ ರೂಪಾಯಿಯಿಂದ ೧ ಸಾವಿರಕ್ಕೆ ಬಂದಿದೆ. ಈ ರೀತಿ ಕಳೆದ ೯ ದಿನದಲ್ಲಿ ಈ ಸಮೂಹದ ಶೇರ್ಸ್ ಶೇಕಡಾ ೭೦ ರಷ್ಟು ಇಳಿದಿದೆ. ಈ ಘಟನೆಯ ನಂತರ ಅಮೇರಿಕಾದ ‘ಡೌ ಜೋಸ್ ಸ್ಟಾಕ ಎಕ್ಸ್ಚೇಂಜ್’ ನಿಂದ ಅದಾನಿ ಎಂಟರ್ಪ್ರೈಸಸ್ ಹೊರ ಹಾಕಿದೆ.

ಅದಾನಿ ಉದ್ಯೋಗ ಸಮೂಹ ಸಾಲ ಹಿಂತಿರುಗಿಸುತ್ತಿದೆ ! – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಅದಾನಿ ಸಮೂಹಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಇಲ್ಲಿಯವರೆಗೆ ೨೧ ಸಾವಿರ ಕೋಟಿ ರೂಪಾಯ ಸಾಲ ನೀಡಿದೆ. ಇದರ ಬಗ್ಗೆ ಈ ಬ್ಯಾಂಕಿನ ಅಧ್ಯಕ್ಷ ದಿನೇಶ ಕುಮಾರ ಖಾರಾ ಇವರು, ಆದಾನಿ ಸಮೂಹ ಸಾಲ ಹಿಂತಿರುಗಿಸುತ್ತಿದೆ. ಬ್ಯಾಂಕಿನಿಂದ ನೀಡಿರುವ ಸಾಲದ ಬಗ್ಗೆ ಯಾವುದೇ ಚಿಂತೆ ಮಾಡುವ ಕಾರಣವಿಲ್ಲ ಎಂದು ಹೇಳಿದರು.

ಬಾಂಗ್ಲಾದೇಶದಿಂದ ಅದಾನಿ ಸಮೂಹದ ಬಳಿ ವಿದ್ಯುತ್ ಒಪ್ಪಂದದಲ್ಲಿ ಸುಧಾರಣೆ ಮಾಡುವಂತೆ ಆಗ್ರಹ !

ಬಾಂಗ್ಲಾದೇಶ ಸರಕಾರ ಅದಾನಿ ಸಮೂಹದ ಜೊತೆ ವಿದ್ಯುತ್ ಕ್ಷೇತ್ರದ ಒಪ್ಪಂದದಲ್ಲಿ ಸುಧಾರಣೆ ಮಾಡುಲು ಆಗ್ರಹಿಸಿದೆ. ಅದಾನಿ ಸಮೂಹದ ವಿದ್ಯುತ್ ಬಹಳ ತುಟ್ಟಿ ಇದೆ. ಅವರು ಅದನ್ನು ಕಡಿಮೆ ಬೆಲೆಗೆ ನೀಡಬೇಕೆಂದು ಸರಕಾರದ ಅಭಿಪ್ರಾಯವಾಗಿದೆ.

ಸಂಸತ್ತಿನಲ್ಲಿ ಹಿಂಡೆನ್ ಬರ್ಗ್ ವರದಿಯಿಂದ ಎರಡನೆಯ ದಿನ ಕೂಡ ರಂಪರಾದ್ಧಾಂತ

ಹಿಂಡೆನ್ ಬರ್ಗ್ ವರದಿಯಿಂದ ಸಂಸತ್ತಿನಲ್ಲಿ ಫೆಬ್ರವರಿ ೩ ರಂದೂ ಕೂಡ ವಿರೋಧ ಪಕ್ಷದವರು ರಂಪಾ ರಾದ್ಧಾಂತ ಮಾಡಿದರು. ಅವರು ಈ ವರದಿಯ ಮೂಲಕ ಅದಾನಿ ಸಮೂಹದ ಮೇಲೆ ಮಾಡಿರುವ ಆರೋಪದ ವಿಚಾರಣೆ ನಡೆಸಲು ಆಗ್ರಹಿಸುತ್ತಿದ್ದಾರೆ. ಇದರಿಂದ ಒತ್ತಾಯದಿಂದ ಆಗಿರುವ ರಂಪಾರಾದ್ಧಾಂತದಿಂದ ಫೆಬ್ರುವರಿ ೨ ರಂದು ಸಂಸತ್ತಿನ ಕಾರ್ಯ ಕಲಾಪ ಸ್ಥಗಿತಗೊಳಿಸಿದ್ದರು. ಫೆಬ್ರುವರಿ ೩ ರಂದು ಕೂಡ ಮಧ್ಯಾಹ್ನ ೨ ವರೆಗೆ ಕಾರ್ಯಕಲಾಪ ಸ್ಥಗಿತಗೊಳಿಸಿದರು.