ಜಗತ್ತಿನಲ್ಲಿ ‘ಸನಾತನ’ ಇದೊಂದೇ ಧರ್ಮ ಉಳಿದೆಲ್ಲವೂ ಪಂಥ !

ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಸ್ಪಷ್ಟನೆ !

ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ

ನವದೆಹಲಿ – ಭಾರತ ಹಿಂದಿನಿಂದಲೂ ಹಿಂದೂ ರಾಷ್ಟ್ರ ಆಗಿದೆ. ಹಿಂದೂ ರಾಷ್ಟ್ರ ಎಂದರೆ ಹಿಂಸಾ ಮುಕ್ತ ರಾಷ್ಟ್ರ, ಎಂದು ಮಧ್ಯಪ್ರದೇಶದಲ್ಲಿನ ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರು ಒಂದು ವಾರ್ತಾವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ‘ಸಂಪೂರ್ಣ ಜಗತ್ತಿನಲ್ಲಿ ‘ಸನಾತನ’ ಇದೊಂದೇ ಧರ್ಮವಾಗಿದೆ ಹಾಗೂ ಉಳಿದೆಲ್ಲವೂ ಪಂಥಗಳು’, ಎಂದು ಅವರು ಈ ಸಮಯದಲ್ಲಿ ಹೇಳಿದರು.

೧. ಸನಾತನ ಧರ್ಮದ ಬಗ್ಗೆ ಪ್ರಶ್ನೆ ಕೇಳುವರಿಗೆ ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರೀ ಇವರು, ಅವರಿಗೆ ಇತರ ಪಂಥದಲ್ಲಿನ ಮೂಢನಂಬಿಕೆ ಕಾಣುವುದಿಲ್ಲ. ತಂದೆಯನ್ನು ತಂದೆ ಎನ್ನುವುದು ಮೂಢನಂಬಿಕೆ, ಹಾಗಾದರೆ ಇದಕ್ಕಿಂತ ದೊಡ್ಡ ಮೂಢನಂಬಿಕೆ ಬೇರೆ ಯಾವುದಾದರೂ ಇರಲು ಸಾಧ್ಯವೇ.

೨. ‘ಶ್ರೀರಾಮಚರಿತಮಾನಸ’ವನ್ನು ನಿಷೇಧಿಸುವ ಬಗ್ಗೆ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರು, ಇಂತಹ ಜನರು ಸಮಾಜದಲ್ಲಿ ಕರ್ಕ ರೋಗಕ್ಕಿಂತಲೂ ಹೆಚ್ಚಿನ ಅಪಾಯಕಾರಿ ಆಗಿದ್ದಾರೆ. ಇಂತಹವರಿಗೆ ಭಾರತದಲ್ಲಿರುವ ಅಧಿಕಾರವಿಲ್ಲ. ಅವರು ಪಾಸ್ಪೋರ್ಟ್ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಜನರು ಅವರಿಗೆ ಭಾರತದ ಹೊರಗೆ ಕಳುಹಿಸಿಕೊಡಬೇಕು. ಉತ್ತರ ಕೋರಿಯಾದಲ್ಲಿನ ಸರ್ವಾಧಿಕಾರಿ ಕಿಂಮ್ ಜೋಗ್ ಇವರು ಕೊರೊನಾದ ಹೋರಾಟಕ್ಕಾಗಿ ಯಾವ ಉಪಾಯ ಮಾಡಿದರು, ಇಂತಹವರ ಕುರಿತು ಅದೇ ರೀತಿಯ ಉಪಾಯ ಮಾಡಬೇಕು ಎಂದು ಹೇಳಿದರು.