ದುಬೈಯ ಒಂದು ಜಿಲ್ಲೆಯನ್ನು `ಹಿಂದ್-ಸಿಟಿ’ ಎಂದು ನಾಮಕರಣ

ಶೇಖ ಮಹಮ್ಮದ್ ಬಿನ್ ರಶೀದ ಅಲ್ ಮಕತೂಮ್

ದುಬೈ – ಇಲ್ಲಿನ ‘ಅಲ್ ಮಿನ್ಹಾದ್’ ಜಿಲ್ಲೆಯ ಮತ್ತು ಅದರ ಪಕ್ಕದ ಪರಿಸರದ ಹೆಸರನ್ನು ‘ಹಿಂದ್ ಸಿಟಿ’ ಎಂದು ಬದಲಾಯಿಸಲಾಗಿದೆ ಎಂದು ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ರಕ್ಷಣಾಸಚಿವರು ಮತ್ತು ಅರಸ ಆಗಿರುವ ಶೇಖ ಮಹಮ್ಮದ್ ಬಿನ್ ರಶೀದ ಅಲ್ ಮಕತೂಮ್ ಇವರು ಘೋಷಿಸಿದ್ದಾರೆ. ಈ ಜಿಲ್ಲೆ 4 ಸೆಕ್ಟರ್ ನಲ್ಲಿ ವಿಭಜಿಸಲಾಗಿದೆ. ಇದನ್ನು ಅನುಕ್ರಮವಾಗಿ ಹಿಂದ್ 1, ಹಿಂದ್ 2, ಹಿಂದ್ 3 ಮತ್ತು ಹಿಂದ್ 4 ಎಂದು ಹೆಸರಿಡಲಾಗಿದೆ.

‘ಹಿಂದ್’ ಶಬ್ದದ ಅರಬ್ಬಿ ಅರ್ಥ

‘ಹಿಂದ್’ ಶಬ್ದವನ್ನು ಅರಬ್ಬಿ ಭಾಷೆಯಲಗಲಿ ‘100 ಒಂಟೆಗಳ ಗುಂಪು’ ಎಂದಾಗುತ್ತದೆ. ಹಾಗೆಯೇ ‘ಹಿಂದ್’ ಎಂದು ಹೆಣ್ಣುಮಕ್ಕಳ ಹೆಸರನ್ನು ಇಡಲಾಗುತ್ತದೆ. ಉಪರಾಷ್ಟ್ರಪತಿ ಶೇಖ ಮಕತೂಮ್ ಇವರ ಪತ್ನಿಯ ಹೆಸರು ಹಿಂದ್ ಆಗಿದೆ. ಅವರ ಪೂರ್ಣ ಹೆಸರು ಶೇಖ್ ಹಿಂದ್ ಬಿಂತ್ ಮಕತೂಮ ಬಿನ್ ಜುಮಾ ಅಲ್ ಮಕತೂಮ ಎಂದಾಗಿದೆ.