ಏರ್ ಇಂಡಿಯಾಗೆ 30 ಲಕ್ಷ ರೂಪಾಯಿಗಳ ದಂಡ !

ವಿಮಾನದಲ್ಲಿ ಮಹಿಳಾ ಪ್ರಯಾಣಿಕಳ ಮೇಲೆ ಪುರುಷ ಪ್ರಯಾಣಿಕನು ಮೂತ್ರವಿಸರ್ಜಿಸಿದ ಪ್ರಕರಣ

ನವದೆಹಲಿ– ನವೆಂಬರ 26, 2022ರ ನ್ಯೂಯಾರ್ಕ- ದೆಹಲಿ ವಿಮಾನದಲ್ಲಿ ಮಹಿಳಾ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜಿಸಿರುವ ಪ್ರಕರಣದಲ್ಲಿ ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯವು ಏರ ಇಂಡಿಯಾಕ್ಕೆ 30 ಲಕ್ಷ ರೂಪಾಯಿಗಳ ದಂಡ ವಿಧಿಸಿದೆ. ಈ ವಿಮಾನದ ಪೈಲೆಟ್- ಇನ್ –ಕಮಾಂಡರವರ ಪರವಾನಿಗೆಯನ್ನು ವಜಾಗೊಳಿಸಲಾಗಿದೆ. ಏರ್ ಇಂಡಿಯಾದ `ಡೈರೆಕ್ಟರ ಇನ್ ಫ್ಲೈಟ ಸರ್ವೀಸಸ್‘ರವರ ಮೇಲೆ 3 ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ.

ಸಂಪಾದಕರ ನಿಲುವು

ಇಂತಹ ಕುಕೃತ್ಯಗಳನ್ನು ಮಾಡುವವರ ಮೇಲೆ ಅತ್ಯಂತ ಕಠೋರ ಕಾರ್ಯಾಚರಣೆಯಾಗಬೇಕು !