ಜೈನ ತೀರ್ಥಸ್ಥಳ ಸಮ್ಮೇದ ಶಿಖರಜಿ ಇದು ಪ್ರವಾಸಿ ತಾಣ ಮಾಡುವುದಿಲ್ಲ !

ಕೇಂದ್ರ ಸರಕಾರ ಮತ್ತು ಜಾರ್ಖಂಡ್ ಸರಕಾರದ ನಿರ್ಣಯ

ನವ ದೆಹಲಿ – ಜಾರ್ಖಂಡ್ ನ ಸಮ್ಮೇದ ಶಿಖರಜಿಯು ಜೈನ ತೀರ್ಥಸ್ಥಳವು ತೀರ್ಥಕ್ಷೇತ್ರವಾಗಿಯೇ ಉಳಿಯುವುದು. ಅದನ್ನು ಪ್ರವಾಸಿ ತಾಣವಾಗಿ ಮಾಡುವುದಿಲ್ಲ, ಎಂದು ಕೇಂದ್ರ ಸರಕಾರ ಮತ್ತು ಜಾರ್ಕಂಡ ಸರಕಾರ ನಿರ್ಣಯ ತೆಗೆದುಕೊಂಡಿದೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಇಕ್ಬಾಲ್ ಸಿಂಹ ಲಾಲಪುರಾ ಇವರು ಮಾಹಿತಿ ನೀಡಿದರು. ಆಯೋಗವು ಜನವರಿ ೧೮ ರಂದು ಈ ಪ್ರಕರಣದ ಬಗ್ಗೆ ವಿಚಾರಣೆ ಮಾಡಿದೆ. ಇದರಲ್ಲಿ ಎರಡು ಸರಕಾರವು ಮಾಹಿತಿ ನೀಡಿದೆ, ಎಂದು ಲಾಲಪುರಾ ಇವರು ಹೇಳಿದರು. ಈ ‘ವಿಷಯದ ಬಗ್ಗೆ ಆದಷ್ಟು ಬೇಗನೆ ಅಧಿಕೃತ ಆದೇಶ ಹೊರಡಿಸಲಾಗುವುದೆಂದು ಜಾರ್ಖಂಡ ಸರಕಾರ ಆಶ್ವಾಸನೆ ನೀಡಿದೆ. ಸಮ್ಮೇದ ಶಿಖರಜಿ ಇದನ್ನು ಪ್ರವಾಸಿ ತಾಣವೆಂದು ಘೋಷಿಸಿರುವುದಕ್ಕೆ ಜೈನ ಸಮಾಜದಿಂದ ತೀವ್ರ ವಿರೋಧ ವ್ಯಕ್ತವಾಗಿ, ದೇಶದಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು.