ಮುಂದಿನ ವಾರದಲ್ಲಿ ಅತ್ಯಧಿಕ ಚಳಿಯ ಸಾಧ್ಯತೆ.

ನವದೆಹಲಿ- ಸಧ್ಯಕ್ಕೆ ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಸಾಧಾರಣ ಚಳಿ ಬಿದ್ದಿದ್ದರೂ, 31 ಡಿಸೆಂಬರ ರಿಂದ 4 ಜನೇವರಿ ಈ 5 ದಿನಗಳಲ್ಲಿ ಮಾತ್ರ ಈ ಚಳಿಗಾಲದ ಅತಿ ಚಳಿ ಬೀಳುವ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆಯು ತಿಳಿಸಿದೆ. ದೆಹಲಿ ಮತ್ತು ರಾಜಸ್ಥಾನದಲ್ಲಿ ಮಾತ್ರ ಅತ್ಯಧಿಕ ಚಳಿ ಅಂದರೆ 1 ಡಿಗ್ರಿ ಸೆಲ್ಶಿಯಸ್ ವರೆಗೆ ತಲುಪುವ ಸಾಧ್ಯತೆಯಿದೆ. ರಾಜಸ್ಥಾನ ಮತ್ತು ಪಶ್ಚಿಮ ಉತ್ತರಪ್ರದೇಶದಲ್ಲಿ ರಾತ್ರಿಯ ಅತ್ಯಂತ ಕಡಿಮೆ ತಾಪಮಾನ 1 ರಿಂದ 4 ಡಿಗ್ರಿ ಸೆಲ್ಶಿಯಸ್, ಅತ್ಯಧಿಕ ತಾಪಮಾನ 10 ರಿಂದ 14 ಅಂಶ ಸೆಲ್ಶಿಯಸ್ ಇರುವ ಸಾಧ್ಯತೆಯಿದೆ. ಇದಲ್ಲದೇ ಪಂಜಾಬ, ಹರಿಯಾಣ ಹಾಗೆಯೇ ಕೆಲವು ರಾಜ್ಯಗಳಲ್ಲಿ ರಾತ್ರಿಯ ತಾಪಮಾನ ಅತ್ಯಂತ ಕೆಳಗೆ ಇಳಿಯುವ ಸಾಧ್ಯತೆಯಿದೆ. ಉತ್ತರದ ಬಹುತೇಕ ರಾಜ್ಯಗಳಲ್ಲಿ ದಟ್ಟ ಇಬ್ಬನಿ ಆವರಿಸಬಹುದು. ದಕ್ಷಿಣದ ರಾಜ್ಯಗಳನ್ನು ಹೊರತುಪಡಿಸಿದರೆ ಹೊಸ ವರ್ಷದ ಮೊದಲ ವಾರದಲ್ಲಿ ದೇಶಾದ್ಯಂತ ಅತ್ಯಂತ ಕಡಿಮೆ ತಾಪಮಾನ ನೊಂದಾಯಿಸಲಾಗಿದೆ.