ಹೆಸರಾಂತ ಹಿರಿಯ ನ್ಯಾಯವಾದಿಗಳನ್ನು ಸ್ವಲ್ಪ ಕಾಲಾವಧಿಗಾಗಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನಾಗಿ ನೇಮಕಾತಿಗೊಳಿಸಿರಿ

ವಿಳಂಬಗೊಂಡ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರಸರಕಾರಕ್ಕೆ ಸೂಚನೆ

ಸರ್ವೋಚ್ಚ ನ್ಯಾಯಾಲಯ

ನವದೆಹಲಿ– ದೇಶದ ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಅನೇಕ ನ್ಯಾಯಾಲಯಗಳ ಹುದ್ದೆಗಳು ಇಂದಿಗೂ ಭರ್ತಿಯಾಗಿಲ್ಲ. ಇದರಿಂದ ಈ ನ್ಯಾಯಾಲಯಗಳಲ್ಲಿ ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ವಿಳಂಬಗೊಳ್ಳುತ್ತಿವೆ. ಇದಕ್ಕೆ ಪರಿಹಾರ ಕಂಡು ಹಿಡಿಯಲು ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಒಂದು ಸೂಚನೆಯನ್ನು ನೀಡಿದೆ. ನ್ಯಾಯಾಲಯ ಹೇಳಿರುವುದೇನೆಂದರೆ, ಅನೇಕ ಹೆಸರಾಂತ ನ್ಯಾಯವಾದಿಗಳು ತಮ್ಮ ಕೆಲಸದಿಂದ ಕೆಲವು ವರ್ಷ ವಿಶ್ರಾಂತಿ ಪಡೆಯಲು ಇಚ್ಛಿಸಿರುತ್ತಾರೆ. ಇಂತಹ ನ್ಯಾಯವಾದಿಗಳು ಅನೇಕ ಬಾರಿ ಶಾಶ್ವತವಾಗಿ ನ್ಯಾಯಮೂರ್ತಿ ಹುದ್ದೆಯನ್ನು ಸ್ವೀಕರಿಸಲು ಇಚ್ಛಿಸಿರುವುದಿಲ್ಲ; ಆದರೆ ಅವರು ಸ್ವಲ್ಪ ಕಾಲಾವಧಿಗಾಗಿ ನ್ಯಾಯಾಲಯದ ಹುದ್ದೆಯನ್ನು ಸ್ವೀಕರಿಸಲು ಇಚ್ಛಿಸುತ್ತಾರೆ. ಇದರಿಂದ ಇಂತಹ ನ್ಯಾಯವಾದಿಗಳನ್ನು ಸಾಮಾಜಿಕ ಜವಾಬ್ದಾರಿಯ ಒಂದು ಭಾಗವೆಂದು 2-3 ವರ್ಷಗಳ ಅಲ್ಪ ಕಾಲಾವಧಿಗಾಗಿ ನ್ಯಾಯಮೂರ್ತಿಗಳನ್ನಾಗಿ ಮಾಡುವ ವಿಚಾರವನ್ನು ಕೇಂದ್ರ ಸರಕಾರ ಮಾಡಬೇಕು.

ನ್ಯಾಯಮೂರ್ತಿ ಸಂಜಯ ಕೌಲ, ನ್ಯಾಯಮೂರ್ತಿ ಅಭಯ ಓಕ ಮತ್ತು ನ್ಯಾಯಮೂರ್ತಿ ವಿಕ್ರಮ ನಾಥ ಇವರ ಖಂಡಪೀಠವು ಈ ನ್ಯಾಯವಾದಿಗಳು ಯಾವ ಕ್ಷೇತ್ರದಲ್ಲಿ ಕೌಶಲ್ಯವನ್ನು ಹೊಂದಿರುತ್ತಾರೆಯೋ, ಆಯಾ ಕ್ಷೇತ್ರದಲ್ಲಿಯೇ ಪ್ರಕರಣಗಳ ತೀರ್ಪು ನೀಡಲು ಅನುಮತಿ ನೀಡಿದರೆ ಪ್ರಕರಣಗಳ ತೀರ್ಪುಗಳ ಸಂಖ್ಯೆ ಹೆಚ್ಚಳವಾಗಲು ಸಹಾಯಕವಾಗುವುದು ಎಂದು ಹೇಳಿದೆ. `ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಬಹಳ ಕಠಿಣವಿದೆ. ಅದನ್ನು ಪ್ರಭಾವಶಾಲಿಯನ್ನಾಗಿಸಲು ಮತ್ತು ನ್ಯಾಯವಾದಿಗಳನ್ನು ಇದಕ್ಕಾಗಿ ಆಕರ್ಷಿತಗೊಳಿಸಲು ಒಂದು ಸರಳ ಪ್ರಕ್ರಿಯೆಯನ್ನು ಸ್ವೀಕರಿಸಬೇಕು’, ಎಂದು ಹೇಳುತ್ತಾ ನ್ಯಾಯಾಮೂರ್ತಿ ಅಟಾರ್ನಿ ಜನರಲ್ ಅರವಿಂದ  ದಾತಾರ ಇವರು ಈ ಪ್ರಕ್ರಿಯೆ ಸುಲಭಗೊಳಿಸಲು ಮತ್ತು ಉಪಾಯ ಸೂಚಿಸಲು ಕರೆ ನೀಡಿದ್ದಾರೆ.