ನಿದ್ರಿಸ್ತ ಹಿಂದೂಗಳನ್ನು ಜಾಗೃತಗೊಳಿಸುವ ಕಾರ್ಯವನ್ನು ಸನಾತನ ಹಾಗೂ ಹಿಂದೂ ಜನಜಾಗೃತಿ ಸಮಿತಿ ಮಾಡುತ್ತಿದೆ ! – ಪ್ರಮೋದ ಮುತಾಲಿಕ್, ಸಂಸ್ಥಾಪಕ ಅಧ್ಯಕ್ಷರು, ಶ್ರೀರಾಮ ಸೇನೆ

ಹುಬ್ಬಳ್ಳಿಯಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ರಣ ಕಹಳೆ !

ಬಲಗಡೆಯಿಂದ ಕು. ನಾಗಮಣಿ ಆಚಾರ್, ಸೌ. ವಿದುಲಾ ಹಳದೀಪುರ್, ಶ್ರೀ. ವಿಜಯ ರೇವಣಕರ್ ಹಾಗೂ ಶ್ರೀ. ಪ್ರಮೋದ ಮುತಾಲಿಕ್ (ದೀಪಪ್ರಜ್ವಲನೆ ಮಾಡುತ್ತಿರುವಾಗ)

ಹುಬ್ಬಳ್ಳಿ – ದೇಶದಲ್ಲಿ ಬುದ್ಧಿಪ್ರಾಮಾಣ್ಯವಾದಿ ಸಾಹಿತಿಗಳ ಕೊಲೆಯಾದಾಗಿನಿಂದ ಸನಾತನ ಸಂಸ್ಥೆಯ ಮೇಲೆ ಹುಸಿ ಆರೋಪ ಹೋರಿಸಿ ಅವರನ್ನು ವಿಚಾರಣೆ ಮಾಡಲಾಗುತ್ತಿದೆ; ಆದರೆ ಪ್ರತ್ಯಕ್ಷವಾಗಿ ಒಂದೇ ಒಂದು ಪುರಾವೆ ಕೂಡ ಸಿಕ್ಕಿಲ್ಲ ಹಾಗೂ ಸಿಗುವುದೂ ಇಲ್ಲ. ಸನಾತನ ಮತದವರು ಕೊಲೆ ಮಾಡುವವರಲ್ಲ. ಹಿಂದೂಗಳಲ್ಲಿ ಶಕ್ತಿಯಿದೆ ಆದರೆ ಅವರು ನಿದ್ರಿಸ್ತರಾಗಿದ್ದಾರೆ. ಅವರನ್ನು ಜಾಗೃತ ಮಾಡುವ ಕಾರ್ಯವನ್ನು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯು ಮಾಡುತ್ತಿದ್ದು ಅವರಿಗೆ ಅನೇಕ ತೊಂದರೆಗಳಾಗಿವೆ, ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್‌ರವರು ಇಲ್ಲಿ ಪ್ರತಿಪಾದಿಸಿದರು. ಇಲ್ಲಿರುವ ಚವ್ಹಾಣ್ ಗಾರ್ಡನ್‌ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶಿವಮೊಗ್ಗ ಜಿಲ್ಲಾ ಸಮನ್ವಯಕರಾದ ಶ್ರೀ. ವಿಜಯ ರೇವಣಕರ್, ಸನಾತನ ಸಂಸ್ಥೆಯ ಕು. ನಾಗಮಣಿ ಆಚಾರ್, ರಣರಾಗಿಣಿ ಶಾಖೆಯ ಸೌ. ವಿದುಲಾ ಹಳದಿಪುರರವರು ಕೂಡ ಮಾರ್ಗದರ್ಶನ ಮಾಡಿದರು. ಸಭೆಯಲ್ಲಿ ೨೬೫ ಕ್ಕಿಂತ ಹೆಚ್ಚು ಧರ್ಮಾಭಿಮಾನಿಗಳು ಉಪಸ್ಥಿತರಿದ್ದರು. ಶ್ರೀ ಮುತಾಲಿಕ್‌ರವರು ಮುಂದೆ ಮಾತನಾಡುತ್ತಾ, ಕಳೆದ ಒಂದು ತಿಂಗಳಿನಿಂದ ಸನಾತನದ ಸಾಧಕರು ಮನೆಮನೆಗೂ ಹೋಗಿ ಪ್ರಚಾರ ಮಾಡಿ ಸಮಾಜವನ್ನು ಜಾಗೃತಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅವರೆಲ್ಲರೂ ಹಿಂದೂ ರಾಷ್ಟ್ರ ಸ್ಥಾಪನೆಗೋಸ್ಕರ ಮನೆ ಸಂಸಾರವನ್ನು ತ್ಯಜಿಸಿದ್ದಾರೆ. ನಾವು ಸನಾತನ ಸಾಧಕರ ಆದರ್ಶವನ್ನು ಮುಂದಿಟ್ಟುಕೊಳ್ಳಬೇಕು.

ಗಮನಾರ್ಹ ಅಂಶಗಳು

೧. ಶ್ರೀ. ಪ್ರಮೋದ ಮುತಾಲಿಕರವರು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ವಿಷಯದಲ್ಲಿ ಹೇಳುತ್ತಿರುವಾಗ ಧರ್ಮಾಭಿಮಾನಿಗಳ ಚಪ್ಪಾಳೆಯ ಧ್ವನಿಯಿಂದ ಸಭಾಗೃಹ ಪ್ರತಿಧ್ವನಿಸುತ್ತಿತ್ತು.

೨. ಧರ್ಮಜಾಗೃತಿ ಸಭೆ ನಡೆಯುತ್ತಿರುವಾಗ ಆಗಾಗ ಮಳೆ ಬರುತ್ತಿತ್ತು

ಹಾಗೂ ಸಾಧಕರು ಪ್ರಾರ್ಥನೆ ಮಾಡಿದ ಬಳಿಕ ಅದು ನಿಂತುಹೋಗುತ್ತಿತ್ತು.

೩. ಸಭಾಸ್ಥಳದ ಹಿಂದೆ ಇರುವ ಒಂದು ತೆಂಗಿನ ಮರದ ಮೇಲೆ

ಒಂದು ಗರುಡ ಕುಳಿತುಕೊಂದು ಧ್ವನಿಯ ಮಾಧ್ಯಮದಿಂದ ಶುಭ ಸಂಕೇತವನ್ನು ನೀಡಿತು.