ಶಿವಸೇನೆಯಿಂದ ತಮಿಳುನಾಡಿನ ಪುರುಶವಾಕ್ಕಮ್‌ನಲ್ಲಿ ಹಿಂದುತ್ವನಿಷ್ಠರಿಗಾಗಿ ವಿಶೇಷ ಸಭೆ !

ಪರಾತ್ಪರ ಗುರು ಶ್ರೀ ಶ್ರೀ ಜಯಂತ ಬಾಳಾಜಿ ಆಠವಲೆಯವರ ಅಮೃತ ಮಹೋತ್ಸವದ ಸಂದರ್ಭದಲ್ಲಿ ತಮಿಳುನಾಡಿನ ಹಿಂದುತ್ವನಿಷ್ಠರ ಸಂಘಟನೆ !

ಸಭೆಯ ಆಮಂತ್ರಣವನ್ನು ನೀಡಲು ಅಲ್ಲಲ್ಲಿ ಹಾಕಿರುವ ಫಲಕಗಳು. ಈ ಫಲಕಗಳಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಭಾವಚಿತ್ರ ಕಾಣಿಸುತ್ತಿವೆ.

ಪುರುಶವಾಕ್ಕಮ್ – ತಮಿಳುನಾಡು ರಾಜ್ಯದ ಶಿವಸೇನೆಯ ವತಿಯಿಂದ ಹಿಂದುತ್ವನಿಷ್ಠರ ವಿಶೇಷ ಸಭೆಯನ್ನು ಆಯೋಜಿಸಿ ಹಿಂದೂ ರಾಷ್ಟ್ರದ ಸಂಕಲ್ಪವನ್ನು ಮಾಡಿರುವ ಪರಾತ್ಪರ ಗುರು ಶ್ರೀ ಶ್ರೀ ಜಯಂತ ಬಾಳಾಜಿ ಆಠವಲೆಯವರಿಗೆ ಪ್ರಣಾಮವನ್ನು ಸಲ್ಲಿಸಲಾಯಿತು. ಇತ್ತೀಚೆಗಷ್ಟೇ ನೆರವೇರಿದ ಪರಾತ್ಪರ ಗುರು ಶ್ರೀಶ್ರೀ ಜಯಂತ ಬಾಳಾಜಿ ಆಠವಲೆಯವರ ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ನಗರದ ಥಾನಾ ಸ್ಟ್ರೀಟ್‌ನ ಪರಿಸರದಲ್ಲಿ ಮೇ ೨೧ ರಂದು ನೆರವೇರಿದ ಸಭೆಗೆ ತಮಿಳುನಾಡಿನ ೧೬ ಹಿಂದುತ್ವನಿಷ್ಠ ಸಂಘಟನೆಗಳ ಸುಮಾರು ೭೫ ಹಿಂದುತ್ವನಿಷ್ಠ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪರಾತ್ಪರ ಗುರು ಶ್ರೀ ಶ್ರೀ ಜಯಂತ ಆಠವಲೆಯವರ ಚಿತ್ರವನ್ನು ವ್ಯಾಸಪೀಠದ ಮೇಲೆ ಇಡಲಾಗಿತ್ತು. ಶಿವಸೇನೆಯ ಶ್ರೀ. ರಾಧಾಕೃಷ್ಣಜೀ, ಶ್ರೀ. ಕುಮಾರ ಸಿದ್ಧರ ಸ್ವಾಮಿ, ಹಿಂದೂ ಮಹಾಸಭೆಯ ಕುಮಾರಜಿ, ಕ್ರೈಸ್ತ ಧರ್ಮವನ್ನು ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದ ಕನ್ಯಾಕುಮಾರಿಯ ಶ್ರೀ. ಜಾನ್ಸನ್, ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತೆ ಸೌ. ಸುಗಂಧಿ ಜಯಕುಮಾರ್, ಶ್ರೀ.ಕಾಶಿನಾಥ ಶೆಟ್ಟಿ, ಶ್ರೀ. ಶ್ರವಣ, ಶ್ರೀ. ಜಯಕುಮಾರ ಮುಂತಾದವರು ಉಪಸ್ಥಿತರಿದ್ದರು.

೧. ಪರಾತ್ಪರ ಗುರು ಶ್ರೀ ಶ್ರೀ ಜಯಂತ ಆಠವಲೆಯವರಿಗೆ ವಂದಿಸಿ ಶಿವಸೇನೆಯ ಶ್ರೀ. ರಾಧಾಕೃಷ್ಣಜೀ ಇವರು ಉಪಸ್ಥಿತರನ್ನು ಸಂಬೋಧಿಸುತ್ತಾ, ‘ಹಿಂದೂ ರಾಷ್ಟ್ರದ ವಿಷಯದಲ್ಲಿ ಎಲ್ಲಿಯಾದರೂ ಘೋಷಣೆಯಾಗುತ್ತಿದೆ ಎಂದಾದರೆ ಅದು ಗೋವಾದಿಂದಾಗುತ್ತಿದೆ. ಅದಕ್ಕಾಗಿ ಗುರುದೇವರು (ಪರಾತ್ಪರ ಗುರು ಡಾ. ಆಠವಲೆ) ಅಪಾರ ಶ್ರಮಪಡುತ್ತಿದ್ದಾರೆ. ಕಾಶ್ಮೀರದಲ್ಲಿ ಭಾರತೀಯ ಸೈನಿಕರನ್ನು ಪಾಕಿಸ್ತಾನದ ಸೈನಿಕರು ಹತ್ಯೆಗೊಳಿಸುತ್ತಿದ್ದಾರೆ. ಇದು ನಿಲ್ಲಬೇಕಾದರೆ ಹಾಗೂ ಹಿಂದೂ ಸ್ಥಾನದ ಸ್ವಾಭಿಮಾನವನ್ನು ಪುನರ್ಸ್ಥಾಪಿಸಲು ಪಾಕಿಸ್ತಾನದೊಂದಿಗೆ ಯುದ್ಧದ ಹೊರತು ಪರ್ಯಾಯವಿಲ್ಲ. ಅದಕ್ಕಾಗಿ ನಾವು ಸಮಾಜದ ಮನೋಬಲವನ್ನು ಹೆಚ್ಚಿಸಬೇಕು. ಎಂದರು.

೨. ಶ್ರೀ. ಕುಮಾರ ಸಿದ್ಧರ ಸ್ವಾಮಿಯವರು ಭಗವಂತನ ಆಶೀರ್ವಾದದಿಂದಲೇ ನಾವು ಸಂಘಟಿತರಾಗಿದ್ದೇವೆ. ಒಂದು ಗಂಟಿನ ಮತಗಳ ರಾಜಕಾರಣದಿಂದಾಗಿ ಮತ್ತು ಹಿಂದೂಗಳಲ್ಲಿ ಐಕ್ಯತೆಯ ಅಭಾವದಿಂದ ನಮ್ಮ ಪರಿಸ್ಥಿತಿ ಕೆಟ್ಟು ಹೋಗಿದೆ. ಎಂದರು.

೩. ಹಿಂದೂ ಮಹಾಸಭೆಯ ಕುಮಾರಜೀಯವರು, ಗಾಂಧೀಜಿ ಮತ್ತು ನೆಹರು ಇವರಿಂದಾಗಿ ನಮ್ಮ ಜನರು ಹಿಂದೂಗಳ ಗೌರವಪೂರ್ಣ ಇತಿಹಾಸವನ್ನು ಮರೆತಿದ್ದಾರೆ. ನಾವೆಲ್ಲರೂ ಹಿಂದೂ ಹಿತವನ್ನು ಗಮನದಲ್ಲಿಟ್ಟು ಪ್ರತಿಯೊಂದು ಕೃತಿ ಮಾಡಬೇಕಾಗಿದೆ ಎಂದರು.

೪. ಕ್ರೈಸ್ತ ಧರ್ಮವನ್ನು ತ್ಯಾಗ ಮಾಡಿ ಹಿಂದೂ ಧರ್ಮವನ್ನು ಸ್ವೀಕರಿಸಿದ ಕನ್ಯಾಕುಮಾರಿಯ ಶ್ರೀ. ಜಾನ್ಸನ್‌ರು, ನಮ್ಮ ಧರ್ಮ ಹೇಗಿದೆ, ಎಂಬುದರ ವಿಷಯದಲ್ಲಿ ನಾವು ಜನರಿಗೆ ಶಿಕ್ಷಣ ನೀಡಬೇಕು. ಅದರಿಂದ ಅವರಿಗೆ ನಿಜವಾದ ಜ್ಞಾನ ಸಿಗುವುದು ಎಂದರು.

೫. ಸೌ. ಸುಗಂಧಿ ಜಯಕುಮಾರರು, ನಮಗೆ ಪರಾತ್ಪರ ಗುರು ಶ್ರೀ ಶ್ರೀ ಜಯಂತ ಬಾಳಾಜಿ ಆಠವಲೆಯವರಂತಹ ಜ್ಞಾನಗುರು, ಮೋಕ್ಷಗುರು ಮತ್ತು ಧರ್ಮಗುರುಗಳ ಮಾರ್ಗದರ್ಶನ ಸಿಗುತ್ತಿದೆ, ಇದು ನಮ್ಮ ಸೌಭಾಗ್ಯವಾಗಿದೆ. ಇಂತಹ ಗುರುಗಳ ಆಶೀರ್ವಾದವನ್ನು ಪಡೆಯಲು ನಾವು ನಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಬೇಕು. ನಾಮಜಪ ಮಾಡಬೇಕು ಹಾಗೂ ರಾಷ್ಟ್ರ ಮತ್ತು ಧರ್ಮಕ್ಕಾಗಿ ಪ್ರಾರ್ಥನೆಯ ಜೊತೆಗೆ ನಮ್ಮಲ್ಲಿರುವ ದೋಷಗಳನ್ನು ನಿರ್ಮೂಲನಗೊಳಿಸಲು ಪ್ರಯತ್ನಿಸಬೇಕು ಎಂದರು.

ಗಮನಾರ್ಹ ಅಂಶಗಳು

೧. ಪರಾತ್ಪರ ಗುರು ಶ್ರೀ ಶ್ರೀ ಜಯಂತ ಬಾಳಾಜಿ ಆಠವಲೆಯವರ ಚಿತ್ರವಿರುವ ಫಲಕವನ್ನು ವ್ಯಾಸಪೀಠದಲ್ಲಿ ಹಾಕಲಾಗಿತ್ತು.

೨. ಈ ಸಂದರ್ಭದಲ್ಲಿ ಹಿಂದುತ್ವದ ಕಾರ್ಯ ಮಾಡುವ ೬೬ ಹಿಂದುತ್ವನಿಷ್ಠರಿಗೆ ವೀರ ಶಿವಾಜಿ ಪುರಸ್ಕಾರಗಳನ್ನು ನೀಡಿ ಸತ್ಕರಿಸಲಾಯಿತು. ಈ ಪುರಸ್ಕಾರದ ವೈಶಿಷ್ಟ್ಯವೆಂದರೆ ಅದರಲ್ಲಿ ಛತ್ರಪತಿ ಶಿವಾಜಿ ಹಾಗೂ ಶಿವಸೇನೆಯ ಪಕ್ಷಪ್ರಮುಖರ ಛಾಯಾಚಿತ್ರದೊಂದಿಗೆ ಪರಾತ್ಪರ ಗುರು ಶ್ರೀ ಶ್ರೀ ಜಯಂತ ಆಠವಲೆಯವರ ಛಾಯಾಚಿತ್ರವನ್ನು ಹಾಕಲಾಗಿತ್ತು.

೩. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರನ್ನು ಸಹ ಇಲ್ಲಿ ಸತ್ಕರಿಸಲಾಯಿತು. ತಮಿಳುನಾಡಿನ ಹಿಂದೂಗಳನ್ನು ಸಂಘಟಿಸಲು ಸಮಿತಿ ಮಾಡುತ್ತಿರುವ ಕಾರ್ಯವನ್ನು ಶ್ರೀ. ರಾಧಾಕೃಷ್ಣನ್ ಇವರು ಹೊಗಳಿದರು.

೪. ಕಾರ್ಯಕ್ರಮದ ಪ್ರಾರಂಭದಲ್ಲಿ ಸಾತ್ತ್ವಿಕ ಭಜನೆಗಳನ್ನು ಹಾಕಲಾಗಿತ್ತು.