ಸಾಧಕರಿಗೆ ಸೂಚನೆ : ಮಹರ್ಷಿಗಳ ಆಜ್ಞೆಯಂತೆ ಈಗ ‘ಓಂ ಹ್ರೂಂ ಹ್ರೀಂ ಶ್ರೀ ಅಘೋರ ಪರಮೇಶ್ವರಾಯ ನಮಃ | ಈ ಮಂತ್ರಜಪವನ್ನು ಶೇ. ೭೫ ರಷ್ಟು ಮತ್ತು ‘ಓಂ ನಿಸರ್ಗದೇವೋ ಭವ… ಈ ನಾಮಜಪವನ್ನು ಶೇ. ೨೫ ರಷ್ಟು ಸಮಯ ಮಾಡಿರಿ !

೧೦.೩.೨೦೧೬ ಈ ದಿನದಿಂದ ಸಾಧಕರು ಮಹರ್ಷಿಗಳು ಹೇಳಿದಂತೆ ಕಾಲಾನುಸಾರ ಅವಶ್ಯವಿರುವ ಓಂ ನಿಸರ್ಗದೇವೋ ಭವ… ಈ ನಾಮಜಪವನ್ನು ಮಾಡುತ್ತಿದ್ದಾರೆ. ಈಗ ೨೨.೫.೨೦೧೭ ರಂದು ಸಪ್ತರ್ಷಿ ನಾಡಿಪಟ್ಟಿ ವಾಚನ ಕ್ರ. ೧೩೦ ನಲ್ಲಿ ಮಹರ್ಷಿಗಳು ಆಪತ್ಕಾಲದ ತೀವ್ರತೆ ಇನ್ನಷ್ಟು ಹೆಚ್ಚಾಗಿರುವುದರಿಂದ ‘ಓಂ ಹ್ರೂಂ ಹ್ರೀಂ ಶ್ರೀ ಅಘೋರ ಪರಮೇಶ್ವರಾಯ ನಮಃ | ಈ ಮಂತ್ರಜಪವನ್ನು ಮಾಡಲು ಹೇಳಿದ್ದಾರೆ. ಅವರು ಹೇಳಿದಂತೆ ‘ಓಂ ಹ್ರೂಂ ಹ್ರೀಂ ಶ್ರೀ ಅಘೋರ ಪರಮೇಶ್ವರಾಯ ನಮಃ | ಈ ಮಂತ್ರಜಪವನ್ನು ಶೇ. ೭೫ ರಷ್ಟು ಮತ್ತು ‘ಓಂ ನಿಸರ್ಗದೇವೋ ಭವ… ಈ ನಾಮಜಪವನ್ನು ಶೇ. ೨೫ ರಷ್ಟು ಮಾಡಬೇಕು. ‘ಓಂ ಹ್ರೂಂ ಹ್ರೀಂ ಶ್ರೀ ಅಘೋರ ಪರಮೇಶ್ವರಾಯ ನಮಃ | ಈ ಮಂತ್ರಜಪದ ವಿಷಯದಲ್ಲಿ ಮಹರ್ಷಿಗಳು ಹೇಳುತ್ತಾರೆ, ‘ಶಿವನ ಕೈಯಲ್ಲಿರುವ ತ್ರಿಶೂಲದ ೩ ತುದಿಗಳು ಮೇಲಿನ ದಿಕ್ಕಿನಲ್ಲಿರುತ್ತವೆ. ತ್ರಿಶೂಲದ ಈ ತುದಿಗಳನ್ನು ಭೂಮಿಯ ದಿಕ್ಕಿನತ್ತ ಮಾಡಿದರೆ ಹೇಗೆ ಅದರಲ್ಲಿರುವ ಶಕ್ತಿಯು ಕಾರ್ಯನಿರತ ವಾಗುವುದೋ ಅದೇ ರೀತಿ ಈ ಮಂತ್ರಜಪವು ಆಪತ್ಕಾಲದಲ್ಲಿ ಕಾರ್ಯ ಮಾಡುವುದು. ಕುಳಿತುಕೊಂಡು ವೈಯಕ್ತಿಕ ನಾಮಜಪ ಮಾಡುವ ಸಾಧಕರು ೧೧.೫.೨೦೧೭ ರಿಂದ ಮಾಡಬೇಕಾದ ಉಪಾಯದ ಬಗ್ಗೆ ನೀಡಿದ ಸೂಚನೆಗನುಸಾರ ಪ್ರಾಣಶಕ್ತಿವಹನ ಉಪಾಯಪದ್ಧತಿಯಿಂದ ಜಪವನ್ನು ಕಂಡುಹಿಡಿದು ಉಪಾಯ ಮಾಡಬೇಕು ಮತ್ತು ಮಹರ್ಷಿಗಳ ಆಜ್ಞಾಪಾಲನೆ ಎಂದು ಅವರು ನೀಡಿದ ಎರಡೂ ನಾಮಜಪಗಳನ್ನು ಮೇಲಿನ ಪ್ರಮಾಣದಲ್ಲಿ ಕಡಿಮೆ ಪಕ್ಷ ೧೫ ರಿಂದ ೨೦ ನಿಮಿಷ ಮಾಡಬೇಕು. ೧೧.೫.೨೦೧೭ ರಂದು ನೀಡಿದ ಸೂಚನೆಯಲ್ಲಿ ಮಹರ್ಷಿಗಳು ಹೇಳಿದ ನಾಮಜಪವನ್ನು ಹೊರತುಪಡಿಸಿ ಇತರ ಯಾವುದೇ ಬದಲಾವಣೆ ಇಲ್ಲ. ಆದುದರಿಂದ ಅದೇ ರೀತಿಯಲ್ಲಿ ಎಲ್ಲ ಉಪಾಯಗಳನ್ನು ಮಾಡಬೇಕು. – (ಸದ್ಗುರು) ಸೌ. ಅಂಜಲಿ ಗಾಡಗೀಳ (೨೫.೫.೨೦೧೭)