ಮಹರ್ಷಿಗಳು ಸಾಧಕರಿಗಾಗಿ ಹೇಳಿದ ‘ಓಂ ಹ್ರೂಂ ಹ್ರೀಂ ಶ್ರೀ ಅಘೋರ ಪರಮೇಶ್ವರಾಯ ನಮಃ | ಈ ಮಂತ್ರಜಪದ ಮಹತ್ವ !

‘ಮಹರ್ಷಿಗಳು ಸಾಧಕರಿಗಾಗಿ ಹೇಳಿದ ‘ಓಂ ಹ್ರೂಂ ಹ್ರೀಂ ಶ್ರೀ ಅಘೋರಪರಮೇಶ್ವರಾಯ ನಮಃ | ಈ ಮಂತ್ರಜಪದ ಬಗ್ಗೆ ಪೂ. ಡಾ. ಓಂ ಉಲಗನಾಥನ್‌ರವರು, “ಇದು ಶಿವನ ವಿಷಯದ ಮಂತ್ರಜಪವಾಗಿದೆ. ‘ಅಘೋರಾಸ್ತ್ರ ಇದು ಶಿವನು ಧಾರಣೆ ಮಾಡಿದ ಅಸ್ತ್ರಗಳ ಪೈಕಿ ಒಂದಾಗಿದೆ; ಆದರೆ ಈ ಅಸ್ತ್ರ ನಮಗೆ ಪ್ರತ್ಯಕ್ಷ ಕಾಣಿಸುವುದಿಲ್ಲ; ಏಕೆಂದರೆ ಅದು ಸೂಕ್ಷ್ಮವಾಗಿದೆ, ಈ ಮಂತ್ರಜಪ ಮಾಡಿದ ನಂತರ ಅದು ಜಾಗೃತವಾಗುತ್ತದೆ. ಇದು ಕರಣಿಬಾಧೆ, ಶತ್ರುಬಾಧೆ, ದೃಷ್ಟಿದೋಷ, ಅನೇಕ ರೀತಿಯ ಶಾರೀರಿಕ ರೋಗ ಹಾಗೂ ಇತರ ಅನೇಕ ರೀತಿಯಿಂದಾಗುವ ಅನಿಷ್ಟ ಶಕ್ತಿಗಳ ತೊಂದರೆಗಳಿಂದ ಸಾಧಕರನ್ನು ರಕ್ಷಿಸುವ ಮಂತ್ರಜಪವಾಗಿದೆ. ಈ ಮಂತ್ರಜಪದ ಅರ್ಥವೇನೆಂದರೆ – ‘ಅಘೋರಾಸ್ತ್ರ ಧಾರಣೆ ಮಾಡಿದ ಹೇ ಶಿವರೂಪಿ ಪರಮೇಶ್ವರ, ನಾನು ನಿಮಗೆ ನಮಸ್ಕಾರ ಮಾಡುತ್ತೇನೆ. ಸಾಧಕರು ಈ ಜಪವನ್ನು ಮನಃಪೂರ್ವಕವಾಗಿ ಮಾಡಿದರೆ ಅನಿಷ್ಟ ಶಕ್ತಿಗಳ ಆಕ್ರಮಣಗಳಿಂದ ಹಾಗೂ ಉಪದ್ರವಗಳಿಂದ ಅವರ ರಕ್ಷಣೆಯಾಗುವುದು. – (ಸದ್ಗುರು) ಸೌ. ಅಂಜಲಿ ಗಾಡಗೀಳ, ಚೆನ್ನೈ, ತಮಿಳುನಾಡು. (೩.೬.೨೦೧೭, ಮಧ್ಯಾಹ್ನ ೪.೨೬)