ಸಬೋಟೇಜ್ ಮತ್ತು ಸಬ್‌ವರ್ಶನ್ : ಐಎಸ್‌ಐ ಆರಂಭಿಸಿದ ಸದ್ದಿಲ್ಲದ ಯುದ್ಧ !

ಬ್ರಿಗೇಡಿಯರ್ (ನಿವೃತ್ತ) ಹೇಮಂತ ಮಹಾಜನ

ಪಾಕಿಸ್ತಾನವು ನಮ್ಮ ವಿರುದ್ಧ ಸದ್ದಿಲ್ಲದೆ ಆರಂಭಿಸಿದ ತೆರೆ ಮರೆಯ ಯುದ್ಧದ ಇನ್ನೊಂದು ವಿಧವು ಕೆಲವು ತಿಂಗಳ ಹಿಂದೆ ನೇಪಾಳದಲ್ಲಿ ಬಂಧಿಸಿದ ಐಎಸ್‌ಐ ಯ ಏಜೆಂಟ್‌ನಿಂದ ಬೆಳಕಿಗೆ ಬಂದಿದೆ. ದೇಶದ ವಿಷಯದ ಸಂವೇದನಾಶೀಲ ಮಾಹಿತಿಯು ಶತ್ರುವಿಗೆ ತಿಳಿಯಬಾರದು (ಸೆಕ್ಯೂರಿಟಿ ಆಫ್ ಇನ್ಫಾರ್ಮೇಶನ್), ನಾಗರಿಕರನ್ನು ದುಷ್ಕೃತ್ಯ ಮಾಡಲು ಪ್ರವೃತ್ತಗೊಳಿಸುವುದು (ಸಬ್‌ವರ್ಶನ್) ಮತ್ತು ರಾಷ್ಟ್ರೀಯ ಆಸ್ತಿಪಾಸ್ತಿ ನಾಶಗೊಳಿಸುವದು (‘ಸಬೋಟೇಜ್), ಸದ್ಯ ಈ ಮೂರು ಹಂತದಲ್ಲಿ ಪಾಕಿಸ್ತಾನಿ ಐಎಸ್‌ಐ ನಮ್ಮ ದೇಶಕ್ಕೆ ಅಪಾಯವನ್ನುಂಟು ಮಾಡುತ್ತಿದೆ.

೧. ರೈಲು ಅಪಘಾತಗಳ ಹಿಂದೆ ಪಾಕಿಸ್ತಾನದ ಕೈವಾಡ !

ಕಳೆದ ಕೆಲವು ತಿಂಗಳಲ್ಲಿ ನಮ್ಮ ದೇಶದಲ್ಲಿನ ರೈಲು ಅಪಘಾತಗಳ ಪ್ರಮಾಣವು ಹೆಚ್ಚಾಗಿದೆ. ನವೆಂಬರ್ ೨೦೧೬ ರಲ್ಲಿ ಕಾನ್ಪುರದಲ್ಲಿ ನಡೆದ ರೈಲು ಅಪಘಾತದಲ್ಲಿ ೧೪೦ ಪ್ರವಾಸಿಗಳು ಅಸುನೀಗಿದ್ದಾರೆ. ಡಿಸೆಂಬರ್‌ನಲ್ಲಿ ಸಿಯಾಲ್‌ದಾಹ- ಅಜ್ಮೇರ್ ಎಕ್ಸ್‌ಪ್ರೆಸ್ಸ್‌ಗೆ ಅಪಘಾತವಾಗಿತ್ತು. ಇದರಲ್ಲಿ ಕಾನ್ಪುರದಲ್ಲಿನ ರೈಲು ಅಪಘಾತದ ಹಿಂದೆ ಪಾಕಿಸ್ತಾನದ ಗೂಢಚಾರ ವಿಭಾಗದ ಕೈವಾಡವಿದೆಯೆಂದು ಬಿಹಾರ್ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಿಂದುಸ್ಥಾನವು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಮಾಡಿದ ‘ಸರ್ಜಿಕಲ್ ಸ್ಟ್ರೈಕ್ ಸೇಡು ತೀರಿಸಲು ಕಾನ್ಪುರದಲ್ಲಿನ ದುರ್ಘಟನೆಯಾಗಿದೆ, ಎಂದು ಬಿಹಾರ್ ಪೊಲೀಸರ ವಶದಲ್ಲಿರುವ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇಂದೂರ್-ಪಟ್ನಾ ಎಕ್ಸ್‌ಪ್ರೆಸ್ ಮತ್ತು ಸಿಯಾಲದಾಹ-ಅಜ್ಮೇರ್ ಎಕ್ಸ್‌ಪ್ರೆಸ್ ಈ ರೈಲ್ವೆಗಳ ಎರಡು ಅಪಘಾತಗಳಲ್ಲಿ ಉಮಾಕಾಂತ ಪಟೇಲ್, ಮೋತಿಲಾಲ್ ಪಾಸ್ವಾನ್, ಮುಕೇಶ ಯಾದವ ಈ ಮೂವರ ಮೇಲೆ ರೈಲ್ವೇ ಹಳಿಯ ಮೇಲೆ ಕುಕರ್ ಬಾಂಬ್ ಇಟ್ಟಿರುವ ಸಂಶಯವಿದೆ.

೨. ಭಾರತ-ನೇಪಾಳ ಗಡಿಯ ಮೇಲೆ ಜಿಹಾದಿಗಳ ದೃಷ್ಟಿ !

ಈ ಹಿಂದೆ ನೇಪಾಳದ ಪೊಲೀಸರು ಐಎಸ್‌ಐಯ ‘ಹ್ಯಾಂಡಲರ್ ಬ್ರಿಜ್ ಕಿಶೋರ ಗಿರಿ ಮತ್ತು ಮುಜಾಹಿರ್ ಅನ್ಸಾರಿ ಇವರನ್ನು ವಶಪಡಿಸಿ ಕೊಂಡಿದ್ದಾರೆ. ಇದರಿಂದ ನೇಪಾಳದ ಗಡಿ ಎಷ್ಟು ಅಪಾಯಕಾರಿಯಾಗಿದೆ, ಎಂಬುದರ ಗಾಂಭೀರ್ಯವು ನಮಗೆ ತಿಳಿಯಬಹುದು. ಇಷ್ಟರವರೆಗೆ ಕಾಶ್ಮೀರದ ಗಡಿಯಿಂದ ಎಷ್ಟು ಉಗ್ರವಾದಿಗಳು ಒಳಗೆ ಬಂದಿರ ಬಹುದೋ, ಅದಕ್ಕಿಂತಲೂ ಹೆಚ್ಚು ನೇಪಾಳದ ಗಡಿಯಿಂದ ನುಸುಳುತ್ತಿದ್ದಾರೆ. ಕಾನ್ಪುರದ ರೈಲು ಅಪಘಾತವು ಪೂರ್ವನಿಯೋಜಿತವಾಗಿತ್ತು. ಈ ಅಪಘಾತಕ್ಕೆ ಪಾಕಿಸ್ತಾನಿ ಐಎಸ್‌ಐ ಸಂಬಂಧ ಪಟ್ಟಿದೆ. ಇವೆಲ್ಲ ಘಟನೆಗಳಲ್ಲಿ ಶಮ್‌ಶುಲ್ ಶುದಾ ಮುಂಚೂಣಿಯಲ್ಲಿದ್ದನು. ಅವನು ನೇಪಾಳದಲ್ಲಿನ ತನ್ನ ಏಜೆಂಟರೊಂದಿಗೆ ನಿರುದ್ಯೋಗಿ ಯುವಕರನ್ನು ತನ್ನ ಜಾಲದಲ್ಲಿ ಎಳೆಯುತ್ತಿದ್ದನು. ಹಣದ ಆಮಿಷವನ್ನು ತೋರಿಸಿ ಉಗ್ರವಾದಿ ಕೃತ್ಯಗಳನ್ನು ಮಾಡಲು ಪ್ರವೃತ್ತಗೊಳಿಸಲಾಗುತ್ತಿತ್ತು. ಈ ಪದ್ಧತಿಯಲ್ಲಿ ನೇಪಾಳದಿಂದ ಇಬ್ಬರು ಮತ್ತು ಹಿಂದೂಸ್ಥಾನದಿಂದ ಮೂವರನ್ನು ಈ ಒಳಸಂಚಿನಲ್ಲಿ ಸೇರಿಸಿಕೊಳ್ಳಲಾಗಿತ್ತು. ಹಿಂದೂಸ್ಥಾನ-ನೇಪಾಳ ಗಡಿಯು ಅಪಾಯಕಾರಿಯಾಗಿದೆ. ಹಿಂದೂಸ್ಥಾನ – ಬಾಂಗ್ಲಾದೇಶ ಮತ್ತು ಹಿಂದೂಸ್ಥಾನ – ನೇಪಾಳ ಗಡಿಯಲ್ಲಿನ ಮದರಸಾಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ. ಉಗ್ರವಾದದ ಪ್ರಸಾರಕ್ಕಾಗಿ ಮದರಸಾಗಳನ್ನು ಉಪಯೋಗಿಸಲಾಗುತ್ತದೆ. ಗಡಿಭದ್ರತಾ ದಳವನ್ನು ಗಡಿಯಲ್ಲಿ ನೇಮಕ ಮಾಡಲಾಗಿದೆ. ಅವರಿಗೆ ನುಸುಳು ಕೋರರನ್ನು ತಡೆಗಟ್ಟಲು ಅಸಾಧ್ಯವಾಗಿದೆ. ಗಡಿ ರಕ್ಷಕ ದಳದವರು ನೇಪಾಳದ ಒಳಗೆ ಹೋಗಿ ದುಷ್ಕರ್ಮಿಗಳನ್ನು ಹಿಡಿಯಬೇಕು.

೩. ಭಾರತವನ್ನು ಕೊರೆಯುತ್ತಿರುವ ಜಿಹಾದಿ ಉಗ್ರವಾದ !

ಭಾರತದ ‘ನ್ಯಾಶನಲ್ ಇನ್ವೆಸ್ಟಿಗೇಶನ್ ಏಜನ್ಸಿ (ರಾಷ್ಟ್ರೀಯ ತನಿಖಾ ವಿಭಾಗ) ಮತ್ತು ಗೂಢಚಾರ ಸಂಘಟನೆರಾದ ಅಧಿಕಾರಿಗಳು ಮುಂದಿನ ವಿಚಾರಣೆ ಮಾಡುತ್ತಿದ್ದಾರೆ. ಮುಖ್ಯ ಆರೋಪಿ ದುಬೈಗೆ ಪಲಾಯನ ಗೈದಿದ್ದಾನೆ. ಅವನನ್ನು ನೇಪಾಳ ಸರಕಾರದ ಸಹಾಯದಿಂದ ಹಿಂದೂಸ್ಥಾನಕ್ಕೆ ತರಲು ಪ್ರಯತ್ನ ನಡೆದಿದೆ. ಒಂದು ಅಂದಾಜು ಪ್ರಕಾರ ಹಿಂದೂಸ್ಥಾನದಲ್ಲಿ ೨೦೦ ರಿಂದ ೨೫೦ ಉಗ್ರವಾದಿ ‘ಸೆಲ್ ಇರಬಹುದು, ಅವರನ್ನು ವಿವಿಧ ಪ್ರಕಾರದ ಉಗ್ರವಾದಿ ಕೃತ್ಯಗಳನ್ನು ಮಾಡಲು ಉತ್ತೇಜಿಸಲಾಗುತ್ತಿದೆ. ಪ್ರತಿವರ್ಷ ಇಂತಹ ೨೦ ರಿಂದ ೨೫ ‘ಸೆಲ್ಸ್ ಗಳನ್ನು ಪತ್ತೆಹಚ್ಚಿ ನಾಶಗೊಳಿಸಲಾಗುತ್ತದೆ. ಆದರೆ ಅವುಗಳ ಸ್ಥಾನದಲ್ಲಿ ಹೊಸ ‘ಸೆಲ್ಗಳು ನಿರ್ಮಾಣವಾಗುತ್ತವೆ. ಇಂತಹ ಪ್ರತಿಯೊಂದು ‘ಸೆಲ್ನಲ್ಲಿ ೫ ರಿಂದ ೧೦ ಉಗ್ರ ಪ್ರವೃತ್ತಿಯ ಯುವಕರು ಇರಬಹುದು. ಅವರು ಐಎಸ್‌ಐಯ ಆದೇಶದಂತೆ ಉಗ್ರವಾದಿ ಕೃತ್ಯಗಳನ್ನು ಮಾಡುತ್ತಿರುತ್ತಾರೆ. ೨೦೧೬ ರಲ್ಲಿ ‘ನ್ಯಾಶನಲ್ ಇನ್ವೆಸ್ಟಿಗೇಶನ್ ಏಜನ್ಸಿಯು ೫೨ ಹಿಂದೂಸ್ಥಾನಿ ಉಗ್ರವಾದಿಗಳನ್ನು ಬಂಧಿಸಿದೆ. ಬಂಧನಕ್ಕೊಳಗಾದ ಹೆಚ್ಚಿನ ಉಗ್ರವಾದಿಗಳು ೨೫-೩೫ ವರ್ಷದವರಾಗಿದ್ದಾರೆ ಇವರೆಲ್ಲರಿಗೂ ತೀವ್ರಗಾಮಿ ವಿಚಾರಸರಣಿಯ ಪರಿಣಾಮವಾಗಿತ್ತು. ಇವರಲ್ಲಿ ಹೆಚ್ಚಿನವರು ವಿದ್ಯಾವಂತರು ಮತ್ತು ಒಳ್ಳೆಯ ಆರ್ಥಿಕ ಹಿನ್ನೆಲೆ ಇರುವ ಮನೆಯಿಂದ ಬಂದವರು. ಹಿಂದೆ ಕೇವಲ ಬಡತನ ವಿರುವ ಯುವಕರೇ ಉಗ್ರವಾದಿ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗ ಮಾತ್ರ ಇಂಟರ್‌ನೆಟ್‌ನ ಜಾಲದಲ್ಲಿ ಸಿಲುಕಿದ ಮಧ್ಯಮ ವರ್ಗದ ಅನೇಕ ಯುವಕರು ಉಗ್ರವಾದಿ ಸಂಘಟನೆಗಳಲ್ಲಿ ಸೇರಿ ಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಇವರಲ್ಲಿ ಶೇ. ೫೦ ರಷ್ಟು ಅಲ್‌ಹದೀತ್, ಶೇ. ೩೦ ರಷ್ಟು ತಬಲಗಿ ಮತ್ತು ಶೇ. ೨೦ ರಷ್ಟು ದೇವಬಂದಿ ವಿಚಾರ ಸರಣಿ ಯವರಾಗಿದ್ದಾರೆ. ಇವರಲ್ಲಿ ಶೇ. ೮೫ ರಷ್ಟು ಸುನ್ನಿಗಳಾಗಿದ್ದಾರೆ ಹಾಗೂ ಶೇ. ೧೫ ರಷ್ಟು ಇತರ ಧರ್ಮದಿಂದ ಇಸ್ಲಾಮ್ ಪಂಥಕ್ಕೆ ಮತಾಂತರವಾದ ವರಾಗಿದ್ದಾರೆ. ಇದರಿಂದ ಐಎಸ್‌ಐ ಮತ್ತು ಐಸಿಸ್ ಇವೆರಡೂ ಸಂಘಟನೆಗಳ ಪ್ರಭಾವ ಎಷ್ಟು ಗಹನ ವಾಗಿದೆ ಎಂಬುದು ಅರಿವಾಗುತ್ತದೆ. ಬಂಧಿಸಲ್ಪಟ್ಟಿರುವ ಯುವಕರು ಕೆಲವು ಬೆರಳೆಣಿಕೆಯಷ್ಟು ಕಾಣಬಹುದು. ಅವರ ಹೊರತು ಅನೇಕ ಯುವಕರು ದೇಶದಲ್ಲಿ ಕೆಲಸ ಮಾಡುತ್ತಿರಬಹುದು. ೧೯೭೧ ರ ಯುದ್ಧದಲ್ಲಿ ಸೋತ ನಂತರ ಪಾಕಿಸ್ತಾನ ಹೀಗೆ ವಿವಿಧ ರೀತಿಯಲ್ಲಿ ಹಿಂದೂಸ್ಥಾನದ ವಿರುದ್ಧ ಯುದ್ಧ ಸಾರುತ್ತಿದೆ.

೪. ಐಎಸ್‌ಐಯ ಜಿಹಾದಿ ಉದ್ದೇಶವನ್ನು ವಿಫಲಗೊಳಿಸಲು ಜಾಗರೂಕತೆಯು ಆವಶ್ಯಕ ರಾಷ್ಟ್ರದ ಸಂಪತ್ತನ್ನು ಮೂರು ಭಾಗಗಳಲ್ಲಿ ವಿಭಜಿಸಬಹುದು.

ಮೊದಲು- ರಾಷ್ಟ್ರದ ವಿಷಯದಲ್ಲಿ ಗೌಪ್ಯ ಮಾಹಿತಿಯು ( secret information) ಶತ್ರುವಿಗೆ ತಲುಪಬಾರದು, ಉದಾ. ಸಂರಕ್ಷಣೆಯ ಸಿದ್ಧತೆ, ನಮ್ಮಲ್ಲಿರುವ ಶಸ್ತ್ರಗಳು. ಎರಡು – ರಾಷ್ಟ್ರದ ಜನರು. ನಮ್ಮ ಕೆಲವು ನಾಗರಿಕರನ್ನು ದುಷ್ಕೃತ್ಯ ಮಾಡಲು ಹುರಿದುಂಬಿಸಲಾಗುತ್ತದೆ. ಇದಕ್ಕೆ ಸಬವರ್ಶನ್ ( sub-version) ಎಂದು ಹೇಳಲಾಗುತ್ತದೆ. ಮೂರನೆಯ ಅಪಾಯವೆಂದರೆ ರಾಷ್ಟ್ರೀಯ ಸಂಪತ್ತಿನ ನಾಶಗೊಳಿಸುವುದು, ಅದಕ್ಕೆ ಸಬೋಟೇಜ್ ( sabotage) ಎಂದು ಹೇಳಲಾಗುತ್ತದೆ. ನಾಗಪುರದ ಸಮೀಪ ಪುಲಗಾವ್‌ನಲ್ಲಿನ ಮದ್ದು ಗುಂಡು ಕಾರ್ಖಾನೆ ಬೆಂಕಿಗಾಹುತಿಯಾಗಿತ್ತು. ಅಲ್ಲಿ ೧೦ ಸಾವಿರ ಕೋಟಿಗಿಂತಲೂ ಹೆಚ್ಚು ಬೆಲೆಬಾಳುವ ಮದ್ದುಗುಂಡುಗಳು ಸುಟ್ಟು ಭಸ್ಮವಾಗಿದ್ದವು. ಈ ಆಘಾತವನ್ನು ಐಎಸ್‌ಐಯ ಏಜೆಂಟರು ನಡೆಸಿರಬಹುದು. ಇದಕ್ಕೂ ಮೊದಲು ಮದ್ದುಗುಂಡು ಕಾರ್ಖಾನೆಯಲ್ಲಿನ ಬೆಂಕಿಯ ಆಘಾತಕ್ಕೆ ಇದೇ ಕಾರಣವಾಗಿತ್ತು. ಇಂದು ಐಎಸ್‌ಐ ನಮ್ಮ ದೇಶದ ಕಂಟೋನ್ಮೆಂಟ್ ಅಥವಾ ದೊಡ್ಡ ಶಸ್ತ್ರಗಳನ್ನು ತಯಾರಿಸುವ ಕಾರ್ಖಾನೆಗಳ ಸಮೀಪ ತನ್ನ ಏಜೆಂಟರನ್ನು ನೇಮಕ ಮಾಡಿದೆ. ನಮ್ಮ ಗೂಢಚಾರ ವಿಭಾಗ ಮತ್ತು ಭದ್ರತಾ ದಳದವರು ಸ್ವಲ್ಪ ಸಡಿಲವಾದರೆ, ಅವರು ಒಳಗೆ ನುಗ್ಗಿ ದೊಡ್ಡ ಆಘಾತಗಳನ್ನು ಮಾಡುತ್ತಾರೆ. ಈ ಮೇಲಿನ ಮೂರು ಹಂತದಲ್ಲಿರುವ ಐಎಸ್‌ಐಯ ರಣನೀತಿಯಿಂದ ದೇಶವು ತನ್ನನ್ನು ರಕ್ಷಿಸಿಕೊಳ್ಳ ಬೇಕಾಗುವುದು. ಇದರ ಹೊರತು ‘ಸಬ್‌ವರ್ಶನ್ ಅಂದರೆ ಯುವಕರ ಮನಸ್ಸನ್ನು ಪರಿವರ್ತಿಸಿ ಅವರನ್ನು ಉಗ್ರವಾದಿ ಕೃತ್ಯ ಮಾಡಲು ಸಿದ್ಧಪಡಿಸುವುದು. ಇಂತಹ ಯುವಕರ ಮೇಲೆ ಸಹ ಗಮನವಿಡ ಬೇಕಾಗುವುದು. ಯಾವುದೇ ಯುವಕನು ಜಿಹಾದಿ ಅಥವಾ ಅತಿ ಸಾಮ್ಯವಾದಿ ವಿಚಾರಸರಣಿಯ ಪ್ರಭಾವಕ್ಕೊಳಗಾಗುತ್ತಿದ್ದರೆ ಅಥವಾ ಉಗ್ರವಾದಿ ಸಂಘಟನೆಯಲ್ಲಿ ತೊಡಗುತ್ತಿದ್ದರೆ ಅಥವಾ ಇಂತಹ ಕೃತ್ಯ ಮಾಡಲು ಸಿದ್ಧನಾಗುತ್ತಿದ್ದರೆ, ಅವನ್ನು ತಡೆ ಯಬೇಕಾಗುವುದು. ಸಂಪೂರ್ಣ ದೇಶದ ಮೇಲೆ ಗಮನವಿರಿಸುವುದು ಯಾವುದೇ ಗೂಢಚಾರ ವಿಭಾಗದವರಿಗೆ ಸಾಧ್ಯವಿಲ್ಲ. ಆದ್ದರಿಂದ ಸಾಮಾನ್ಯ ಜನರು ತಮ್ಮ ಅಕ್ಕಪಕ್ಕದಲ್ಲಿ ಏನು ನಡೆಯುತ್ತಿದೆ, ಎಂದು ದೃಷ್ಟಿ ಇಡುವುದು ಆವಶ್ಯಕವಾಗಿದೆ. ರಾಷ್ಟ್ರೀಯ ಸಂಪತ್ತು ನಾಶವಾಗುವುದು ದೊಡ್ಡ ಒಂದು ಅಪಾಯವಾಗಿದೆ. ಅದು ಕೇವಲ ಬಸ್ ನಿಲ್ದಾಣವಿರಲಿ ಅಥವಾ ರೈಲು, ಇದು ರಾಷ್ಟ್ರೀಯ ಸಂಪತ್ತಾಗಿದೆ. ಆದ್ದರಿಂದ ಯಾವುದೇ ಸಂಘಟನೆ ಅಥವಾ ಯುವಕರು ಈ ಸಂಪತ್ತನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದರೆ, ಇಂತಹ ಮಾಹಿತಿಯನ್ನು ಭದ್ರತಾ ದಳಕ್ಕೆ ತಿಳಿಸುವುದು ಆವಶ್ಯವಾಗಿದೆ. – ಬ್ರಿಗೇಡಿಯರ್ (ನಿವೃತ್ತ) ಹೇಮಂತ ಮಹಾಜನ (ಆಧಾರ : brighemantmahajan.blogspot.in)