ಎಲ್ಲಾ ಕ್ಷೇತ್ರಗಳಲ್ಲೂ ಸರ್ವೋಚ್ಛ ಪದವಿಗೆ ತಲುಪಿರುವ ಏಕೈಕ ರಾಷ್ಟ್ರವೆಂದರೆ ಹಿಂದೂ ರಾಷ್ಟ್ರ !

ಪ್ರಾ. ಹೊರೇನ್‌ರವರು ತಮ್ಮ ಹಿಸ್ಟಾರಿಕಲ್ ರಿಸರ್ಚ ಎಂಬ ಗ್ರಂಥದ ಎರಡನೇಯ ಭಾಗದ ೪೫ ನೇಯ ಪುಟದಲ್ಲಿ ಕೇವಲ ಏಷಿಯಾ ಖಂಡದಲ್ಲಿ ಮಾತ್ರವಲ್ಲ ಯೂರೋಪ್ ಖಂಡದ ಜನತೆಯ ಸರ್ವಧರ್ಮದ ಹಾಗೂ ಜ್ಞಾನದ ಉಗಮ ಕೂಡ ಹಿಂದುಸ್ಥಾನದಲ್ಲಿಯೇ ಆಗಿದೆ ಎಂದು ಬರೆದಿದ್ದಾರೆ. ರಾಷ್ಟ್ರದ ಯಾವುದೇ ಅಂಗವನ್ನು ತೆಗೆದುಕೊಂಡರೂ ಅಥವಾ ಮಾನವನ ಬುದ್ಧಿ, ಮನಸ್ಸು, ವಿಕಾಸದ ಯಾವುದೇ ಅಂಗದ ಬಗ್ಗೆ ವಿಚಾರ ಮಾಡಿದರೂ ಪ್ರತಿಯೊಂದರಲ್ಲೂ ಹಿಂದೂ ಜನರೇ ಶ್ರೇಷ್ಠ ಹಾಗೂ ಅಗ್ರೇಸರರಾಗಿದ್ದರು. ಈ ರೀತಿಯ ವಿಶೇಷತೆ ಯಾವುದೇ ದೇಶದಲ್ಲೂ ನೋಡಲು ಸಿಗುವುದಿಲ್ಲ. ಯಾವುದೇ ದೇಶವಾದರೂ ಯಾವು ದಾದರೂ ಒಂದರಲ್ಲಿ ಅಂದರೆ ಯುದ್ಧವಿದ್ಯೆಯಲ್ಲಿ, ಅಥವಾ ವ್ಯಾಪಾರದಲ್ಲಿ, ತತ್ತ್ವಜ್ಞಾನದಲ್ಲಿ, ಕಾವ್ಯದಲ್ಲಿ, ಯಾವುದಾದರೂ ಒಂದು ಶಾಸ್ತ್ರದಲ್ಲಿ ಶ್ರೇಷ್ಠ ಪದವಿಯಲ್ಲಿರುತ್ತದೆ; ಆದರೆ ಈ ಎಲ್ಲಾ ಕ್ಷೇತ್ರಗಳಲ್ಲಿಯೂ ಸರ್ವೋಚ್ಛ ಪದವಿಗೆ ತಲುಪಿದ್ದ ಏಕೈಕ ರಾಷ್ಟ್ರವೆಂದರೆ ಅದು ಹಿಂದೂ ರಾಷ್ಟ್ರ. ಆ ರಾಷ್ಟ್ರಕ್ಕೆ ಸಮಾನವಾಗಿರುವ ರಾಷ್ಟ್ರವು ಸಂಪೂರ್ಣ ಭೂಮಂಡಲದಲ್ಲಿ ಮತ್ತೊಂದಿಲ್ಲ. ಅಸಿರೀಯನ್, ಬ್ಯಾಬಿಲಾನಿಯನ್, ಇಜಿಪ್ತಿಯನ್, ಫಿನಿಶಿಯನ್, ಗ್ರೀಕ್, ಇರಾನ್, ರೋಮನ್ ರಾಷ್ಟ್ರಗಳೆಲ್ಲವೂ ಅಸ್ತಿತ್ವಕ್ಕೆ ಬಂದವು, ವೈಭವದ ಶಿಖರಕ್ಕೆ ತಲುಪಿದವು ಹಾಗೂ ಪರಕೀಯರ ಆಕ್ರಮಣದಿಂದ ನಿರ್ನಾಮವಾದವು. ಈ ಎಲ್ಲಾ ಆಕ್ರಮಣಗಳಿಂದ, ವಿಪತ್ತುಗಳಿಂದ ಭಾಗ್ಯಶಾಲಿಯಾಗಿರುವ ಹಿಂದೂ ರಾಷ್ಟ್ರವು ತನ್ನ ಹಿಂದೂಸ್ವರೂಪವನ್ನು ಖಾಯಂ ಆಗಿ ಉಳಿಸಿಕೊಂಡು ಜೀವಂತವಾಗಿದೆ. ಹಿಂದೂ ಧರ್ಮದ ಕಟ್ಟಡವು ಸನಾತನ ಸತ್ಯದ ಮೇಲೆ ನಿಂತಿದೆ. ಅದರಲ್ಲಿ ವಿಶೇಷವಾದ ಕಾಠಿಣ್ಯತೆ ಹಾಗೂ ಶ್ರೇಷ್ಠತೆಯಿದೆ; ಆದ್ದರಿಂದ ಸನಾತನ ಧರ್ಮದ ಮೇಲೆ ಬೆಳದಿರುವ ಹಾಗೂ ಸಂಸ್ಕೃತಿಯನ್ನು ಅನುಭೋಗಿಸಿದ ಹಿಂದೂ ರಾಷ್ಟ್ರ ಜೀವಂತವಾಗಿದೆ. – ಶ್ರೀ. ವಾ.ನಾ. ಉತ್ಪಾತ (ಆಧಾರ : ಸ್ವಾತಂತ್ರ್ಯವೀರ, ದೀಪಾವಳಿ ಸಂಚಿಕೆ, ಇಸ್ವಿ ೨೦೧೪)