ಪರಾತ್ಪರ ಗುರು ಡಾ. ಆಠವಲೆಯವರ ಅವತಾರತ್ವದ ಕುರಿತು ಸನಾತನದ್ವೇಷಿಗಳು ಮಾಡಿರುವ ಟೀಕೆಗಳೆಂದರೆ ಸೂರ್ಯನ ಮೇಲೆ ಉಗುಳುವ ಪ್ರಯತ್ನದಂತಾಗಿದೆ !

ದೀಪದ ಕೆಳಗೆ ಕತ್ತಲೆ ಎಂಬ ನಾಣ್ನುಡಿಯನ್ನು ಸಾರ್ಥಕಗೊಳಿಸುವ ಸನಾತನದ್ವೇಷಿಗಳು ಇದು ವಿಡಂಬಣೆಯಾಗಿದೆ ನಮ್ಮ ಭಾವನೆ ನೋಯಿಸಿದರು !

‘ದಿನಾಂಕ ೧೮ ಮತ್ತು ೧೯ ಮೇ ೨೦೧೭ ರಂದು ಮಹರ್ಷಿಗಳ ಆಜ್ಞೆಯಂತೆ ಸಂಪನ್ನಗೊಂಡ ಅಮೃತ ಮಹೋತ್ಸವ ಸಮಾರಂಭದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಶ್ರೀಕೃಷ್ಣ ಮತ್ತು ಶ್ರೀರಾಮನ ವಸ್ತ್ರಾಲಂಕಾರವನ್ನು ತೊಟ್ಟಿದ್ದರು. ಸದರಿ ಸಮಾರಂಭದ ಕುರಿತು ಕೆಲವು ತಥಾಕಥಿತ ಬುದ್ಧಿಪ್ರಾಮಾಣ್ಯವಾದಿಗಳು ಮತ್ತು ಕೆಲವು ಸನಾತನದ್ವೇಷಿಗಳು ಸಾಮಾಜಿಕ ಪ್ರಸಾರ ಮಾಧ್ಯಮಗಳ ಮೂಲಕ ಅಜ್ಞಾನದಿಂದ ಮತ್ತು ಅತ್ಯಂತ ಕೀಳುಮಟ್ಟಕ್ಕಿಳಿದು ಟೀಕಿಸುತ್ತಿದ್ದಾರೆ. ವಾಸ್ತವದಲ್ಲಿ ಅಧ್ಯಾತ್ಮವು ಜಿಜ್ಞಾಸುಗಳಿಗೆ ಮತ್ತು ಶ್ರದ್ಧಾವಂತರಿಗಾಗಿ ಇದೆ. ದೇವತೆಗಳ ತತ್ತ್ವಗಳನ್ನು ಶಬ್ದಗಳಿಂದಲ್ಲ, ಅನುಭೂತಿಗಳಿಂದ ಅನುಭವಿಸಬೇಕಾಗಿರುತ್ತದೆ. ಯಾರಲ್ಲಿ ಅಧ್ಯಾತ್ಮವನ್ನು ಅರಿತುಕೊಳ್ಳ್ಳುವ ಜಿಜ್ಞಾಸೆ ಮತ್ತು ಶ್ರದ್ಧೆಯಿಲ್ಲವೋ, ಅವರಿಗೆ ಈ ಕುರಿತು ತಿಳಿಸಲು ಎಷ್ಟೇ ಪ್ರಯತ್ನಿಸಿದರೂ, ಬೋರ್ಗಲ್ಲ ಮೇಲೆ ನೀರೆರೆದಂತಾಗುವುದು. ನಾಸ್ತಿಕವಾದಿ ಮತ್ತು ನಿರಂತರವಾಗಿ ವಿರೋಧಕ್ಕಾಗಿ ವಿರೋಧಿಸುವ ಸನಾತನದ್ವೇಷಿಗಳು ಮಾಡುವ ಟೀಕೆಗಳಿಗೆ ಪ್ರತ್ಯುತ್ತರವನ್ನು ನೀಡಲು ನಾವು ಹಿಂದೂ ರಾಷ್ಟ್ರ ಸ್ಥಾಪನೆಯ ವಿಶ್ವಕಲ್ಯಾಣಕಾರಿ ಕಾರ್ಯದ ಸಮಯವನ್ನು ವ್ಯರ್ಥಗೊಳಿಸಲು ಬಯಸುವದಿಲ್ಲ. ಅಧ್ಯಾತ್ಮದಲ್ಲಿನ ಜಿಜ್ಞಾಸುಗಳಿಗಾಗಿ ಮತ್ತು ತಮ್ಮ  ದೇಹ ನಿವಾರಣೆ ಮಾಡಬಯಸುವವರಿಗಾಗಿ ಈ ಪ್ರಶ್ನೋತ್ತರವನ್ನು ಪ್ರಕಟಿಸುತ್ತಿದ್ದೇವೆ.

ನಾಡಿಭವಿಷ್ಯವೆಂದರೆ ಏನು?

ಅಖಿಲ ಮನುಕುಲದ ಬಗ್ಗೆ ಶಿವ-ಪಾರ್ವತಿಯವರ ನಡುವೆ ನಡೆದ ಸಂವಾದವನ್ನು ಸಪ್ತರ್ಷಿಗಳು ಕೇಳಿದರು. ಅವರು ಅದನ್ನು ಮನುಕುಲದ ಕಲ್ಯಾಣಕ್ಕಾಗಿ ಮತ್ತು ಆಧ್ಯಾತ್ಮಿಕ ಜೀವಿಗಳ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಬರೆದಿಟ್ಟರು. ಇದುವೇ ನಾಡಿಭವಿಷ್ಯ. ನಾಡಿಭವಿಷ್ಯ ಒಂದು ಪ್ರಬುದ್ಧ ಜ್ಯೋತಿಷ್ಯಶಾಸ್ತ್ರವಾಗಿದ್ದು, ಅದನ್ನು ತಾಳೆಗರಿಯ ಪಟ್ಟಿಗಳ ಮೇಲೆ ಬರೆಯಲಾಗಿದೆ. ಮಹರ್ಷಿಗಳು ಲಕ್ಷಾಂತರ ವರ್ಷಗಳ ಮೊದಲು ಬರೆದಿಟ್ಟಿರುವ ನಾಡಿಭವಿಷ್ಯವನ್ನು ಓದುವ ಕೌಶಲ್ಯವು ಇಂದು ಅತ್ಯಲ್ಪ ಜನರಲ್ಲಿದೆ. ಸದ್ಯದ ನಾಡಿಪಟ್ಟಿಯ ಮೇಲೆ ತಮಿಳುಭಾಷೆಯಲ್ಲಿ ಮಾಹಿತಿಯನ್ನು ಬರೆಯಲಾಗಿದೆ. ತಮಿಳಿನಲ್ಲಿ ‘ನಾಡಿ ಈ ಶಬ್ದದ ಅರ್ಥ ‘ಶೋಧನೆ ನಡೆಸುವುದು ಸ್ವಲ್ಪದರಲ್ಲಿಯೇ ತಿಳಿಸುವುದೆಂದರೆ ‘ಸ್ವ ಅನ್ನು ಶೋಧಿಸುವುದು ಎಂದರ್ಥ. ನಾಡಿವಾಚಕರ ಬಳಿ ಪ್ರತಿಯೊಬ್ಬ ವ್ಯಕ್ತಿಯ ನಾಡಿಪಟ್ಟಿಯಿರುತ್ತದೆ.

೧ ಅ. ಪರಾತ್ಪರ ಗುರು ಡಾ. ಆಠವಲೆಯವರ ಅವತಾರತ್ವದ ಕುರಿತು ಕೇವಲ ಒಂದೇ ನಾಡಿಪಟ್ಟಿಯಲ್ಲಿ ಅಲ್ಲ, ವಿವಿಧ ನಾಡಿಪಟ್ಟಿಗಳಲ್ಲಿಯೂ ಉಲ್ಲೇಖ

೨೦೧೫ ರಲ್ಲಿ ಜರುಗಿದ ಸಪ್ತರ್ಷಿ ಜೀವನಾಡಿವಾಚನದಲ್ಲಿ ಮಹರ್ಷಿಗಳು ‘ಪರಾತ್ಪರ ಗುರು ಡಾ. ಆಠವಲೆಯವರು ಸ್ವಯಂ ಶ್ರೀವಿಷ್ಣುವಿನ ಅವತಾರವಾಗಿದ್ದಾರೆ, ಎಂದು ಘೋಷಿಸಿದ್ದಾರೆ. ಕೇವಲ ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಷ್ಟೇ ಅಲ್ಲ, ವಸಿಷ್ಠ ನಾಡಿ, ಸೂರ್ಯಕಲಾ ನಾಡಿ, ಶಿವವಾಕ್ಯ ನಾಡಿ, ಭೃಗು ಸಂಹಿತೆಗಳಲ್ಲಿಯೂ ‘ಪರಾತ್ಪರ ಗುರು ಡಾ. ಆಠವಲೆಯವರು ಈಶ್ವರನ ಅವತಾರವಾಗಿದ್ದಾರೆ, ಎನ್ನುವ ಉಲ್ಲೇಖವಿದೆ. ಸುಪ್ರಸಿದ್ಧ ಹಸ್ತರೇಖಾತಜ್ಞರಾದ ಕೆ.ಟಿ ಬಾಲಾಮಣಿಯವರು ಸಹ ಪರಾತ್ಪರ ಗುರು ಡಾ. ಆಠವಲೆಯವರ ಹಸ್ತರೇಖೆಗಳಿಂದ ಅವರ ಕಾರ್ಯವು ಅವತಾರಿ ಕಾರ್ಯವಾಗಿಯೆಂದು ತಿಳಿಸಿದ್ದಾರೆ. ಪ್ರತ್ಯಕ್ಷದಲ್ಲಿಯೂ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗ ದರ್ಶನದಡಿಯಲ್ಲಿ ನಡೆದಿರುವ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದ ವ್ಯಾಪ್ತಿಯನ್ನು ನೋಡಿದರೆ ‘ಈ ಕಾರ್ಯವನ್ನು ಕೇವಲ ಅವತಾರಿ ಸಂತರ ರೂಪದಲ್ಲಿರುವ ಈಶ್ವರನೇ ಮಾಡಬಲ್ಲನು, ಎನ್ನುವುದು ಗಮನಕ್ಕೆ ಬರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರು ಕೇವಲ ಸಂತರಾಗಿರದೇ ಅವರು ‘ಅವತಾರ ಪುರುಷರಾಗಿದ್ದಾರೆ. ಏಕೆಂದರೆ ಸದ್ಯದ ಕಾಲದಲ್ಲಿ ಕೇವಲ ಅವರೇ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪವನ್ನು ಮಂಡಿಸಿದ್ದಾರೆ. ಭಗವಾನ್ ಶ್ರೀಕೃಷ್ಣ, ಪ್ರಭು ಶ್ರೀರಾಮನು ಧರ್ಮ ಸಂಸ್ಥಾಪನೆಯ ಕಾರ್ಯವನ್ನು ಮಾಡಿದಂತೆಯೇ ಹಿಂದೂ ರಾಷ್ಟ್ರದ ರೂಪದಲ್ಲಿ ಪರಾತ್ಪಗುರು ಡಾ. ಆಠವಲೆಯವರು ಇಂದಿಗೂ ಧರ್ಮ ಸಂಸ್ಥಾಪನೆಯ ಕಾರ್ಯವನ್ನು ಮಾಡುತ್ತಿದ್ದಾರೆ. ವ್ಯಷ್ಟಿ ಸ್ತರದಲ್ಲಿ ಮಾರ್ಗದರ್ಶನ ಮಾಡುವ ಅನೇಕ ಸಂತರು ಇರುತ್ತಾರೆ. ಆದರೆ ಇಂದಿನ ಕಾಲದಲ್ಲಿ ಅಂಶಾತ್ಮಕ ಶ್ರೀವಿಷ್ಣುವಿನ ತತ್ತ್ವ ಮತ್ತು ಧರ್ಮ ಸಂಸ್ಥಾಪನೆಯ ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡುತ್ತಿರುವವರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಏಕೈಕ ಗುರುಗಳಾಗಿದ್ದಾರೆ.

೨. ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ಅವತಾರತ್ವದೆಡೆಗೆ ನೋಡುವ ದೃಷ್ಟಿಕೋನ ಹೇಗಿದೆ ? ಅವರು ತಮ್ಮನ್ನು ‘ಅವತಾರವೆಂದು ಹೇಳಿಕೊಳ್ಳುತ್ತಿದ್ದಾರೆಯೇ ? ಮಹರ್ಷಿಗಳು ಪ.ಪೂ. ಡಾಕ್ಟರರನ್ನು ಅವತಾರಿ ಪುರುಷರೆಂದು ಹೇಳುವುದರ ಹಿಂದಿನ ಶಾಸ್ತ್ರ.

‘ಯಾರಾದರೊಬ್ಬ ಸಂತರನ್ನು ಇಂತಹ ಒಂದು ‘ದೇವತೆಯ ಅವತಾರ ಉದಾ. ‘ದತ್ತಾವತಾರ ಎಂದು ಹೇಳಿದಾಗ ಸಂಬಂಧಿತ ದೇವತೆಯ ತತ್ತ್ವ ಆ ವ್ಯಕ್ತಿಯಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ. ನನ್ನ ವ್ಯಷ್ಟಿ ಸಾಧನೆಯಲ್ಲಿ ಶ್ರೀಕೃಷ್ಣನ ಮತ್ತು ಸಮಷ್ಟಿ ಸಾಧನೆಯಲ್ಲಿ (ರಾಮರಾಜ್ಯ ಅಂದರೆ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಬೇಕಾಗಿರುವುದರಿಂದ) ಶ್ರೀರಾಮನ ಉಪಾಸನೆಯಿರುವುದರಿಂದ ನನ್ನಲ್ಲಿ ವಿಷ್ಣುತತ್ತ್ವ ಅಧಿಕ ಪ್ರಮಾಣದಲ್ಲಿದೆ. (ನನಗೆ ‘ಶ್ರೀ ರಾಮ ಜಯ ರಾಮ ಜಯ ಜಯ ರಾಮ ಜಪವೇ ಗುರುಮಂತ್ರವಾಗಿ ದೊರಕಿದೆ) ಆದುದರಿಂದ ನನ್ನನ್ನು ನಾಡಿಭವಿಷ್ಯದ ಭಾಷೆಯಲ್ಲಿ ‘ವಿಷ್ಣುವಿನ ಅವತಾರ ಎಂದು ಹೇಳಲಾಗಿದೆ. ‘ಶ್ರೀ ವಿಷ್ಣುವಿನ ದಶಾವತಾರ ಮತ್ತು ಮಹರ್ಷಿಗಳು ನನ್ನನ್ನು ‘ಅವತಾರ ಎಂದು ಹೇಳುವುದರಲ್ಲಿ ಇರುವ ಮುಖ್ಯ ವ್ಯತ್ಯಾಸವೆಂದರೆ ವಿಷ್ಣುವಿನ ದಶಾವತಾರದಲ್ಲಿ ವಿಷ್ಣುತತ್ತ್ವ ಬಹಳ ಅಧಿಕ ಪ್ರಮಾಣದಲ್ಲಿದೆ. ಆದರೆ ನನ್ನಲ್ಲಿ ವಿಷ್ಣುತತ್ತ್ವವು ಅಂಶಅಂಶಾತ್ಮಕವಾಗಿದೆ. ಕೆಲವು ಸಲ ‘ಕೃಷ್ಣಾವತಾರ ಎಂದು ನನ್ನನ್ನು ಉಲ್ಲೇಖಿಸಲಾಗುತ್ತದೆ. ಅದರ ಮುಖ್ಯ ಕಾರಣವೇನೆಂದರೆ ನನ್ನ ಸಾಧನೆಯಲ್ಲಿ ಗೀತೆಯಲ್ಲಿ ತಿಳಿಸಿರುವ ಜ್ಞಾನ, ಭಕ್ತಿ ಮತ್ತು ಕರ್ಮಗಳ ಸಾಧನೆಯಿದೆ ಮತ್ತು ಅದೂ ಸಮಷ್ಟಿ ಕೃಷ್ಣತತ್ತ್ವ ರೂಪದಲ್ಲಿದೆ. – (ಪರಾತ್ಪರ ಗುರು) ಡಾ. ಆಠವಲೆ

ಪ್ರತ್ಯಕ್ಷದಲ್ಲಿಯೂ ಅನೇಕ ಸಂತರು, ಮಹರ್ಷಿಗಳು ಪರಾತ್ಪರ ಗುರು ಡಾ. ಆಠವಲೆಯವರನ್ನು ‘ ಅವತಾರ ಎಂದು ಘೋಷಿಸಿದರೂ ಪರಾತ್ಪರ ಗುರು ಡಾ. ಆಠವಲೆಯವರು ನಿರಂತರವಾಗಿ ಶಿಷ್ಯಭಾವದಲ್ಲಿರುತ್ತಾರೆ.

ಆಶ್ರಮದಲ್ಲಿಯೂ ‘ಗುರು ಎಂದು ಯಾವುದೇ ದೊಡ್ಡಸ್ಥಿಕೆಯನ್ನು ಇಟ್ಟುಕೊಳ್ಳದೇ ಶಿಷ್ಯಭಾವದಲ್ಲಿಯೇ ಇರುತ್ತಾರೆ. ಈ ವಯಸ್ಸಿನಲ್ಲಿಯೂ ಮತ್ತು ಅತ್ಯಂತ ಗಂಭೀರ ಶಾರೀರಿಕ ಸ್ಥಿತಿಯಲ್ಲಿಯೂ ಅವರು ಅಖಿಲ ಮನುಕುಲಕ್ಕೆ ಮುಂದಿನ ಸಾವಿರಾರು ವರ್ಷಗಳವರೆಗೆ ಮಾರ್ಗದರ್ಶಕವಾಗಿರುವ ಗ್ರಂಥಗಳನ್ನು ಬರೆಯುವ ಕಾರ್ಯವನ್ನು ಮಾಡುತ್ತಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಅವರ ಆದರ್ಶ ಜೀವನ ಮತ್ತು ಅತ್ಯಲ್ಪ ಕಾಲಾವಧಿಯಲ್ಲಿ ವ್ಯಾಪಕಗೊಳ್ಳುತ್ತಿರುವ ಅವರ ಕಾರ್ಯ ವ್ಯಾಪ್ತಿಯೇ ಅವರ ಅವತಾರತ್ವದ ಪಾವತಿಯಾಗಿದೆ. ಪರಾತ್ಪರ ಗುರು ಡಾ. ಆಠವಲೆಯವರು ಕೇವಲ ಒಂದೇ ವಿಷಯದಲ್ಲಿ ಅಲ್ಲ ಪ್ರತಿಯೊಂದು ವಿಷಯದಲ್ಲಿನ ಆಳವಾದ ಆಧ್ಯಾತ್ಮಿಕ ಜ್ಞಾನದಿಂದ ಪರಿಪೂರ್ಣವಾಗಿದ್ದಾರೆ.

೩. ಅನೇಕ ಸಂತರು ಈ ಭೂಮಿಯ ಮೇಲೆ ಆಗಿಹೋಗಿದ್ದಾರೆ; ಆದರೆ ಅವರು ತಮ್ಮನ್ನು ಎಂದಿಗೂ ‘ಅವತಾರ ಎಂದು ಹೇಳಿಕೊಂಡಿರಲಿಲ್ಲ ?

ಗುರು ಡಾ. ಆಠವಲೆಯವರು ಕೇವಲ ಒಂದೇ ವಿಷಯದಲ್ಲಿ ಅಲ್ಲ ಪ್ರತಿಯೊಂದು ವಿಷಯದಲ್ಲಿನ ಆಳವಾದ ಆಧ್ಯಾತ್ಮಿಕ ಜ್ಞಾನದಿಂದ ಪರಿಪೂರ್ಣವಾಗಿದ್ದಾರೆ. ಆಗಿ ಹೋಗಿದ್ದಾರೆ. ದತ್ತಾವತಾರಿ ಸಂತ ಪ.ಪೂ. ಟೆಂಬೆಸ್ವಾಮಿ ಮಹಾರಾಜರು, ಅಕ್ಕಲಕೋಟ(ಸೋಲಾಪೂರ ಜಿಲ್ಲೆ)ದ ಶ್ರೀಸ್ವಾಮಿ ಸಮರ್ಥ, ಸ್ವಾಮಿ ದತ್ತಾವಧೂತರನ್ನು ‘ದತ್ತಾವತಾರ ಎಂದೂ, ಹಾಗೆಯೇ ‘ಶಿವಾವತಾರ ಎಂದು ಕೊಲ್ಹಾಪುರದ ಪ.ಪೂ. ಶಾಮರಾವ ಮಹಾರಾಜ ಇವರಿಗೆ ಸಮಾಜವು ಗೌರವಾದರಗಳಿಂದ ಸ್ಥಾನವನ್ನು ನೀಡಿದೆ. ಅವರ ಅವತಾರತ್ವದ ಕುರಿತು ಅಂದಿನ ಕಾಲದಲ್ಲಿಯೂ ಅವರ ಭಕ್ತರಿಗೆ ಮತ್ತು ಸಮಾಜದ ಅನೇಕ ಜನರಿಗೂ ಅನುಭೂತಿಗಳು ಬಂದಿವೆ ಹಾಗೂ ಇಂದಿಗೂ ಬರುತ್ತಿವೆ. ಆ ಅವತಾರದಂತೆಯೇ ಪರಾತ್ಪರ ಗುರು ಡಾ. ಆಠವಲೆಯವರನ್ನೂ ‘ಶ್ರೀವಿಷ್ಣುವಿನ ಅವತಾರ ಎಂದು ಸಂಬೋಧಿಸಲಾಗುತ್ತಿದೆ. ಅವರ ಅವತಾರತ್ವದ ವಿಷಯದಲ್ಲಿ ಅನೇಕ ಸಾಧಕರಿಗೆ ಹಾಗೂ ಧರ್ಮಾಭಿಮಾನಿಗಳಿಗೂ ಅನೂಭೂತಿಗಳು ಬರುತ್ತಿವೆ. ಅವತಾರಗಳು ಯಾವತ್ತೂ ತಮ್ಮ ಅವತಾರತ್ವವನ್ನು ಒಪ್ಪಿಕೊಳ್ಳ್ಳುವುದಿಲ್ಲ. ಭಕ್ತರಿಗೆ ಬರುವ ಅನುಭೂತಿಯಿಂದಲೇ ಅವರ ಅವತಾರತ್ವ ಪ್ರಕಟವಾಗುತ್ತಿರುತ್ತದೆ.

೪. ದೇವತೆಗಳ ವಸ್ತ್ರಾಲಂಕಾರ ಧರಿಸುವುದು ವಿಡಂಬನೆಯಾಗಿದೆಯೇ ? ಈ ಮೊದಲೂ ಅನೇಕ ಶಿವಾವತಾರಿ ಮತ್ತು ದತ್ತಾವತಾರಿ ಸಂತರು

೪ ಅ. ವಿಡಂಬನೆಯೆಂದರೇನು? : ಕೇವಲ ಶ್ರೀಕೃಷ್ಣನ ಮತ್ತು ಶ್ರೀರಾಮನ ವಸ್ತ್ರಾಲಂಕಾರ ಧರಿಸುವುದರಿಂದ ಅವರ ವಿಡಂಬನೆ ಯಾಗುವುದಿಲ್ಲ. ಅಪಾತ್ರ ವ್ಯಕ್ತಿಯು ಕೇವಲ ತೋರಿಕೆಗಾಗಿ ಅಂತಹ ವೇಷಭೂಷಣಗಳನ್ನು ಧರಿಸುವುದು ದೇವರ ವಿಡಂಬನೆಯಾಗುತ್ತದೆ. ಅನೇಕ ಸಲ ದೇವತೆಗಳ ವೇಷಭೂಷಣಗಳನ್ನು ಧರಿಸಿ, ಬಳಿಕ ಸದರಿ ವಸ್ತ್ರಗಳನ್ನು ಅಟ್ಟಕ್ಕೆ ಎಸೆಯಲಾಗುತ್ತದೆ. ಕೆಲವು ಸಲ ಅದನ್ನು ಕಾಲಿನಡಿಯಲ್ಲಿ ತುಳಿಯಲಾಗುತ್ತದೆ. ಇದು ದೇವತೆಯ ವಿಡಂಬನೆಯಾಗಿದೆ. ಒಂದು ತೀರ್ಥಕ್ಷೇತ್ರದಲ್ಲಿ ಚಲನಚಿತ್ರ ನಟರ ರೂಪದಲ್ಲಿ ಶ್ರೀರಾಮ ಮತ್ತು ಸೀತಾಮಾತೆಯ ಚಿತ್ರಗಳನ್ನು ಮಾರಾಟ ಮಾಡಲಾಗುತ್ತಿದೆ. ಆ ಚಲನಚಿತ್ರ ನಟ ಸಿಗರೇಟು ಸೇದುತ್ತಾನೆ ಮತ್ತು ಸೀತೆಯ ರೂಪದಲ್ಲಿರುವ ಆ ನಟಿಯ ಚಾರಿತ್ರ್ಯ ಶುದ್ಧವಾಗಿರಲಿಲ್ಲ. ಚಲನಚಿತ್ರ ಅಥವಾ ಧಾರಾವಾಹಿಯಲ್ಲಿ ಕೆಲಸ ಮಾಡುವವರ ಚಾರಿತ್ರ್ಯ ಅಶುದ್ಧವಾಗಿರುತ್ತದೆ. ಅಲ್ಲದೇ ಅವರು ಅನ್ಯಾಯದ ಕಾರ್ಯದಲ್ಲಿ ಸಿಲುಕಿರುವುದು ಕಂಡು ಬರುತ್ತದೆ. ಇಂತಹ ಸಮಯದಲ್ಲಿ ಅವರು ದೇವತೆಗಳ ವಸ್ತ್ರವನ್ನು ಧರಿಸುವುದು ವಿಡಂಬನೆಯೇ ಆಗಿದೆ. ದೇವತೆಗಳ ವಸ್ತ್ರಗಳನ್ನು ಧರಿಸುವಾಗ ವೇಷ ಮತ್ತು ವೃತ್ತಿ ಒಂದಕ್ಕೊಂದು ಪೂರಕವಾಗಿರಬೇಕು.

೪ ಆ. ಮಹರ್ಷಿಗಳ ಆಜ್ಞೆಯನ್ನು ಪಾಲಿಸಲು ಅಧ್ಯಾತ್ಮದ ಅಧಿಕಾರಿ ಸಂತರು ಶ್ರೀಕೃಷ್ಣ ಮತ್ತು ಶ್ರೀರಾಮನ ವಸ್ತ್ರಾಲಂಕಾರ ಧರಿಸುವುದು ವಿಡಂಬನೆಯಲ್ಲ ! : ಪರಾತ್ಪ್ಪರ ಗುರು ಡಾ.ಆಠವಲೆಯವರಂತಹ ಅಧ್ಯಾತ್ಮದ ಆಧಿಕಾರಿ ವ್ಯಕ್ತಿಯು ಮಹರ್ಷಿಗಳ ಆಜ್ಞೆಯನ್ನು ಪಾಲಿಸುವುದು, ಒಂದು ದೈವೀ ಯೋಗವೇ ಆಗಿದೆ. ಅವರ ವರ್ತನೆಯೂ ಅತ್ಯಂತ ಶುದ್ಧವಾಗಿದೆ. ಕೇವಲ ಅಮೃತ ಮಹೋತ್ಸವದ ದಿನದಂದು ಮಾತ್ರ ಅವರು ಮಹರ್ಷಿಗಳ ಆಜ್ಞೆಯಂತೆ ಶ್ರೀಕೃಷ್ಣ್ಣ ಮತ್ತು ಶ್ರೀರಾಮನಂತೆ ವಸ್ತ್ರಾಲಂಕಾರವನ್ನು ಧರಿಸಿದ್ದರು. ಆ ವಸ್ತ್ರಗಳನ್ನು ಸಹ ನಾವು ಸಾಧಕರು ಗೌರವಾದರದಿಂದ ಸಂಗ್ರಹಿಸಿಟ್ಟಿದ್ದೇವೆ. ಮಹರ್ಷಿಗಳ ಆಜ್ಞಾಪಾಲನೆಯಲ್ಲಿಯೂ ಅವರ ಕಾರಣವು ಶುದ್ಧವಾಗಿತ್ತು. ಹಾಗೆಯೇ ಅಮೃತಮಹೋತ್ಸವ ಸಮಾರಂಭವೂ ಯಾವುದೇ ಸಾರ್ವಜನಿಕ ಕಾರ್ಯಕ್ರಮವಾಗಿರಲಿಲ್ಲ. ಅದು ಕೇವಲ ಸಾಧಕರಿಗೆ ಮಾತ್ರ ಸೀಮಿತವಾಗಿತ್ತು. ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಸಾಧಕರ ಭಕ್ತಿಭಾವ ವೃದ್ಧಿಸಬೇಕೆಂದು ನಾವು ಸನಾತನ ಪ್ರಭಾತದಲ್ಲಿ ಆ ಸಮಾರಂಭದ ಸಮಾಚಾರವನ್ನು ಮತ್ತು ಛಾಯಾಚಿತ್ರಗಳನ್ನು ಪ್ರಕಟಿಸಿದ್ದೆವು.

೪ ಇ. ದೂರಚಿತ್ರವಾಹಿನಿಯಲ್ಲಿ ಸಾತ್ತ್ವಿಕ ರೀತಿಯಲ್ಲಿ ಪ್ರಸಾರವಾಗುವ ‘ರಾಮಾಯಣ ಮತ್ತು ‘ಮಹಾಭಾರತ ಈ ಧಾರಾವಾಹಿಗಳಿಂದ ಭಕ್ತರ ಶ್ರದ್ಧೆಯು ಹೆಚ್ಚಾಗಿತ್ತು : ದೂರದರ್ಶನವಾಹಿನಿಯ ಮೇಲೆ ದೇವತೆಗಳ ವಿಷಯದ ಅನೇಕ ಧಾರಾವಾಹಿಗಳು ಪ್ರಸಾರಗೊಳ್ಳುತ್ತವೆ. ಹಿಂದಿನ ಕಾಲದಲ್ಲಿ ಪ್ರಸಾರವಾಗುವ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಯನ್ನು ಎಲ್ಲೆಡೆಯೂ ಅತ್ಯಂತ ಶ್ರದ್ಧೆಯಿಂದ ನೋಡಲಾಗುತ್ತಿತ್ತು. ಛತ್ರಪತಿ ಶಿವಾಜಿ ಮಹಾರಾಜರು, ಸಂತ ತುಕಾರಾಮ ಮಹಾರಾಜರ ವಿಷಯದಲ್ಲಿ ಅನೇಕ ಚಲನಚಿತ್ರಗಳೂ ನಿರ್ಮಾಣವಾಗಿವೆ. ಒಳ್ಳೆಯ ರೀತಿಯಿಂದ ದೇವತೆಗಳ ಅಥವಾ ದೊಡ್ಡ ಸಂತರ ಚರಿತ್ರೆಯನ್ನು ಪ್ರಸಾರ ಮಾಡುವ ಧಾರಾವಾಹಿಗಳಿಗೆ ವಿಡಂಬನೆಯೆಂದು ಹೇಳಲಾಗುವುದಿಲ್ಲ. ಇದರಿಂದ ಸಾಮಾನ್ಯ ಭಕ್ತರಿಗೆ ‘ಪ್ರಭು ಶ್ರೀರಾಮ ಹೇಗಿದ್ದನು ?, ‘ಭಗವಾನ್ ಶ್ರೀಕೃಷ್ಣ ಹೇಗಿದ್ದರು ?, ಇದು ಅನುಭವಿಸಲು ಸಾಧ್ಯವಾಯಿತು ಮತ್ತು ಶ್ರದ್ಧೆಯೂ ಧೃಢವಾಯಿತು. ಆ ಧಾರಾವಾಹಿಗಳು ಚೆನ್ನಾಗಿ ಪ್ರಸಾರಗೊಳ್ಳುತ್ತವೆ. ಅದೇ ರೀತಿ ಪ್ರಭು ಶ್ರೀರಾಮ ಮತ್ತು ಭಗವಾನ್ ಶ್ರೀಕೃಷ್ಣನ ಮೇಲಿರುವ ಶ್ರದ್ಧೆ ದೃಢವಾಗಲು ಸಾಧಕರ ಪರಾತ್ಪರ ಗುರು ಡಾ. ಆಠವಲೆಯವರನ್ನು ಅವರಂತೆ ವಸ್ತ್ರಾಲಂಕಾರವನ್ನು ಧರಿಸಿದ್ದರು. ಆದರೆ ಇದರಿಂದ ಇತರರಿಗೆ ಹೊಟ್ಟೆಯುರಿಯೇಕೆ ? ವಾಸ್ತವದಲ್ಲಿ ನೋಡಿದರೆ ಪರಾತ್ಪರ ಗುರು ಡಾ. ಆಠವಲೆಯವರ ದಿನಚರ್ಯೆ ಅತ್ಯಂತ ಸರಳವಾಗಿದೆ. ಬಿಳಿ ಬಣ್ಣದ ಹತ್ತಿಯ ನಿಲುವಂಗಿ ಹಾಗೂ ಪೈಜಾಮ ಧರಿಸುತ್ತಾರೆ. ಇದೇ ಅವರ ದಿನನಿತ್ಯ ಉಡುಪಾಗಿದೆ.

೫. ಅವತಾರಿ ಸಂತರನ್ನು ಟೀಕಿಸುವ ಯೋಗ್ಯತೆಯಾದರೂ ಸನಾತನದ್ವೇಷಿಗಳಲ್ಲಿ ಇದೆಯೇ ?

ಇಲ್ಲಿ ಗಮನಿಸಬಹುದಾದ ವಿಷಯವೇನೆಂದರೆ ಕೈಬೆರಳೆಣಿಕೆಯಷ್ಟು ಜನರು ಸಾಮಾಜಿಕ ಪ್ರಸಾರ ಮಾಧ್ಯಮಗಳ ಮುಖಾಂತರ ಪರಾತ್ಪರ ಗುರು ಡಾ. ಆಠವಲೆಯವರನ್ನು ಕಳೆದ ೨ ವರ್ಷಗಳಿಂದ ಟೀಕಿಸುತ್ತಿದ್ದಾರೆ. ಅವರಿಗೆ ಮಾಡಲು ಬೇರೆ ಕಾರ್ಯವೇನಿದೆ ? ಸಂತರನ್ನು ಟೀಕಿಸುವ ಯೋಗ್ಯತೆಯಾದರೂ ಅವರಲ್ಲಿದೆಯೇ ?

೫ ಅ. ಸಾರ್ವಜನಿಕ ಉತ್ಸವದಲ್ಲಿ ಪ್ರತ್ಯಕ್ಷವಾಗಿ ಆಗುವ ವಿಡಂಬನೆಯ ವಿಷಯದಲ್ಲಿ ಸಾಮಾಜಿಕ ಪ್ರಸಾರ ಮಾಧ್ಯಮದ ದಂಡು ಏಕೆ ತೆಪ್ಪಗಿವೆ ? : ಪರಾತ್ಪರ ಗುರು ಡಾ. ಆಠವಲೆಯವರನ್ನು ಶ್ರೀಕೃಷ್ಣ ಮತ್ತು ಶ್ರೀರಾಮನ ರೂಪದಲ್ಲಿ ನೋಡಿದ ಬಳಿಕ ಯಾರಿಗೆ ದೇವತೆಯ ವಿಡಂಬನೆ ನೆನಪಾಗಿದೆಯೋ, ಅವರು ಕ್ರಿಕೆಟ ಆಡುವಾಗ ಶ್ರೀಗಣೇಶನ, ‘ಸೈರಾಟ ಹೆಸರಿನ ಈ ಮರಾಠಿ ಚಲನಚಿತ್ರದ ನಟಿ ಆರ್ಚಿಯಂತೆ ‘ಬಾವಿಯಲ್ಲಿ ಹಾರುವ ಶ್ರೀ ಗಣೇಶ ಈ ವಿಕೃತ ರೂಪದಲ್ಲಿ ಶ್ರೀಮೂರ್ತಿಯು ಮಹಾರಾಷ್ಟ್ರಾದ್ಯಂತ ತಲುಪಿತು, ಆಗ ಎಂದಿಗೂ ‘ಫೇಸಬುಕನಲ್ಲಿ ತಿಳುವಳಿಕೆಯ ಚಳುವಳಿ ನಡೆದಿರುವುದು ಕಂಡು ಬರಲಿಲ್ಲ ಅಥವಾ ಪ್ರಾಯೋಜಕರಿಗೆ ತಮ್ಮ ಪ್ರದರ್ಶನವನ್ನು ಬದಲಾಯಿಸುವ ಸಂದರ್ಭವೇ ಬರಲಿಲ್ಲ. ಕೇವಲ ಸನಾತನದ ಮೇಲೆ ಟೀಕೆ ಮಾಡುವಾಗ ಒಸರುವ ಇವರ ಶಬ್ದಗಳು ಕೇವಲ ಸನಾತನದ್ವೇಷವೇ ಆಗಿದೆ. ಇಂದು ಪರಾತ್ಪ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಡಿಯಲ್ಲಿ ಸಾಧನೆಯನ್ನು ಮಾಡಿದ್ದರಿಂದ ದೇಶ – ವಿದೇಶದಲ್ಲಿರುವ ಸಾವಿರಾರು ಜೀವಿಗಳು ಆನಂದದ ಜೀವನವನ್ನು ಜೀವಿಸುತ್ತಿದ್ದಾರೆ. ಹಾಗೆಯೇ ಈಶ್ವರಪ್ರಾಪ್ತಿಯ ದಿಸೆಯಲ್ಲಿ ಮುನ್ನಡೆಯುತ್ತಿದ್ದಾರೆ. ಟೀಕೆ ಮಾಡುವವರಿಗೆ ಯಾವ ಆಧಾರವಿದೆ ? – ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ

ಸನಾತನ ದ್ವೇಷಿಗಳು ಎಷ್ಟು ಹಾರಾಡಿದರೂ, ಕಾಲಾನುಸಾರ ಪರಾತ್ಪರ ಗುರು ಡಾ. ಆಠವಲೆಯವರ ಅವತಾರಿ ಕಾರ್ಯ ನಡೆದಿದೆ ಎನ್ನುವುದನ್ನು ಗಮನಿಸಿರಿ !

‘ಪ್ರತಿಯೊಂದು ಯುಗದಲ್ಲಿಯೂ ಅವತಾರ ಘಟಿಸಿದೆ ಮತ್ತು ಅವುಗಳ ವರ್ಣನೆಯನ್ನು ಬೇರೆ ಬೇರೆ ಮಹರ್ಷಿಗಳೇ ಮಾಡಿಟ್ಟಿದ್ದಾರೆ. ತ್ರೇತಾಯುಗದಲ್ಲಿ ರಾಮಾಯಣ ನಡೆಯಿತು ಮತ್ತು ಅದನ್ನು ಮಹರ್ಷಿ ವಾಲ್ಮೀಕಿಯವರು ಮೊದಲೇ ಬರೆದಿಟ್ಟಿದ್ದರು. ಬಳಿಕ ದ್ವಾಪರಯುಗದಲ್ಲಿ ಶ್ರೀಕೃಷ್ಣಲೀಲೆಯ ವರ್ಣನೆಯನ್ನು ಮಹರ್ಷಿ ವೇದವ್ಯಾಸರು ಶ್ರೀಗಜಾನನರಿಂದ ಮಹಾಭಾರತದ ರೂಪದಲ್ಲಿ ಬರೆಸಿಕೊಂಡರು ಮತ್ತು ಈಗಲೂ ಇತಿಹಾಸದ ಪುನರಾವರ್ತನೆಯಾಗುತ್ತಿದೆ. ಇಂದಿನ ಕಲಿಯುಗದಲ್ಲಿ ಪ್ರತ್ಯಕ್ಷ ಶ್ರೀವಿಷ್ಣುವಿನ ಅಂಶಾವತಾರವಾದ ಅಂದರೆ ಪರಾತ್ಪ್ಪರ ಗುರು ಡಾಕ್ಟರರ ಚಾರಿತ್ರ್ಯದ ವರ್ಣನೆಯನ್ನು ಮಹರ್ಷಿಗಳೇ ಸಂವಾದಬದ್ಧ ಮಾಡಿಟ್ಟಿದ್ದಾರೆ. ಇದರಲ್ಲಿ ಬುದ್ಧಿಪ್ರಾಮಾಣ್ಯವಾದಿಗಳು ಯಾವುದೇ ಸಂದೇಹ ಪಡಬೇಕಾಗಿಲ್ಲ. ಹೀಗೆ ಪ್ರತಿಯೊಂದು ಯುಗದಲ್ಲಿಯೂ ಘಟಿಸಿದೆ ಮತ್ತು ಮುಂದೆಯೂ ಘಟಿಸಲಿದೆ. ಶ್ರೀಕೃಷ್ಣ ಮತ್ತು ಶ್ರೀರಾಮರ ಮೇಲೆಯೂ ಆರೋಪಗಳನ್ನು ಮಾಡಲಾಗಿತ್ತು. ಆದರೆ ಅದರಿಂದ ಅವರ ಅವತಾರತ್ವಗಳಿಗೆ ಗ್ರಹಣ ಹಿಡಿಯಲಿಲ್ಲ. ಅವುಗಳು ಮತ್ತಷ್ಟು ಪ್ರಖರವಾಗಿ ಬೆಳಗಿದವು.ಅದರಂತೆಯೇ ಸನಾತನದ್ವೇಷಿಗಳು ಎಷ್ಟು ಟೀಕೆ ಮಾಡಿದರೂ ಪರಾತ್ಪರ ಗುರು ಡಾ. ಆಠವಲೆಯವರ ಅವತಾರತ್ವ ಈಶ್ವರಿ ನಿಯೋಜನೆಯನುಸಾರ ಕಾಲಕ್ರಮೇಣ ಪ್ರಕಟಗೊಳ್ಳಲಿದೆ ಮತ್ತು ನಾವು ನಮ್ಮ ಗುರುಗಳ ಮಹಾನತೆಯನ್ನು ಸಂಪೂರ್ಣ ಜಗತ್ತಿನಲ್ಲಿ ಪ್ರಸಾರ ಮಾಡಲಿದ್ದೇವೆ. ದೇವಭೂಮಿಯಾಗಿರುವ ಭಾರತದಲ್ಲಿದ್ದು ಯಾರು ಇಲ್ಲಿಯ ಅವತಾರಿ ಸಂತ ಮಹಾತ್ಮರ ಲಾಭವನ್ನು ಪಡೆದುಕೊಳ್ಳು ವುದರ ಬದಲಾಗಿ, ಅವರನ್ನು ಟೀಕಿಸುತ್ತಾರೆಯೋ, ಅವರಷ್ಟು ನತದೃಷ್ಟರು ಇನ್ಯಾರೂ ಇರಲಾರರು ! – ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕ ವಿಶ್ವಸ್ಥರು, ಸನಾತನ ಸಂಸ್ಥೆ.

ಸಾತಾರದ ಪ್ರಖರ ಧರ್ಮಾಭಿಮಾನಿ ಶ್ರೀ. ಪ್ರಶಾಂತ ಜಾಧವ ಇವರು ಬುದ್ಧಿಪ್ರಾಮಾಣ್ಯವಾದಿಗಳ ಟೀಕೆಗಳಿಗೆ ನೀಡಿದ ದಿಟ್ಟ ಉತ್ತರ ಸನಾತನ ಸಂಸ್ಥೆಯಲ್ಲಿನ ‘ಸದ ಅರ್ಥವೂ ತಿಳಿಯದಿರುವವರು ಮನಬಂದಂತೆ ಕಲ್ಪನೆಯನ್ನು ಮಾಡುವುದು ಅಯೋಗ್ಯ !

ಕೆಲವು ತಥಾಕಥಿತ ಬುದ್ಧಿಪ್ರಾಮಾಣ್ಯವಾದಿಗಳು ಪರಾತ್ಪ್ಪರ ಗುರು ಡಾ.ಆಠವಲೆಯವರ ಟೀಕೆಯನ್ನು ಮಾಡುತ್ತಿದ್ದಾರೆ. ಅವರ ಟೀಕೆಗಳಿಗೆ ಸಾತಾರದ ಪ್ರಖರ ಧರ್ಮಾಭಿಮಾನಿ ಶ್ರೀ. ಪ್ರಶಾಂತ ಜಾಧವ ಇವರು ‘ಫೇಸಬುಕ್ ಮೇಲಿನ ಪೋಸ್ಟ ಮೂಲಕ ದಿಟ್ಟ ಪ್ರತ್ಯುತ್ತರವನ್ನು ನೀಡಿದ್ದಾರೆ. ಜಯ ಶ್ರೀರಾಮ | ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾಕ್ಟರ ಆಠವಲೆಯವರ ಅಮೃತ ಮಹೋತ್ಸವದ ಸಂದರ್ಭದಲ್ಲಿ ಗುರುದೇವರು ರಾಮ ಮತ್ತು ಕೃಷ್ಣನ ಅವತಾರದ ದರ್ಶನ ನೀಡಿರುವ ಬಗ್ಗೆ, ಕೆಲವು ಸ್ವಯಂಘೋಷಿತ ಹಿಂದುತ್ವನಿಷ್ಠರು ಅಪಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಅದರಿಂದ ಅವರ ಬುದ್ಧಿಯ ಮಟ್ಟ ಎಷ್ಟಿದೆ ಎಂಬುದು ಕಂಡುಬರುತ್ತದೆ. ಮಿತ್ರರೇ, ಗುರುದೇವ ಈ ಶಬ್ದದ ವ್ಯಾಪ್ತಿ ಬ್ರಹ್ಮಾಂಡವನ್ನು ವ್ಯಾಪಿಸುವಷ್ಟಿದೆ. ಅದು ಒಬ್ಬ ವ್ಯಕ್ತಿಗಷ್ಟೇ ಸೀಮಿತವಾಗಿಲ್ಲ. ಆದರೆ ಇಂದು ನಾವು ಗುರುತತ್ತ್ವವನ್ನು ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಸೀಮಿತಗೊಳಿಸಿದ್ದೇವೆ. ‘ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ | ಗುರುರೇವ ಪ್ರರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ || ಈ ಶ್ಲೋಕದಲ್ಲಿ ಗುರುಗಳಿಗೆ ಪ್ರತ್ಯಕ್ಷ ಪರಬ್ರಹ್ಮನ ರೂಪವನ್ನು ನೀಡಿದ್ದಾರೆ. ಇಂದು ಪರಾತ್ಪರ ಗುರುಗಳು ಅವತಾರದಲ್ಲಿ ಪ್ರಕಟೀಕರಣ ಗೊಂಡಿರುವುದರ ಬಗ್ಗೆ ನೀವು ಅವರನ್ನು ತಮಾಷೆ ಮಾಡುತ್ತಿದ್ದೀರಿ, ಆ ಅವತಾರವನ್ನು ಗುರುದೇವರು ಸ್ವತಃ ಮನಸ್ಸಿನಿಂದ ಮಾಡಿರುವುದಿಲ್ಲ. ಪ್ರತ್ಯಕ್ಷ ಮಹರ್ಷಿಗಳ ಆಜ್ಞೆಯನುಸಾರ ಮಾಡಿದ್ದಾರೆ. ಇದು ಗುರುತತ್ತ್ವವನ್ನು ಯಾರು ಪರಬ್ರಹ್ಮನ ರೂಪದಲ್ಲಿ ನೋಡುತ್ತಾನೆಯೋ ಅವರಿಗೆ ಮಾತ್ರ ತಿಳಿಯುವುದು. ನಾನು ಯಾವುದೇ ಆಧ್ಯಾತ್ಮಿಕ ವ್ಯಕ್ತಿಯಲ್ಲ ಅಥವಾ ಸಾಧಕನಲ್ಲ, ಆದರೆ ಗುರುದೇವರು ಯಾರದ್ದೇ ಆಗಿದ್ದರೂ ಅಲ್ಲಿ ಗುರುತತ್ತ್ವ ಕಾರ್ಯನಿರತವಾಗಿರುತ್ತದೆ. ಇಂತಹ ಗುರುದೇವರ ಬಗ್ಗೆ ಯಾರಾದರೂ ಪೂರ್ವಾಗ್ರಹದಿಂದ ಟೀಕಿಸಿದರೆ ಪ್ರತ್ಯಕ್ಷ ಭಗವಂತನೇ ನನ್ನಿಂದ ಪ್ರತಿಕ್ರಿಯೆ ಬರೆಸಿಕೊಳ್ಳುವನು ಇದರಲ್ಲಿ ಸಂಶಯವಿಲ್ಲ. ಸನಾತನ ಸಂಸ್ಥೆಯ ‘ಸ ಅರ್ಥವೂ ತಿಳಿದುಕೊಳ್ಳದಿರುವವರು ಸನಾತನ ಹಿಂದೂ ಧರ್ಮದ ವಿಷಯದಲ್ಲಿ ತಮಗೆ ತಿಳಿದಂತೆ ಕಲ್ಪಿಸುವುದು ಅಯೋಗ್ಯ. ಯಾರ ಪ್ರತಿಯೊಂದು ಕಾರ್ಯಕ್ಕೆ ಭಗವಂತನ ಸಹಾಯ ಇರುತ್ತದೆಯೋ ಇಂತಹ ಗುರುದೇವರ ವಿಷಯದಲ್ಲಿ ಪ್ರಸಿದ್ಧಿಗಾಗಿ ಏನು ಬೇಕಾದರೂ ಲೇಖನ ಮಾಡುವುದೆಂದರೆ ಸೂರ್ಯನ ಮೇಲೆ ಉಗುಳಿದಂತಾಗಿದೆ. ಪ್ರಜ್ಞಾವಂತರಾಗಿರುವವರು ಮನಸ್ಸಿನ ಭಾವನೆಗಳನ್ನು ತಿಳಿದುಕೊಳ್ಳಬಲ್ಲರು. – ಶ್ರೀ. ಪ್ರಶಾಂತ ಜಾಧವ