ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಹಿಂದೂ ರಾಷ್ಟ್ರದ ನಿರ್ಮಿತಿಯ ಅನಿವಾರ್ಯ ಪ್ರಕ್ರಿಯೆ : ಸೂಕ್ಷ್ಮದಲ್ಲಿನ ‘ದೇವಾಸುರರ ಯುದ್ಧ !

‘ಭಾರತದಲ್ಲಿ ೨೦೨೩ ರಲ್ಲಿ ‘ಈಶ್ವರೀ ರಾಜ್ಯ ಅಂದರೆ ‘ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು ಎಂಬ ವಿಚಾರವನ್ನು ಸಂತರು ಆಗಾಗ ಮಂಡಿಸಿದ್ದರು. ಈ ಪಾರ್ಶ್ವ ಭೂಮಿಯಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಅನೇಕ ಜನರ ಮನಸ್ಸಿನಲ್ಲಿ ಉತ್ಸುಕತೆ ಇರುತ್ತದೆ. ಇದಕ್ಕಾಗಿಯೇ ’ಹಿಂದೂ ರಾಷ್ಟ್ರದ ಸ್ಥಾಪನೆಯ ದಿಶೆ’ ಈ ವಿಷಯದ ಬಗ್ಗೆ ವೈಶಿಷ್ಟ್ಯಪೂರ್ಣ ಲೇಖನ.’

೧. ದೇವಾಸುರರ ಯುದ್ಧವೆಂದರೇನು ?

‘ಆದರ್ಶ ರಾಷ್ಟ್ರ ಮತ್ತು ನೀತಿವಂತ ಸಮಾಜದ ನಿರ್ಮಿತಿಯ ಕಾರ್ಯವೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆ ! ಕೆಲವು ಅಪಶಕುನಿ ಮಂಡಳಿಗಳು ಯಾವಾಗಲೂ ಒಳ್ಳೆಯ ಕಾರ್ಯದಲ್ಲಿ ವಿಘ್ನಗಳನ್ನುಂಟು ಮಾಡಲು ಪ್ರಯತ್ನಿಸುತ್ತಿರುತ್ತವೆ. ಸಮಾಜದಲ್ಲಿ ಹೇಗೆ ಒಳ್ಳೆಯ ಮತ್ತು ಕೆಟ್ಟ ಪ್ರವೃತ್ತಿಗಳಿರುತ್ತವೆಯೋ, ಹಾಗೆಯೇ ಅವು ವಾತಾವರಣದಲ್ಲಿಯೂ ಇರುತ್ತವೆ. ಸಮಾಜದಲ್ಲಿನ ಕೆಟ್ಟ ಪ್ರವೃತ್ತಿಗಳು ಯಾವರೀತಿ ಸ್ಥೂಲ ರೂಪದಲ್ಲಿ ಕಾರ್ಯ ನಿರತವಾಗಿರುವುದು ಕಾಣಿಸುತ್ತದೆಯೋ, ಹಾಗೆ ಅವು ವಾತಾವರಣದಲ್ಲಿ ಸೂಕ್ಷ್ಮರೂಪದಲ್ಲಿ ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಪ್ರವೃತ್ತಿಯ ಜನರಿಗೆ ಸೂಕ್ಷ್ಮದಲ್ಲಿನ ಒಳ್ಳೆಯ ಶಕ್ತಿಗಳ ಮತ್ತು ಕೆಟ್ಟ ಪ್ರವೃತ್ತಿಯ ಜನರಿಗೆ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ಸಹಾಯ ಸಿಗುತ್ತದೆ. ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಯಜ್ಞಯಾಗಾದಿ ವಿಧಿಗಳನ್ನು ಮಾಡುತ್ತಿದ್ದರು. ಆಗ ಅದರಲ್ಲಿ ರಾಕ್ಷಸರು ವಿಘ್ನಗಳನ್ನು ತಂದೊಡ್ಡುತ್ತಿದ್ದರು, ಋಷಿಮುನಿಗಳನ್ನು ಹತ್ಯೆ ಮಾಡುತ್ತಿದ್ದರು, ಹಸುಗಳನ್ನು ಕೊಂದು ತಿನ್ನುತ್ತಿದ್ದರು, ಈ ಇತಿಹಾಸ ನಮಗೆ ಗೊತ್ತಿದೆ. ಅಸುರರು ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ದೇವತೆಗಳಿಗೆ, ಹಾಗೆಯೇ ಅವತಾರಿಗಳಾದ ಪ್ರಭು ಶ್ರೀರಾಮಚಂದ್ರ ಮತ್ತು ಭಗವಾನ್ ಶ್ರೀಕೃಷ್ಣನಿಗೂ ತೊಂದರೆಗಳನ್ನು ಕೊಟ್ಟಿದ್ದಾರೆ; ಆದರೆ ದೇವತೆಗಳು ಮತ್ತು ಅವತಾರಿಗಳು ಅಸುರರೊಂದಿಗೆ ಯುದ್ಧವನ್ನು ಮಾಡಿ ಧರ್ಮ ವಿಜಯ ಪಡೆದರು ಎಂಬುದೂ ನಮಗೆ ಗೊತ್ತಿದೆ. ಇಲ್ಲಿಯವರೆಗೆ ನಡೆದ ದೇವಾಸುರರ ಯುದ್ಧಗಳಲ್ಲಿ ಕೊನೆಗೆ ದೇವತೆಗಳು, ಅವತಾರಿಗಳು ಮತ್ತು ದೇವತೆಗಳ ಪರವಹಿಸಿ ಹೋರಾಡುವವರಿಗೆ ಜಯವಾಗಿದೆ, ಇದು ಇತಿಹಾಸ. ಸಪ್ತಲೋಕಗಳಲ್ಲಿನ ದೈವೀ ಅಥವಾ ಒಳ್ಳೆಯ ಶಕ್ತಿಗಳ ಮತ್ತು ಸಪ್ತಪಾತಾಳಗಳಲ್ಲಿನ ಅಸುರೀ ಅಥವಾ ಕೆಟ್ಟ ಶಕ್ತಿಗಳ ನಡುವೆ ನಡೆದಿರುವ ಈ ಹೋರಾಟದ ಸ್ಥೂಲದಲ್ಲಿನ ಪ್ರಕಟೀಕರಣವು ಭೂಮಿಯಲ್ಲಿಯೂ ಕಾಣಿಸುತ್ತದೆ.

೨. ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಮತ್ತು ಸದ್ಯ ನಡೆಯುತ್ತಿರುವ ದೇವಾಸುರರ ಯುದ್ಧ !

ಪ್ರತಿಯೊಂದು ಯುಗದಲ್ಲಿ ದೇವಾಸುರ (ದೇವತೆಗಳು ಮತ್ತು ಅಸುರರಲ್ಲಿನ) ಹೋರಾಟ ನಿರಂತರವಾಗಿ ನಡೆಯುತ್ತಿರುತ್ತದೆ. ಕಲಿಯುಗದಲ್ಲಿಯೂ ಅದು ನಡೆಯುತ್ತಿದೆ. ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಮಹರ್ಷಿ ಅರವಿಂದರು ಸೂಕ್ಷ್ಮದಲ್ಲಿ ಹೋರಾಡಿ ಭಾರತದ ವಾಯುವ್ಯ ದಿಕ್ಕಿನಿಂದ ಬರುವ ಅಸುರೀ ಶಕ್ತಿಗಳನ್ನು ನಾಶ ಮಾಡಿದ್ದರು. ಇಂದಿಗೂ ಭಾರತದ ಅನೇಕ ಜ್ಞಾತ-ಅಜ್ಞಾತ ಸಂತರು, ಹಾಗೆಯೇ ಸನಾತನದ ಸಂತರು ದೇವತೆಗಳ ಪರವಾಗಿ ಹೋರಾಡುತ್ತಿದ್ದಾರೆ. ಬ್ರಾಹ್ಮತೇಜವಿದ್ದ ವರು ಅಂದರೆ ಸಾಧನೆಯ ಬಲವಿರುವವರು ಮಾತ್ರ ಸೂಕ್ಷ್ಮದಲ್ಲಿ ಯುದ್ಧವನ್ನು ಮಾಡಬಲ್ಲರು. ಕಾಂಚಿ ಕಾಮಕೋಟಿ ಪೀಠದ ಜಗದ್ಗುರುಗಳಾದ ಶ್ರೀ ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿಯವರು ದೆಹಲಿಯ ಒಂದು ಸಭೆಯಲ್ಲಿ “ಪ್ರತಿಯೊಂದು ಯುಗದಲ್ಲಿ ದೇವಾಸುರ ಯುದ್ಧವಾಗುತ್ತಿರುತ್ತದೆ. ಈ ಯುಗದಲ್ಲಿ ‘ಸನಾತನ ಸಂಸ್ಥೆಯು ಆ ಯುದ್ಧದಲ್ಲಿ ಹೋರಾಡುತ್ತಿದೆ ಎಂದು ಹೇಳಿದ್ದರು ! (ಆಧಾರ : ಸನಾತನ ನಿರ್ಮಿತ ಗ್ರಂಥ ಹಿಂದೂ ರಾಷ್ಟ್ರ ಸ್ಥಾಪನೆಯ ದಿಶೆ) (ಮುಂದುವರಿಯುವುದು)