ಜನ್ಮ ಹಿಂದೂವಿನಿಂದ ಕರ್ಮ ಹಿಂದೂಗಳತ್ತ !

ಗೋವಾ ರಾಜ್ಯದ ರಾಮನಾಥಿಯಲ್ಲಿ ಜೂನ್ ೧೪ ರಿಂದ ೧೭ ವರೆಗೆ ೬ ನೇ ಅಖಿಲ ಭಾರತೀಯ ಹಿಂದೂ ಅಧಿವೇಶನ ನಡೆಯಲಿದೆ. ಹಿಂದೂ ಜನಜಾಗೃತಿ ಸಮಿತಿಯ ಮುಂದಾಳತ್ವದಲ್ಲಿ ಈ ಅಧಿವೇಶನ ಕಳೆದ ೬ ವರ್ಷಗಳಿಂದ ಆಯೋಜಿಸಲಾಗುತ್ತಿದೆ. ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ದೇಶಾದ್ಯಂತವಿರುವ ವಿವಿಧ ಶಕ್ತಿಗಳ ಮುಂಚೂಣಿಯಲ್ಲಿ ನಡೆಯುತ್ತಿದೆ ಅದರಲ್ಲಿ ಈ ಅಧಿವೇಶನ ಕೂಡ ತನ್ನ ಪಾಲಿನ ಜವಾಬ್ದಾರಿಯನ್ನು ವಹಿಸುತ್ತಿದೆಯೆಂದು ನಮಗೆ ಅನಿಸುತ್ತಿದೆ. ನಮ್ಮ ದೇಶವು ಹಿಂದೂಬಹುಸಂಖ್ಯಾತವಾಗಿದೆ ಎಂಬುದು ಜಗತ್ತಿಗೆಲ್ಲ ತಿಳಿದಿರುವ ವಿಷಯವಾಗಿದೆ. ಅಂದರೆ ಈ ಕಾರಣದಿಂದಲೇ ನಮ್ಮ ದೇಶವು ‘ಹಿಂದೂ ರಾಷ್ಟ್ರವೇ ಆಗಿದೆಯೆಂದು ಕೆಲವು ಹಿರಿಯ ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳ ನಂಬಿಕೆಯಾಗಿದೆ. ಅಂದರೆ ಜಗತ್ತಿನಲ್ಲಿ ಕ್ರೈಸ್ತರು, ಮುಸಲ್ಮಾನರು, ಬೌದ್ಧರು, ಜ್ಯೂ ಮುಂತಾದವರ ಗುರುತನ್ನು ತಿಳಿಸುವ ರಾಷ್ಟ್ರಗಳಿರುವಂತೆಯೇ, ಭಾರತವು ‘ಹಿಂದೂ ರಾಷ್ಟ್ರ, ಎಂದು ತಿಳಿದಿರುವ ಒಂದು ಗುಂಪು ಪ್ರಾರಂಭದಿಂದಲೂ ಅಸ್ತಿತ್ವದಲ್ಲಿದೆ. ಆದುದರಿಂದಲೇ ‘ಹಿಂದೂ ರಾಷ್ಟ್ರ ಎನ್ನುವುದೇನೂ ಹೊಸ ಸಂಕಲ್ಪನೆಯಲ್ಲ. ಕೇವಲ ಈ ವಿಷಯವನ್ನು ಇತರರ ಮನಸ್ಸಿಗೆ ಮನದಟ್ಟು ಮಾಡುವಂತಹ ಭಾಷೆಯಲ್ಲಿ ತಿಳಿಸಲು ನಾವು ಪ್ರಯತ್ನಿಸಬೇಕಾಗಿದೆ. ಇದಕ್ಕಾಗಿ ಎಲ್ಲ ಹಂತಗಳಲ್ಲಿಯ ವೈಚಾರಿಕ ಮಟ್ಟದಲ್ಲಿ ವಿಚಾರ ವಿಮರ್ಶೆ ಜರುಗಬೇಕಾಗಿದೆ. ಅಲ್ಲದೇ ‘ಹಿಂದೂ ರಾಷ್ಟ್ರ ಸಂಕಲ್ಪನೆಯ ವಿಷಯದಲ್ಲಿ ಒಗ್ಗಟ್ಟು ಅತ್ಯಂತ ಅವಶ್ಯಕವಾಗಿದೆ. ಈ ಕಾರಣಕ್ಕಾಗಿಯೇ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಮುಖಂಡರು, ಪತ್ರಿಕಾ ವರದಿಗಾರರು, ವಕೀಲರು, ವಿಚಾರವಂತರು, ಹಿಂದೂ ಧಾರ್ಮಿಕ ಮುಖಂಡರು, ಸಂತರು ಒಂದೆಡೆ ಸೇರುತ್ತಾರೆ ಮತ್ತು ಹಿಂದೂ ಸಂಸ್ಕೃತಿಯ ಅಡಿಪಾಯದೊಂದಿಗೆ ವಿಚಾರಗಳನ್ನು ಮಂಡಿಸುತ್ತಾರೆ. ಇದರ ಮುಖಾಂತರವೇ ‘ಹಿಂದೂ ಸಂಘಟನೆ ಸಾಧ್ಯವಾಗಿ ‘ಹಿಂದೂ ರಾಷ್ಟ್ರ ಸಂಕಲ್ಪನೆ ಸಕ್ಷಮವಾಗುತ್ತದೆ. ಅರಿವಿಲ್ಲದಂತೆಯೇ ಸಾಕಾರಗೊಳ್ಳುವ ಹಿಂದೂ ಸಂಘಟನೆಗಳ ಈ ಏಕತೆಯು ಒಂದೂಕಾಲು ಕೋಟಿ ಜನತೆಯ ದೇಶ ‘ಹಿಂದೂ ರಾಷ್ಟ್ರವೆಂದು ಉದಯಗೊಳ್ಳಲು ಪೂರಕವಾಗಲಿದೆ. ಹಾಗೆ ನೋಡಿದರೆ ಸ್ವಾತಂತ್ರ್ಯಪ್ರಾಪ್ತಿಯ ಸಮಯದಲ್ಲಿಯೇ ಈ ಸಮಸ್ಯೆ ಪರಿಹಾರ ಕಾಣ ಬಹುದಿತ್ತು. ಏಕೆಂದರೆ ದೇಶದ ವಿಭಜನೆಯು ಸಾಂಪ್ರದಾಯಿಕತೆಯ ತತ್ವದ ಮೇಲೆಯೇ ಆಗಿದೆಯೆನ್ನುವುದನ್ನು ಯಾರಿಗೂ ನಿರಾಕರಿಸಲು ಸಾಧ್ಯವಿಲ್ಲ. ಧಾರ್ಮಿಕ ತತ್ವದ ಆಧಾರದಲ್ಲಿ ವಿಭಜನೆಯಿಂದ ಒಂದು ದೇಶ ನಿರ್ಮಾಣಗೊಳ್ಳುತ್ತಿದ್ದರೆ, ಅಗಾಧ ಕ್ಷಮತೆಯುಳ್ಳ ಋಷಿಮುನಿ ಮತ್ತು ರಾಮ-ಕೃಷ್ಣರನ್ನು ಶ್ರದ್ಧಾಸ್ಥಾನವೆಂದು ನಂಬುವ ನಾವೇಕೆ ಹಿಂದೆ ಬೀಳಬೇಕು ? ಎನ್ನುವ ವಿಚಾರ ಆಗಿನ ಭಾರತೀಯ ಮುಖಂಡರು ಮಾಡಲೇ ಇಲ್ಲ. ದೇಶಕ್ಕೆ ಆ ಸಮಯದಲ್ಲಿ ಹಿಂದೂ ಸಂಸ್ಕೃತಿ ಮತ್ತು ಹಿಂದೂಗಳ ದೇವತೆಗಳ ಅಗಾಧ ಸಾಮರ್ಥ್ಯಗಳ ಬಗ್ಗೆ ಎಂದಿಗೂ ಗೌರವವಿಲ್ಲದಿರುವ ಮುಖಂಡರು ದೊರೆತರು. ಆ ಸಮಯದಲ್ಲಿ ಧರ್ಮ ನಿರಪೇಕ್ಷತೆಯ ಮೇಲೆ ಬಹಳ ಶ್ರದ್ಧೆಯನ್ನು ಹೊಂದಿದ್ದ ನತದೃಷ್ಟರ ಕೈಗಳಲ್ಲಿ ನಮ್ಮ ದೇಶದ ೩೫ ಕೋಟಿ ಜನತೆಯ ಭಾರವನ್ನು ಒಪ್ಪಿಸಲಾಯಿತು. ಇದು ಪ್ರತಿಭಾಶಾಲಿ ಭಾರತೀಯ ಸಂಸ್ಕೃತಿಯ ಅತ್ಯಂತ ಕ್ರೂರ ವಿಡಂಬನೆಯೇ ಆಗಿತ್ತು. ಇಂದು ಅದರ ಪರಿಣಾಮವನ್ನು ಹಿಂದೂ ಜನತೆ ಅನುಭವಿಸುತ್ತಿದ್ದಾರೆ. ಇದನ್ನು ದೇಶಾದ್ಯಂತ ಇರುವ ಹಿಂದೂಗಳಿಗೆ ಕಾರ್ಯಗತಗೊಳಿಸದೇ ಅನ್ಯ ಮಾರ್ಗವಿಲ್ಲದಂತಾಗಿದೆ. ಹಿಂದೂ ವಿಚಾರಧಾರೆ ಎಲ್ಲರ ಹಿತ ಮತ್ತು ಕಲ್ಯಾಣವನ್ನು ಬಯಸುತ್ತದೆ. ಜಗತ್ತಿನಾ ದ್ಯಂತ ಹರಡಿರುವ ಭಯೋತ್ಪಾದನೆ ಮತ್ತು ಹಿಂಸಾಚಾರಗಳ ದಾಹದ ಅರಿವು ಹಿಂದೂಗಳಿಗಿದೆ. ಮನುಕುಲಕ್ಕೆ ಇದರಿಂದ ಆಗುತ್ತಿರುವ ಅಪಾರ ಹಾನಿಯನ್ನು ಹಿಂದೂಗಳಿಗೆ ನೋಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಹಿಂದೂಗಳ ಪಿಂಡ ಕಲ್ಯಾಣಕಾರಿ ಜೀವನವನ್ನು ಅಪೇಕ್ಷಿಸುವುದಾಗಿದೆ. ‘ಈ ವಿಶ್ವವೇ ನನ್ನ ಮನೆಯಾಗಿದೆ ಎನ್ನುವುದು ಹಿಂದೂಗಳ ವಿಚಾರಧಾರೆ ಯಾಗಿದೆ. ಪ್ರೇಮಭಾವವೇ ಹಿಂದೂಗಳ ಸ್ಥಾಯಿಭಾವವಾಗಿದೆ.

ಹಿಂದೂಗಳ ದುರವಸ್ಥೆಯ ಮೂಲ ಕಾರಣ !

ಋಷಿ-ಮುನಿ ಮತ್ತು ಸಂತರ ಆಶೀರ್ವಾದದಿಂದ ಪಾವನಗೊಂಡಿರುವ ಈ ಪವಿತ್ರ ಭಾರತಭೂಮಿ ರಾಜಕೀಯ ಮುಖಂಡರ ಕಾರ್ಯದಿಂದ ಅಪವಿತ್ರವಾಗಿದೆ. ಅಪಘಾತದಿಂದ ‘ಹಿಂದೂ ಆಗಿದ್ದೇನೆಂದು ನುಡಿದ ವ್ಯಕ್ತಿಯು ಸ್ವಾತಂತ್ರ್ಯದ ಬಳಿಕ ದೇಶದ ಪ್ರಥಮ ಪ್ರಧಾನಮಂತ್ರಿಗಳಾದರು. ಪ್ರತಿಭಾವಂತ ಭಾರತೀಯ ಸಂಸ್ಕೃತಿಯನ್ನು ನಾಶಗೊಳಿಸುವ ಧ್ಯೇಯವನ್ನು ಆಂಗ್ಲರು ಜಾರಿಗೊಳಿಸಿದರು. ಈ ವಿಷಯ ಭಾರತೀಯ ಮುಖಂಡರಿಗೆ ತಿಳಿದಿರಲಿಲ್ಲ ಎಂದೇನೂ ಅಲ್ಲ. ಬಹುತೇಕವಾಗಿ ಆ ಮುಖಂಡರು ಆಂಗ್ಲರ ಈ ಕಾರ್ಯಕ್ಕೆ ಬಲವನ್ನೇ ನೀಡಿದರು. ಅದರಿಂದ ಹಿಂದೂಗಳ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಬಹುದೊಡ್ಡ ಪ್ರಭಾವ ಬೀರಿತು ಮತ್ತು ಅವರು ರಾಜಕೀಯ ನೀತಿಗೆ ಬಲಿಯಾದರು. ಇದು ಆಗಿನ ಕಾಂಗ್ರೆಸ್ ಪ್ರಭಾವದ ಪರಿಣಾಮವಾಗಿದೆ. ಈ ಪಕ್ಷದ ಪ್ರತಿಯೊಂದು ವಿಚಾರವು ಹಿಂದೂ ವಿರೋಧಿಯಾಗಿತ್ತು. ಈಗ ಈ ವಿಷಯ ಬಹಿರಂಗವಾಗತೊಡಗಿದೆ. ಈ ಕಾರಣದಿಂದಲೇ ಹಿಂದೂಗಳಿಗೆ ಎಂದಿಗೂ ಆ ಪಕ್ಷದ ಬಗ್ಗೆ ಗೌರವವೆನಿಸಲಿಲ್ಲ. ಇಂದು ಜನತೆ ಜಾಗೃತಗೊಂಡಿದ್ದಾರೆ. ಹಿಂದೂಗಳಿಗೆ ತಮ್ಮ ಜೀವನದ ಮೌಲ್ಯ ಅರಿವಾಗತೊಡಗಿದೆ. ಅನ್ಯಾಯದ ಕುರಿತು ಅವರ ಮನಸ್ಸಿನಲ್ಲಿ ಸೇಡಿನ ಕಿಡಿ ಹೊತ್ತಿದೆ. ರಾಜಕೀಯ ಬಿರುಗಾಳಿಯಲ್ಲಿ ಹಿಂದೂಗಳ ವಿರೋಧದಲ್ಲಿ ಬೀಸುತ್ತಿರುವ ರಾಜಕೀಯ ವ್ಯವಸ್ಥೆ ಈಗ ಇಲ್ಲದೇ ಇರುವುದರಿಂದ ಹಿಂದೂಗಳ ಆತ್ಮವಿಶ್ವಾಸ ದ್ವಿಗುಣಗೊಂಡಿದೆ ಅವನಿಗೆ ಏನಾದರೂ ಮಾಡಬೇಕೆನಿಸುತ್ತಿದೆ. ಅದಕ್ಕಾಗಿ ಪೂರಕವಾಗಿರುವ ವಾತಾವರಣ ಈಗ ನಿರ್ಮಾಣವಾಗಿದೆಯೆಂದು ಹಿಂದೂಗಳು ಹೇಳುತ್ತಿದ್ದಾರೆ. ‘ಅಖಿಲ ಭಾರತೀಯ ಹಿಂದೂ ಅಧಿವೇಶನವೆಂದರೆ ಕಾರ್ಯ ರೂಪದಲ್ಲಿ ಹಿಂದೂಗಳಿಗೆ ಪ್ರೋತ್ಸಾಹ ನೀಡುವಂತಹದಾಗಿದೆ. ಹಿಂದೂಗಳ ಸಮಸ್ಯೆಗಳ ಕುರಿತು ಹಿಂದೂಗಳಲ್ಲಿ ಜಾಗೃತಿಗೊಳಿಸುವಲ್ಲಿ ಕಳೆದ ೫ ಅಧಿವೇಶನಗಳು ಉಪಯುಕ್ತವಾಗಿದೆ. ಮುಂಬರುವ ೬ನೇ ಅಧಿವೇಶನದ ಕಾರಣದಿಂದ ಹಿಂದೂಗಳಿಗೆ ಹೊಸ ಹೊಸ ಯೋಜನೆಗಳ ವಿಷಯದಲ್ಲಿ ಮಾಹಿತಿ ದೊರೆಯಲಿದೆ. ಅಖಿಲ ಭಾರತೀಯ ಹಿಂದೂ ಅಧೀವೇಶನ ಕೇವಲ ವರ್ಷದಲ್ಲಿ ಒಮ್ಮೆ ಮಾತ್ರ ಒಂದೆಡೆ ಸೇರುವುದಕ್ಕಾಗಿ ಅಲ್ಲ. ಹಾಗೆ ಒಂದೆಡೆ ಸೇರಿದಾಗ ಮುಂದಿನ ವರ್ಷಕ್ಕಾಗಿ ಯೋಜಿಸಲಾಗಿರುವ ಕಾರ್ಯಗಳ ಅಂಕಿಅಂಶಗಳೊಂದಿಗೆ ಕರ್ತವ್ಯವನ್ನು ನಿರ್ವಹಿಸುವುದು ಮಹತ್ವದ್ದಾಗಿದೆ. ಅಂದರೆ ಧ್ಯೇಯಕ್ಕಾಗಿ ತನುಮನವನ್ನು ಅರ್ಪಿಸಿವುದು ಮತ್ತು ಹಿಂದೂ ಸಮಾಜದ ಕಲ್ಯಾಣಕ್ಕಾಗಿ ತ್ಯಾಗ ಮಾಡುವುದು ಈ ವಿಷಯಗಳನ್ನು ಒಳಗೊಂಡಿರುವ ಸಮಾರಂಭವಾಗಿದೆ. ಪಾಕಿಸ್ಥಾನವು ಗಲ್ಲು ಶಿಕ್ಷೆ ವಿಧಿಸಿರುವ ಭಾರತೀಯ ನಾಗರಿಕರಾದ ಕುಲಭೂಷಣ ಜಾಧವ ಹಾಗೂ ಕೇರಳ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮಾರ್ಕ್ಸ್‌ವಾದಿ ಕಮ್ಯುನಿಸ್ಟ ಪಕ್ಷ ಹಾಗೂ ವಿರೋಧಿ ಪಕ್ಷ ಕಾಂಗ್ರೆಸ ಇವರು ತಮ್ಮ ಅಭಿಪ್ರಾಯ ಭೇದವನ್ನು ಪಕ್ಕಕ್ಕೆ ಸರಿಸಿ ಒಂದೆಡೆ ಸೇರಿ ಮಾಡುತ್ತಿರುವ ಗೋವುಗಳ ಹತ್ಯೆ, ಈ ಎರಡೂ ವಿಷಯಗಳು ಹಿಂದೂಗಳ ದೃಷ್ಟಿಯಿಂದ ಮುಂಚೂಣಿಯಲ್ಲಿರುವ ಸದ್ಯದ ವಿಷಯ ವಾಗಿದೆ. ಪಾಕಿಸ್ತಾನವು ಎಷ್ಟೇ ಪ್ರತಿವಾದ ಮಾಡಿದರೂ, ಹಿಂದೂ ವ್ಯಕ್ತಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಶಿಕ್ಷೆಯನ್ನು ನೀಡಿದರೆ ಅದಕ್ಕೆ ಸಂತೋಷವೆನಿಸುತ್ತದೆ. ತನ್ನ ದೇಶದಲ್ಲಿ ಧಾರ್ಮಿಕ ಶಿಕ್ಷಣವನ್ನು ಅಳವಡಿಸಿಕೊಂಡಿರುವ ಬಗ್ಗೆ ಸಂತೋಷವಿದೆ. ಕೇರಳದಲ್ಲಿ ನಡೆದಿರುವ ಪ್ರಕರಣ ಯಾವುದು ? ದೇಶದ ಕಾನೂನು ಉಲ್ಲಂಘಿಸಿ ಗೋವುಗಳ ಹತ್ಯೆ ಮಾಡಿದರು. ದೇಶದ ನೀತಿಯನ್ನು ಉಲ್ಲಂಘಿಸುವ ಅವರು ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಿದ್ದಾರೆ. ಅದಕ್ಕಾಗಿ ಅವರು ರಾಜಕೀಯ ಅಭಿಪ್ರಾಯಭೇಧವನ್ನು ಪಕ್ಕಕ್ಕೆ ಸರಿಸಿದ್ದಾರೆ. ಇದು ಅವರ ಹಿಂದೂದ್ವೇಷವಲ್ಲದೇ ಮತ್ತೇನೂ ಅಲ್ಲ ? ಇಂತಹ ಕೆಲವು ಸೂಕ್ಷ್ಮ ಪ್ರಶ್ನೆಗಳ ಸಮಾಚಾರ ಅಧಿವೇಶನದಲ್ಲಿ ಪ್ರಸ್ತುತಪಡಿಸಲಾಗುವುದು ಮತ್ತು ಹಿಂದೂಗಳ ಆತ್ಮವಿಶ್ವಾಸ ವೃದ್ಧಿಸಲು ಅದು ಮಹತ್ವದ ಮೆಟ್ಟಿಲಾಗಲಿದೆ.