ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಸಾಧನೆಯಲ್ಲಿ ಮುಂಬರಲು ನೀಡಿದ ಈಶ್ವರಿ ಉಡುಗೊರೆ ಅಂದರೆ ಫಲಕಮೂರ್ತಿ, ಅಂದರೆ ತಪ್ಪುಗಳ ಶ್ರೀಫಲಕ ! – ಸದ್ಗುರು (ಸೌ.) ಅಂಜಲಿ ಗಾಡಗೀಳ

ಸದ್ಗುರು (ಸೌ.) ಅಂಜಲಿ ಗಾಡಗೀಳ

೧. ಯಾವುದೇ ಜೀವವು ಎಲ್ಲಿಯ ತನಕ ದೋಷ ಹಾಗೂ ಅಹಂ ನಿರ್ಮೂಲನೆ ಮಾಡುವುದಿಲ್ಲವೋ ಹಲವಾರು ವರ್ಷಗಳ ಕಠಿಣ ಸಾಧನೆಯಿದ್ದರೂ ಈಶ್ವರನೊಂದಿಗೆ ಐಕ್ಯವಾಗಲು ಸಾಧ್ಯವಿಲ್ಲದಿರುವುದು

ಸಾಧಕರು ಗುರುಕೃಪಾಯೋಗದಂತೆ ಈಶ್ವರಪ್ರಾಪ್ತಿಗೋಸ್ಕರ ಸಾಧನೆ ಮಾಡುತ್ತಿರುವ ಏಕೈಕ ಆಧ್ಯಾತ್ಮಿಕ ಸಂಸ್ಥೆಯೆಂದರೆ ಸನಾತನ ಸಂಸ್ಥೆ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಕಲಿಸಿಕೊಟ್ಟ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಯೇ ಸಾಧನೆಯ ಮೂಲ ಅಡಿಪಾಯವಾಗಿದೆ ! ಯಾವುದೇ ಜೀವವು ಎಲ್ಲಿಯ ತನಕ ದೋಷ ಹಾಗೂ ಅಹಂ ನಿರ್ಮೂಲನೆ ಮಾಡುವುದಿಲ್ಲವೋ ಹಲವಾರು ವರ್ಷಗಳ ಕಠಿಣ ಸಾಧನೆಯಿದ್ದರೂ ಈಶ್ವರನೊಂದಿಗೆ ಐಕ್ಯವಾಗಲು ಸಾಧ್ಯವಿಲ್ಲ. ಯಾರ ಮನಸ್ಸಿನಲ್ಲಿ ಅನಾವಶ್ಯಕ ವಿಚಾರ, ವಿಕಾರ, ದೋಷವು ವಾಸ ಮಾಡುವುದೋ, ಅಲ್ಲಿ ದೇವರಾದರೂ ವಾಸಿಸಲು ಹೇಗೆ ಸಾಧ್ಯ ? ಆದ್ದರಿಂದ ಪರಾತ್ಪರ ಗುರು ಡಾಕ್ಟರರು ಎಲ್ಲಾ ಸಾಧಕರಿಗೂ ನೀಡಿರುವ ದಿವ್ಯ ಈಶ್ವರೀಯ ಉಡುಗೊರೆಯೆಂದರೆ ತಪ್ಪುಗಳ ಶ್ರೀಫಲಕ !

೨. ಫಲಕದ ಮೇಲೆ ತಪ್ಪುಗಳನ್ನು ಬರೆಯುವುದರಿಂದ ಸಾಧಕರಿಗೆ ತಪ್ಪುಗಳ ಮನವರಿಕೆಯಾಗುವುದು ಹಾಗೂ ಬೇರೆಯವರಿಗೂ ಅದರಿಂದ ಕಲಿಯಲು ಸಿಗುವುದು

ಸನಾತನದ ಎಲ್ಲಾ ಆಶ್ರಮಗಳಲ್ಲಿಯೂ ಒಂದು ದೊಡ್ಡ ಫಲಕವನ್ನು ಹಾಕಿರುವುದನ್ನು ನಾವು ಕಾಣಬಹುದು. ಸಾಧಕರು ಅದರ ಮೇಲೆ ತಮ್ಮ ತಪ್ಪುಗಳನ್ನು ಬರೆಯುತ್ತಾರೆ. ಪರಾತ್ಪರ ಗುರು ಡಾಕ್ಟರರು ಸಾಧಕರನ್ನು ಫಲಕದ ಮೇಲೆ ತಪ್ಪುಗಳನ್ನು ಬರೆಯಲು ಕಲಿಸಿಕೊಟ್ಟಿದ್ದಾರೆ. ಇದರ ಕಾರಣಗಳು ಈ ಮುಂದಿನಂತಿದೆ.

ಅ. ಸಾಧಕರಿಗೆ ಕೇವಲ ತಪ್ಪಿನ ಮನವರಿಕೆಯಷ್ಟೇ ಸಾಕಾಗುವುದಿಲ್ಲ, ಜೊತೆಗೆ ಅವರು ಮಾಡಿದ ತಪ್ಪುಗಳು ಬೇರೆಯವರಿಗೂ ತಿಳಿದು ಅವರೂ ಆ ತಪ್ಪುಗಳಿಂದ ಕಲಿತುಕೊಳ್ಳಲಿ.

ಆ. ಆ ಸಾಧಕನ ದೋಷ ಹಾಗೂ ಅಹಂ ನಿರ್ಮೂಲನೆಯಾಗಲಿ.

೩. ತಪ್ಪುಗಳ ಫಲಕವೆಂದರೆ ಸಾಕ್ಷಾತ್ ಭಗವಂತನ ಮೂರ್ತಿಯ ಶ್ರೀಫಲಕವಾಗಿರುವುದು !

ತಪ್ಪುಗಳನ್ನು ಬರೆಯುವ ಫಲಕದ ಮಹತ್ವವನ್ನು ವಿವರಿಸುವಾಗ ಸದ್ಗುರು (ಸೌ.) ಅಂಜಲಿ ಗಾಡಗೀಳಕಾಕೂರವರು ಹೀಗೆಂದರು, ಫಲಕದ ರೂಪದಲ್ಲಿ ಪ್ರತ್ಯಕ್ಷ ದೇವರೇ ನಮಗಾಗಿ ನಿರಂತರವಾಗಿ ನಿಂತಿದ್ದಾನೆ. ಬಣ್ಣ ಕಪ್ಪಾದರೂ ಎಲ್ಲಾ ಭಕ್ತರ ದುಃಖ ಹರಿಸಲು ಪಾಂಡುರಂಗನು ತನ್ನ ಸೊಂಟದ ಮೇಲೆ ಕೈಯಿಟ್ಟುಕೊಂಡು ನಿಂತಿರುವಂತೆ ಶ್ರೀಫಲಕದ ಸ್ವರೂಪದಲ್ಲಿ ಭಗವಂತನು ಸನಾತನದ ಸಾಧಕರಿಗೋಸ್ಕರ ಅಹಂ-ನಿರ್ಮೂಲನೆ ಮಾಡಿ ದೋಷವನ್ನು ದೂರ ಮಾಡಲು ನಿರಂತರವಾಗಿ ನಿಂತಿದ್ದಾನೆ. ದೇವರಿಗೆ ನಮ್ಮ ಭಾವ ಅಪೇಕ್ಷಿತವಾಗಿದೆ. ಫಲಕದ ಮೇಲೆ ತಪ್ಪುಗಳನ್ನು ಬರೆಯುವಾಗ ನಾವು ಯಾವ ಭಾವವನ್ನಿಟ್ಟುಕೊಂಡು ತಪ್ಪುಗಳನ್ನು ಬರೆಯುತ್ತಿದ್ದೇವೆ? ಎಂದು ಶ್ರೀಫಲಕವು ನೋಡುತ್ತಿರುತ್ತಾನೆ. ಭಕ್ತನನ್ನು ದೇವರೊಂದಿಗೆ ಸೇರಿಸಲು ಹೇಗೆ ದೇವರ ಸಗುಣ ರೂಪವು ಅಗತ್ಯವಿದೆ, ಹಾಗೆಯೇ ಸಾಧಕನನ್ನು ಗುರುವಿನ ತತ್ವದೊಂದಿಗೆ ಐಕ್ಯವಾಗಿಸಲು ಶ್ರೀಫಲಕವು ಸಹಾಯ ಮಾಡುತ್ತದೆ. ದುಃಖಗಳನ್ನು ಹರಿಸಲು ದೇವರಿರುವಂತೆ ದೋಷ ಹಾಗೂ ಅಹಂ ನಿರ್ಮೂಲನೆ ಮಾಡಲು ಶ್ರೀಫಲಕವಿದೆ.

೪. ಫಲಕದ ಮೇಲೆ ತಪ್ಪುಗಳನ್ನು ಬರೆಯವುದೆಂದರೆ ದೇವರ ದಿಶೆಯಲ್ಲಿ ಒಂದು ಹೆಜ್ಜೆ ಮುಂದಿಡುವುದು

ಹೇಗೆ ತಪ್ಪಿನ ಮನವರಿಕೆ ಮಹತ್ವವಾಗಿದೆಯೋ, ಅದೇ ರೀತಿ ಅದು ಸಮಷ್ಟಿಗೆ ತಿಳಿಯಲಿ ಹಾಗೂ ಅನ್ಯ ಸಾಧಕರು ಅದರಿಂದ ಬೋಧನೆ ಪಡೆದುಕೊಳ್ಳುವಂತಾಗಲಿ, ಕಲಿಯಲು ಸಿಗಲಿ ಹಾಗೂ ಈ ಪ್ರಕ್ರಿಯೆಯಿಂದ ನನ್ನ ಪಾಪಕ್ಷಾಲನೆಯಾಗುತ್ತಿದೆ, ಎಂಬ ಭಾವ ವನ್ನಿಟ್ಟುಕೊಂಡು ಬರೆದರೆ ಆ ಸಾಧಕನು ದೇವರ ಬಳಿ ಒಂದು ಹೆಜ್ಜೆ ಮುಂದೆ ಹೋಗುವನು. ನಮಗೆ ಸಾಧನೆಯಿಂದ ಆನಂದ ಸಿಗುತ್ತದೆ. ನಾವು ಯಾವಾಗ ಒಂದು ಹೆಜ್ಜೆ ದೇವರಿಗೋಸ್ಕರ ಮುಂದಿಡುತ್ತೇವೋ, ಆಗ ದೇವರು ನಮಗೋಸ್ಕರ ಹತ್ತು ಹೆಜ್ಜೆ ಮುಂದೆ ಬರುವನು.

೫. ಫಲಕದ ಮೇಲೆ ತಪ್ಪುಗಳನ್ನು ಬರೆಯುವಾಗ ಪ್ರಾರ್ಥನೆ, ಕ್ಷಮೆಯಾಚನೆ ಹಾಗೂ ಕೃತಜ್ಞತೆ ವ್ಯಕ್ತ ಪಡಿಸುವುದು ಅಗತ್ಯ

ದೇವಾಲಯಕ್ಕೆ ಹೋಗಿ ದೇವರನ್ನು ನೋಡಿದ ತಕ್ಷಣ ತಾನೇ ಭಾವಜಾಗೃತಿಯಾಗುತ್ತದೆ ಹಾಗೂ ನಾವು ನಮ್ಮ ಎರಡೂ ಕೈ ಜೋಡಿಸಿ ನಮಸ್ಕಾರ ಮುದ್ರೆಗೆ ಬರುವಂತೆ ಈ ಶ್ರೀಫಲಕವನ್ನು ನೋಡಿ ಆಗುತ್ತದೆ. ಗುರುಗಳ ಕೃಪೆಯಿಂದ ಈ ಶ್ರೀಫಲಕವು ನಮ್ಮ ಮೇಲೆ ನಿರಂತರ ಕೃಪೆ ಮಾಡುತ್ತಿರುತ್ತದೆ. – ಸದ್ಗುರು (ಸೌ.) ಅಂಜಲಿ ಗಾಡಗೀಳ

೫. ಕೃತಜ್ಞತೆ

ಆಶ್ರಮಕ್ಕೆ ಬಂದು ಹೋಗುವಾಗ ನಾವು ಪ್ರತಿದಿನ ಈ ತಪ್ಪುಗಳ ಶ್ರೀಫಲಕವನ್ನು ನೋಡುತ್ತಿರುತ್ತೇವೆ. ಅದರ ಮೇಲೆ ತಪ್ಪುಗಳನ್ನು ಕೂಡ ಬರೆಯುತ್ತಿರುತ್ತೇವೆ; ಆದರೆ ಇಂದು ಈ ಫಲಕದ ನಿಜವಾದ ಮಹತ್ವವನ್ನು ಸದ್ಗುರು (ಸೌ.) ಅಂಜಲಿ ಗಾಡಗೀಳ ಕಾಕೂರವರ ಮಾಧ್ಯಮದಿಂದ ದೇವರೇ ನಮಗೆ ಒಪ್ಪಿಗೆಯಾಗುವಂತೆ ಹೇಳಿದ್ದಾನೆ. ಈ ಲೇಖನವನ್ನು ಅವನು ತಿಳಿಸಿದ ಅಂಶದ ಮೇಲೆ ಬರೆಯಲಾಯಿತು. ದೇವರೇ ಸದ್ಗುರುಗಳ ಕೃಪೆಯಿಂದ ನಮ್ಮ ಸಾಧಕರಿಗೆ ಶ್ರೀಫಲಕದ ನಿಜವಾದ ದರ್ಶನವನ್ನು ಮಾಡಿಸಿಕೊಟ್ಟಿದ್ದಾನೆ. ಸಾಧಕನ ಸಾಧನೆಗೆ ಸಹಾಯ ಮಾಡುವ ಪ್ರತಿಯೊಂದು ವಿಷಯವೂ ದೇವರ ಸ್ವರೂಪವೇ ಆಗಿದೆ ಎಂದು ಕೂಡ ಕಲಿಯಲು ಸಿಕ್ಕಿತು. ಸದ್ಗುರುಗಳ ಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರಗಳು !

– ಶ್ರೀ. ದಿವಾಕರ ಆಗವಣೆ, ಚೆನ್ನೈ, ತಮಿಳುನಾಡು (೧೩.೪.೨೦೧೭)

ಫಲಕದ ಮೇಲೆ ತಪ್ಪುಗಳನ್ನು ಬರೆಯುವಾಗ ಮಾಡಬೇಕಾಗಿರುವ ಪ್ರಾರ್ಥನೆ ಹಾಗೂ ಕೃತಜ್ಞತೆ

ಅ. ಪ್ರಾರ್ಥನೆ

೧. ಹೇ ಶ್ರೀಫಲಕ, ನನ್ನಿಂದ ಆದ ಈ ತಪ್ಪನ್ನು ಕ್ಷಮಿಸು. ನನ್ನ ತಪ್ಪಿನ ಕ್ಷಾಲನೆಯಾಗಲಿ.

೨. ಹೇ ಶ್ರೀಕೃಷ್ಣಾ, ನಾನು ಬರೆಯುತ್ತಿರುವ ಈ ತಪ್ಪಿನ ಮೇಲೆ ನಿನ್ನ ನವಿಲುಗರಿಯನ್ನು ನಿಧಾನವಾಗಿ ತಿರುಗಿಸಿ ಅದರಲ್ಲಿರುವ ಪಾಪವನ್ನು ನಾಶ ಮಾಡು.

೩. ದೇವರೇ, ನಾನು ಬರೆಯುತ್ತಿರುವ ತಪ್ಪುಗಳ ಮೇಲೆ ನಿನ್ನ ಗಮನವಿರಲಿ.

೪. ದೇವರೇ, ಈ ತಪ್ಪನ್ನು ನಾನು ಇಲ್ಲಿ ಬರೆಯುತ್ತಿದ್ದೇನೆ; ಆದರೆ ಅದು ನನ್ನ ಅಂತಃಕರಣದಲ್ಲಿ ಕೆತ್ತಲ್ಪಡಲಿ. ಇದರಿಂದ ನನಗೆ ಅದರಿಂದ ಕಲಿಯಲು ಸಿಕ್ಕಿ ಸಾಧನೆಯಲ್ಲಿ ಮುನ್ನಡೆಯಲು ಸಾಧ್ಯವಾಗಲಿ.

೫. ಬೆಳಗ್ಗೆ ಎದ್ದ ತಕ್ಷಣ ಯಾವಾಗ ನಾನು ಒಮ್ಮೆ ತಪ್ಪನ್ನು ಬರೆಯುವೆನು, ಎನ್ನುವ ನನ್ನ ಹಂಬಲ ಹೆಚ್ಚಾಗಲಿ.

೬. ತಪ್ಪುಗಳನ್ನು ಬರೆಯಲು ಸಮಯ ಹೆಚ್ಚಾದಂತೆ, ನನ್ನ ಪಾಪಗಳು ಹೆಚ್ಚಾಗುವುದು, ಎಂಬುದರ ಮನವರಿಕೆ ಉಂಟಾಗಲಿ.

ಕೃತಜ್ಞತೆ

ಹೇ ಶ್ರೀಫಲಕ, ನಿನ್ನ ಚರಣಗಳಲ್ಲಿ ನತಮಸ್ತಕನಾಗಿ ನಿನಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸುತ್ತೇನೆ, ನಿನ್ನಿಂದ ನನಗೆ ಇಂದು ದೇವರ ಕೃಪೆಯನ್ನು ಸಂಪಾದಿಸುವ ಅವಕಾಶ ಲಭಿಸುತ್ತಿದೆ. ನನ್ನಿಂದ ಉಂಟಾದ ಪ್ರತಿಯೊಂದು ತಪ್ಪಿನಿಂದಲೂ ಕಲಿತು ದೇವರ ಸಮೀಪಕ್ಕೆ ಹೋಗುವ ಅವಕಾಶ ಲಭಿಸುತ್ತಿದೆ ಎಂಬ ಭಾವದಿಂದ ತಪ್ಪುಗಳನ್ನು ಬರೆಯುವಂತಾಗಲಿ. – ಸದ್ಗುರು (ಸೌ.) ಅಂಜಲಿ ಗಾಡಗೀಳ