‘ವಂದೇ ಮಾತರಂ’ನ ಗೌರವಕ್ಕಾಗಿ ದೇಶದಲ್ಲಿ ಕಾನೂನು ಜಾರಿಯಾಗಬೇಕು ! – ನ್ಯಾಯವಾದಿ ಉಮೇಶ ಶರ್ಮಾ

‘… ವಂದೇ ಮಾತರಂಗೆ ಎಲ್ಲಿಯವರೆಗೆ ವಿರೋಧಿಸುವಿರಿ ?’ ಈ ಬಗ್ಗೆ ‘ವಿಶೇಷ ಸಂವಾದ’ !

ನ್ಯಾಯವಾದಿ ಉಮೇಶ ಶರ್ಮಾ

‘ವಂದೇ ಮಾತರಂ’ಅನ್ನು ಮೊದಲ ಬಾರಿಗೆ ೧೯೦೯ ರಲ್ಲಿ ಮುಸ್ಲಿಂ ಲೀಗ್ ವಿರೋಧಿಸಿತು ಮತ್ತು ‘ವಂದೇ ಮಾತರಂ’ ಅನ್ನು ವಿರೋಧಿಸಿದವರು ೧೯೪೭ ರಲ್ಲಿ ಭಾರತವನ್ನು ವಿಭಜಿಸಿ ಇನ್ನೊಂದು ದೇಶವಾದ ಪಾಕಿಸ್ತಾನಕ್ಕೆ ತೆರಳಿದರು. ‘ವಂದೇ ಮಾತರಂ’ ಇದು ಭಾರತದ ಸಾಂಸ್ಕೃತಿಕ ಪರಂಪರೆಯಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಇದನ್ನು ಒಪ್ಪಬೇಕು. ಇಲ್ಲದಿದ್ದರೆ ದೇಶದ ಪ್ರಜೆಗಳೆಂದು ಹೇಳಿಕೊಳ್ಳುವ ಹಕ್ಕು ನಮಗಿಲ್ಲ. ‘ವಂದೇ ಮಾತರಂ’ ಗೀತೆಯು ಭಾರತಮಾತೆಯನ್ನು ಗೌರವಿಸುತ್ತದೆ ಮತ್ತು ಅದನ್ನು ವಿರೋಧಿಸುವವರು ಭಾರತಮಾತೆಯನ್ನು ಗೌರವಿಸುವುದಿಲ್ಲ. ‘ವಂದೇ ಮಾತರಂ’ಗೆ ವಿರೋಧ ಅಂದರೆ ರಾಷ್ಟ್ರವಿರೋಧವಾಗಿದೆ. ‘ವಂದೇ ಮಾತರಂ’ ಅನ್ನು ಗೌರವಿಸಲು ದೇಶದಲ್ಲಿ ಕಾನೂನು ರೂಪಿಸಬೇಕು ಎಂದು ‘ಸರ್ವೋಚ್ಚ ನ್ಯಾಯಾಲಯ’ದ ನ್ಯಾಯವಾದಿ ಉಮೇಶ ಶರ್ಮಾ ಇವರು ಒತ್ತಾಯಿಸಿದರು. ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘…ವಂದೇ ಮಾತರಂಗೆ ಎಲ್ಲಿಯವರೆಗೆ ವಿರೋಧಿಸುವಿರಿ ?’ ಈ ಕುರಿತು ಆನ್‌ಲೈನ್ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಈ ಸಮಯದಲ್ಲಿ ಬಿಹಾರದ ‘ಭಾರತೀಯ ಜನಕ್ರಾಂತಿ ದಳ’ದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ರಾಕೇಶ ದತ್ತ ಮಿಶ್ರಾ ಇವರು ಮಾತನಾಡುತ್ತಾ, ‘ವಂದೇ ಮಾತರಂ’ ಇದು ನಮ್ಮಲ್ಲಿ ದೇಶದ ಬಗ್ಗೆ ಗೌರವದ ಭಾವನೆಯನ್ನು ನಿರ್ಮಿಸುವ ಗೀತೆಯಾಗಿದೆ. ದೇಶದ ಮೇಲೆ ನಂಬಿಕೆ ಇಲ್ಲದವರು ಮಾತ್ರ ಅದನ್ನು ವಿರೋಧಿಸಬಹುದು. ರಾಷ್ಟ್ರಗೀತೆ ಮತ್ತು ರಾಷ್ಟ್ರವನ್ನು ಗೌರವಿಸದವರ ಪೌರತ್ವವನ್ನು ತಕ್ಷಣವೇ ರದ್ದುಗೊಳಿಸಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ಈ ದೇಶದಲ್ಲಿ ಕಾನೂನು ಜಾರಿಯಾಗಬೇಕು. ಅಲ್ಲದೆ, ‘ವಂದೇ ಮಾತರಂ’ ಅನ್ನು ವಿರೋಧಿಸುವ ಶಾಸಕರು, ಸಂಸದರು ಅಥವಾ ಅವರ ಯಾವುದೇ ರಾಜಕೀಯ ಹುದ್ದೆ ಇದ್ದರೆ ಅದನ್ನು ತೆಗೆದುಹಾಕಬೇಕು’ ಎಂದು ಹೇಳಿದರು.

ಈ ಸಮಯದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶ್ರೀ. ಅಭಯ ವರ್ತಕ ಇವರು ಮಾತನಾಡುತ್ತಾ, ಅಂದು ಬ್ರಿಟಿಷರು ‘ವಂದೇ ಮಾತರಂ’ಅನ್ನು ನಿಷೇಧಿಸಿದ್ದರೂ ದೇಶದಲ್ಲಿ ಅನೇಕ ಕ್ರಾಂತಿಕಾರಿಗಳು ‘ವಂದೇ ಮಾತರಂ’ ಹೇಳುತ್ತಾ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಮತ್ತು ನೇಣುಗಂಬಕ್ಕೆ ಏರಿದ್ದಾರೆ. ‘ವಂದೇ ಮಾತರಂ’ಗೆ ವಿರೋಧಿಸುವವರು ಆಂಗ್ಲರ ಭಾಷೆಯನ್ನು ಮಾತನಾಡುತ್ತಾರೆ. ‘ವಂದೇ ಮಾತರಂ’ಗೆ ಸಂವಿಧಾನದಲ್ಲಿ ರಾಷ್ಟ್ರಗೀತೆಯ ಸ್ಥಾನಮಾನ ನೀಡಬೇಕು ಮತ್ತು ಅದನ್ನು ವಿರೋಧಿಸಲು ಯಾರೂ ಧೈರ್ಯ ಮಾಡದಂತಹ ಸ್ಥಾನವನ್ನು ನೀಡಬೇಕು ಎಂದು ಹೇಳಿದರು.