ತಿಸ್ತಾ ಸೆಟಲ್ವಾಡ್ ಪ್ರಕರಣ ವ್ಯಾಪಕವಾಗಿರುವುದರಿಂದ ಅದನ್ನು ‘ಎನ್.ಐ.ಎ.’ ಗೆ ಒಪ್ಪಿಸಬೇಕು ! – ಆರ್.ವಿ.ಎಸ್. ಮಣಿ, ಮಾಜಿ ಅಧೀನ ಕಾರ್ಯದರ್ಶಿ, ಕೇಂದ್ರ ಗೃಹಸಚಿವಾಲಯ

‘ತಿಸ್ತಾ ಸೆಟಲ್ವಾಡ್‌ಗೆ ಗಲಭೆಯೊಂದಿಗೆ ಏನು ಸಂಬಂಧ ?’ ವಿಷಯದ ಕುರಿತು ‘ವಿಶೇಷ ಸಂವಾದ’ !

ಆರ್.ವಿ.ಎಸ್. ಮಣಿ

ನರೇಂದ್ರ ಮೋದಿ ಮತ್ತು ಹಿಂದೂ ಸಮುದಾಯವನ್ನು ಅಪಖ್ಯಾತಿಗೊಳಿಸಲು ತಿಸ್ತಾ ಸೆಟಲ್ವಾಡ್ ಅವರು ‘ಭಾರತದಲ್ಲಿನ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ’ ಎಂದು ಬಿಂಬಿಸಿ ಗುಜರಾತ್ ಗಲಭೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸಿಕೊಂಡರು. ತಿಸ್ತಾ ಸೆಟಲ್ವಾಡ್ ಇವರು, ‘ಹಿಂದೂ ಭಯೋತ್ಪಾದನೆಯ ಪಿ.ಆರ್. ಎಜೆಂಟ’ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಈ ಗಲಭೆಯ ಅಪಪ್ರಚಾರ ಮಾಡುವ ಮೂಲಕ ಅನೇಕ ಇಸ್ಲಾಮಿ ದೇಶಗಳಿಂದ ಸಾವಿರಾರು ಕೋಟಿ ರೂಪಾಯಿಗಳ ನಿಧಿಯನ್ನು ತಮ್ಮ ಸ್ವಯಂಸೇವಿ ಸಂಸ್ಥೆಗಳಿಗೆ ಪಡೆದುಕೊಂಡರು. ಈ ಹಣವನ್ನು ವೈಯಕ್ತಿಕ ಕಾರಣಗಳಿಗಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ; ಅಲ್ಲದೇ ಹಿಂದೂ ಸಮುದಾಯವನ್ನು ಭಯೋತ್ಪಾದಕರೆಂದು ನಿರ್ಧರಿಸಲು ದೊಡ್ಡ ದೊಡ್ಡ ಪ್ರಸಾರ ಮಾಧ್ಯಮ, ನ್ಯಾಯಾಂಗ, ಚಿತ್ರರಂಗ ಮತ್ತು ಇತರ ಮಾಧ್ಯಮಗಳನ್ನು ಖರೀದಿಸಲಾಗಿದೆ ಎಂಬ ವರದಿಗಳು ಆಗ ಬಂದಿದ್ದವು. ಕಾಂಗ್ರೆಸ್‌ನ ಅಂದಿನ ಕೇಂದ್ರ ಹಣಕಾಸು ಸಚಿವ ಹಾಗೂ ಗೃಹ ಸಚಿವರು ಮನಿ ಲಾಂಡ್ರಿಂಗ್ ಮೂಲಕ ತಿಸ್ತಾ ಸೆಟಲ್ವಾಡ್‌ಗೆ ಸಾಕಷ್ಟು ನೆರವು ನೀಡಿದ್ದಾರೆ. ಅದೆಲ್ಲವೂ ಈಗ ಬಹಿರಂಗವಾಗಲಿದ್ದು, ಇನ್ನೂ ಸಾಕಷ್ಟು ಹೊರಬರಬೇಕಿದೆ. ಆದ್ದರಿಂದ ತಿಸ್ತಾ ಸೆಟಲ್ವಾಡ್ ಅವರು ಕೇವಲ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದ್ದರಿಂದ ಈ ಪ್ರಕರಣವನ್ನು ಗುಜರಾತ್ ಎ.ಟಿ.ಎಸ್. ಬಳಿ ಇಡದೇ ‘ರಾಷ್ಟ್ರೀಯ ತನಿಖಾ ದಳ’ (ಎನ್‌ಐಎ) ಗೆ ವರ್ಗಾಯಿಸಬೇಕು ಎಂದು ಮಾಜಿ ಅಧೀನ ಕೇಂದ್ರ ಗೃಹಸಚಿವ ಶ್ರೀ. ಆರ್.ವಿ.ಎಸ್. ಮಣಿ ಇವರು ಒತ್ತಾಯಿಸಿದರು. ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ತಿಸ್ತಾ ಸೆಟಲ್ವಾಡ್.ಗೆ ಗಲಭೆಯೊಂದಿಗೆ ಏನು ಸಂಬಂಧ ?’ ಎಂಬ ಆನ್‌ಲೈನ್ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಅಧಿಕಾರಿ ಶ್ರೀ. ಮಣಿ ಇವರು ತಮ್ಮ ಮಾತನ್ನು ಮುಂದುವರೆಸುತ್ತಾ, ಮನಮೋಹನ್ ಸಿಂಗ್ ಸರಕಾರವು ತಿಸ್ತಾ ಸೆಟಲ್ವಾಡ್.ಗೆ ೮೦ ಕೋಟಿ ರೂಪಾಯಿಗಳನ್ನು ಮಾತ್ರ ನೀಡದೇ ವಿವಿಧ ಸಚಿವಾಲಯಗಳಿಂದ ದೊಡ್ಡ ಮೊತ್ತದ ಹಣವನ್ನು ನೀಡಿದೆ. ಅದರಿಂದ ನಕ್ಸಲಿಸಂ ಹಾಗೂ ಯಾಸಿನ್ ಮಲಿಕ್ ನಂತಹ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿತ್ತು. ತಮ್ಮ ಪರವಾಗಿ ವಾರ್ತೆಗಳನ್ನು ಪ್ರಕಟಿಸಲಿಕ್ಕೆ ಪತ್ರಕರ್ತರಿಗೆ ಫ್ಲಾಟ್‌ಗಳು, ವಿದೇಶ ಪ್ರವಾಸಗಳು ಮತ್ತು ಹಣವನ್ನು ನೀಡಲಾಗಿತ್ತು’, ಎಂದರು.

ಈ ಸಮಯದಲ್ಲಿ ಇತಿಹಾಸ ಅಧ್ಯಯನಕಾರ ಹಾಗೂ ಲೇಖಕ ನ್ಯಾಯವಾದಿ ಸತೀಶ ದೇಶಪಾಂಡೆ ಇವರು ಮಾತನಾಡುತ್ತಾ, ತಿಸ್ತಾ ಸೆಟಲ್ವಾಡ್ ಇವರು ‘ಸಬರಂಗ್’ ಮತ್ತು ‘ಸಿಟಿಜನ್ ಫಾರ್ ಜಸ್ಟೀಸ್ ಅಂಡ್ ಪೀಸ್’ ನಂತಹ ಸ್ವಯಂಸೇವಿ ಸಂಸ್ಥೆಗಳ ಮೂಲಕ ತಮ್ಮದೇ ಆದ ವ್ಯಾಪಾರವನ್ನು ತೆರೆದಿದ್ದಾರೆ. ಗುಜರಾತ್ ಗಲಭೆಯಲ್ಲಿ ಮದೀನಾಬೀಬಿ ಎಂಬ ಮುಸ್ಲಿಂ ಮಹಿಳೆ ಅತ್ಯಾಚಾರಕ್ಕೊಳಗಾಗದಿದ್ದಾಗ, ಆಕೆಯಿಂದ ಸುಳ್ಳು ಅಫಿಡವಿಟ್ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಇದು ನಾನಾವತಿ ಆಯೋಗದ ಮುಂದೆ ಬಹಿರಂಗವಾಗಿದೆ. ಅದೇ ರೀತಿ ತಿಸ್ತಾಗಾಗಿ ಕೆಲಸ ಮಾಡುವ ಅವರ ಸಹೋದ್ಯೋಗಿ ರಯೀಸ್ ಪಠಾಣ್ ಕೂಡ ಅವರ ವಿರುದ್ಧ ಗಂಭೀರ ಆರೋಪ ಮಾಡುತ್ತಾ, ಸೋನಿಯಾ ಗಾಂಧಿಯವರು ತೀಸ್ತಾ ಸೆಟಲ್ವಾಡ್‌ರನ್ನು ಭೇಟಿ ಮಾಡಿದ ನಂತರ, ಸೋನಿಯಾ ಗಾಂಧಿ ಅವರು ತಮ್ಮ ಕೆಲಸಕ್ಕೆ ನೀಡುತ್ತಿದ್ದ ಹಣವನ್ನು ಮುಂದುವರಿಸುವುದಾಗಿ ಭರವಸೆ ನೀಡಿದ್ದರು. ಅದೇ ರೀತಿ ಮತ್ತೊಂದೆಡೆ, ಸ್ವಯಂಸೇವಿ ಸಂಸ್ಥೆಗೆ ಸಿಗುವ ನಿಧಿಯಲ್ಲಿ ಶೇ. ೨೫ ರಷ್ಟು ನಿಧಿಯನ್ನು ಸಂತ್ರಸ್ತರಿಗಾಗಿ ವಿನಿಯೋಗಿಸಲು ತೀಸ್ತಾಗೆ ಹೇಳಲಾಗಿತ್ತು. ಇದರಲ್ಲಿ ದಲ್ಲಾಳಿಗಳು ಶೇ. ೫೦ ರಷ್ಟು ನಿಧಿಯನ್ನು ತೆಗೆದುಕೊಳ್ಳುತ್ತಾರೆ; ಉಳಿದ ಶೇ. ೫೦ ರಷ್ಟು ಹಣ ನಮಗೆ ಬೇಕಾಗುತ್ತದೆ’, ಎಂದು ತಿಸ್ತಾ ಹೇಳಿದ್ದರು. ಆದ್ದರಿಂದ, ರಯೀಸ್ ಖಾನ್ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದರೆ ಇನ್ನೂ ಹೆಚ್ಚಿನವು ಹೊರಬರಬಹುದು, ಎಂದು ನ್ಯಾಯವಾದಿ ದೇಶಪಾಂಡೆ ಇವರು ಹೇಳಿದರು.