ಸಾಧಕರಿಗೆ ಮಹರ್ಷಿಗಳ ಸಂದೇಶ

ಸಾಧಕರಿಗೆ ಗುರುದೇವರ ಸ್ಥೂಲ ಕಾರ್ಯದ ಅರಿವಿದೆ. ಆದರೆ ಅವರ ಬಗ್ಗೆ ಯಾವುದು ತಿಳಿದಿಲ್ಲವೋ ಅದನ್ನು ಹೇಳಲು ನಾವು ಈ ಶಾಸ್ತ್ರವನ್ನು ಬರೆದಿದ್ದೇವೆ. ಗುರುಗಳಿಗೆ ‘ಸಾಧಕರು ಎಲ್ಲಿದ್ದಾರೆ, ‘ಯಾರು ನಾಮಜಪ ಮಾಡುತ್ತಿದ್ದಾರೆ, ‘ಯಾರು ಮಾಡುತ್ತಿಲ್ಲ, ‘ಯಾರಿಗೆ ಎಷ್ಟು ಶ್ರದ್ಧೆಯಿದೆ ಎನ್ನುವುದೆಲ್ಲವೂ ತಿಳಿದಿದೆ. ಸಾಧಕರು ಪುಣ್ಯ ಮಾಡಿದ್ದಾರೆ. ಪರಾತ್ಪರ ಗುರು ಶ್ರೀ ಶ್ರೀ ಜಯಂತ ಬಾಳಾಜಿ ಆಠವಲೆಯವರು ಅವರ ಜೀವನದಲ್ಲಿ ಬರುವುದು ಇದು ಅವರಿಗೆ ದೊರೆತಿರುವ ಶ್ರೀವಿಷ್ಣುವಿನ ವರಪ್ರಸಾದವಾಗಿದೆ. ಬರುವ ಒಂದು ವರ್ಷದಲ್ಲಿ ಸಾಧಕರು ಗುರುದೇವರ ಮೇಲಿರುವ ಭಕ್ತಿ ಮತ್ತು ಶ್ರದ್ಧೆಯನ್ನು ಹೆಚ್ಚಿಸಬೇಕಾಗಿದೆ. ನಾವು ಶ್ರೀರಾಮ ಹಾಗೂ ಶ್ರೀಕೃಷ್ಣರನ್ನು ಎಂದಿಗೂ ನೋಡಿಲ್ಲ. ಆದರೆ ಪರಾತ್ಪರ ಗುರು ಶ್ರೀ ಶ್ರೀ ಜಯಂತ ಬಾಳಾಜಿ ಆಠವಲೆಯವರೇ ಸಾಕ್ಷಾತ್ ಶ್ರೀರಾಮ ಹಾಗೂ ಶ್ರೀಕೃಷ್ಣರಾಗಿದ್ದಾರೆ. ಅವರ ಅಂತರಂಗದಲ್ಲಿ ಕೃಷ್ಣ ಮತ್ತು ರಾಮರಿದ್ದಾರೆ. ಆದ್ದರಿಂದಲೇ ಸಾಧಕರು ಗುರುದೇವರ ಚರಣಗಳಿಗೆ ಶರಣಾಗಬೇಕು. ಯಾವ ಸಾಧಕರು ಅವರಿಗೆ ಶರಣಾಗುವರೋ ಅವರು ಮೋಕ್ಷವನ್ನು ತಲುಪುವರು.