ಅಫಘಾನಿಸ್ತಾನದಲ್ಲಿನ ಭೂಕಂಪದಲ್ಲಿ ೨೫೫ ಜನರ ಮೃತ್ಯು

ಕಾಬೂಲ (ಅಫಘಾನಿಸ್ತಾನ) – ಅಫಘಾನಿಸ್ತಾನದಲ್ಲಿ ಜೂನ ೨೨ರ ಬೆಳಿಗ್ಗೆ ನಡೆದ ೬.೧ ‘ರಿಕ್ಟರ್ ಮಾಪನ’ದಷ್ಟು ತೀವೃತೆಯ ಭೂಕಂಪದಿಂದಾಗಿ ೨೫೫ ಜನರು ಸಾವನ್ನಪ್ಪಿದ್ದರೆ, ೧೫೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಭೂಕಂಪದಿಂದಾಗಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಹಾನಿಯಾಗಿದೆ. ಭೂಕಂಪದ ಕೇಂದ್ರಬಿಂದುವು ಅಫಘಾನಿಸ್ತಾನದಲ್ಲಿನ ಖೋಸ್ತ ನಗರದಿಂದ ೪೦ಕಿಮಿ ಅಂತರದಲ್ಲಿತ್ತು. ಈ ಭೂಕಂಪದ ಪ್ರಭಾವವು ೫೦೦ ಕಿ.ಮಿ. ವರೆಗೆ ಇತ್ತು. ಆದುದರಿಂದ ಅಫಘಾನಿಸ್ತಾನದೊಂದಿಗೆ ಪಾಕಿಸ್ತಾನ ಹಾಗೂ ಭಾರತದಲ್ಲಿಯೂ ಭೂಕಂಪದ ಅರಿವಾಯಿತು.