ಅತಿಕ್ರಮಣದಿಂದ ಜ್ಞಾನವಾಪಿ ಮುಕ್ತವಾಗುವ ತನಕ ನಮ್ಮ ಹೋರಾಟ ಮುಂದುವರಿಯುವುದು ! – ಹಿಂದೂ ಜನಜಾಗೃತಿ ಸಮಿತಿ

ಶ್ರೀ. ರಮೇಶ ಶಿಂದೆ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮಾನ್ಯ ಮೋಹನಜೀ ಭಾಗವತ ಇವರು ಕಾಶಿಯ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ನಾವು ಮಾನ್ಯ ಮೋಹನಜೀಯವರನ್ನು ಗೌರವಿಸುತ್ತೇವೆ; ಆದರೆ ಇದು ಅವರ ನಿಲುವಾಗಿದೆ. ಹಿಂದೂ ಧರ್ಮಶಾಸ್ತ್ರಗಳಲ್ಲಿ ಕಾಶಿಯನ್ನು ಮೋಕ್ಷನಗರ ಎಂದು ವರ್ಣಿಸಲಾಗಿದೆ. ಹಿಂದೂ ಜೀವನದರ್ಶನವು ಅದಿಲ್ಲದೇ ಅಪೂರ್ಣವಾಗಿದೆ. ಆದುದರಿಂದ ಈ ಪವಿತ್ರ ಭೂಮಿಯಲ್ಲಿ ಔರಂಗಾಜೇಬನಂತಹ ಕ್ರೂರಿಯು ಮಾಡಿದ ದೌರ್ಜನ್ಯಗಳಿಂದ ಹಿಂದೂ ದೇವಸ್ಥಾನಗಳನ್ನು ಮುಕ್ತಗೊಳಿಸುವುದು ಆವಶ್ಯಕವಾಗಿದೆ. ಆ ದೃಷ್ಟಿಯಿಂದ ಜ್ಞಾನವಾಪಿಯಲ್ಲಿನ ಅವಿಮುಕ್ತೇಶ್ವರನನ್ನು ಮುಕ್ತಗೊಳಿಸುವುದೇ ಆದ್ಯ ಕರ್ತವ್ಯವೆಂದು ಹಿಂದೂ ಸಮಾಜದ ನಿಲುವಾಗಿದೆ. ಇದು ಹಿಂದೂ ಜನಜಾಗೃತಿ ಸಮಿತಿಯ ನಿಲುವೂ ಆಗಿದೆ. ಹಿಂದೂ ಸಮಾಜವು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಹೋರಾಟವನ್ನೂ ತಾಳ್ಮೆಯಿಂದ ಹೋರಾಡಿ ಗೆದ್ದಿದೆ. ‘ಜ್ಞಾನವಾಪಿ’ಯ ಸಂದರ್ಭದಲ್ಲಿಯೂ ನ್ಯಾಯಾಂಗ ಮಾರ್ಗದಿಂದ ಪ್ರಯತ್ನಗಳು ನಡೆಯುತ್ತಿವೆ. ಆದ್ದರಿಂದ ಜ್ಞಾನವಾಪಿಯು ಅತಿಕ್ರಮಣದಿಂದ ಮುಖ್ತವಾಗುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆಯವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಶ್ರೀ. ರಮೇಶ ಶಿಂದೆಯವರು ಮುಂದೆ ಮತನಾಡುತ್ತಾ, ಅನೇಕ ವಿಷಯಗಳಲ್ಲಿ ಸಂಘಟನೆಗಳು ಅಥವಾ ಮುಖಂಡರ ಅಭಿಪ್ರಾಯಗಳು ಭಿನ್ನವಾಗಿರಬಹುದು. ವಿವಿಧ ಅಭಿಪ್ರಾಯಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿಯಾಗಿದೆ. ಹಾಗಾಗಿ ಭಿನ್ನಾಭಿಪ್ರಾಯವೆಂದರೆ ವಾದವಿವಾದವೆಂದಲ್ಲ. ಆದ್ದರಿಂದ, 100 ಕೋಟಿ ಹಿಂದೂ ಸಮಾಜದ ಮಾತ್ರವಲ್ಲದೇ ಕೆಲವು ಕಾರ್ಯಕರ್ತರ ಅಭಿಪ್ರಾಯವೂ ಭಿನ್ನವಾಗಿರಬಹುದು. ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ವಸ್ತುಸ್ಥಿತಿ ನ್ಯಾಯಾಲಯದ ಮುಂದಿವೆ. ಈ ಮೂಲಕ ಅದು ಹಿಂದೂ ದೇವಾಲಯ ಎಂದು ಸಾಬೀತಾಗುವುದು ಎಂದು ಹಿಂದೂ ಸಮಾಜ ನಂಬುತ್ತದೆ. ಪ್ರಾಚೀನ ಕಾಲದಲ್ಲಿ ಮಾತ್ರವಲ್ಲದೇ ಇಂದಿಗೂ ಬಾಮಿಯಾನ್‌ನಲ್ಲಿರುವ ಬುದ್ಧನ ವಿಗ್ರಹವಾಗಲಿ ಅಥವಾ ತುರ್ಕಸ್ತಾನದ ‘ಹಗಿಯಾ ಸೋಫಿಯಾ ಚರ್ಚ್’ ಆಗಿರಲಿ, ಎಲ್ಲೆಲ್ಲೂ ಮುಸ್ಲಿಮರ ಆಕ್ರಮಣಕಾರಿ ಮನಸ್ಥಿತಿ ಎದ್ದು ಕಾಣುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಮಾನವೀಯತೆ ಮತ್ತು ಸಹೋದರತ್ವದ ದೃಷ್ಟಿಯಿಂದ, ಮುಸ್ಲಿಮರು ತಮ್ಮ ವಶದಲ್ಲಿರುವ ಹಿಂದೂ ದೇವಾಲಯದ ಸ್ಥಳವನ್ನು ಹಿಂದೂಗಳಿಗೆ ಹಸ್ತಾಂತರಿಸುವುದಿಲ್ಲ. ಆದ್ದರಿಂದ, ಹಿಂದೂಗಳು ಈ ಹೋರಾಟವನ್ನು ಆಂದೋಲನ ಮತ್ತು ನ್ಯಾಯಾಲಯದ ಪ್ರಕ್ರಿಯೆಯ ಮೂಲಕ ನಡೆಸಸಬೇಕಾಗುತ್ತದೆ. ಇದಕ್ಕಾಗಿ ಹಿಂದೂ ಸಮಾಜದಿಂದ ಸಿದ್ಧತೆ ಆರಂಭವಾಗಿದೆ.