ಪರಾತ್ಪರ ಗುರು ಡಾ. ಆಠವಲೆ ಇವರು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ನೀಡಿದ ದಿಶೆಯಂತೆ ಎಲ್ಲರೂ ಆಚರಣೆ ಮಾಡಬೇಕು ! – ಪೂ. ಶಿವನಾರಾಯಣ ಸೇನ್

‘ಪರಾತ್ಪರ ಗುರು ಡಾ. ಆಠವಲೆ ಇವರ ಹಿಂದೂ ರಾಷ್ಟ್ರ ಸ್ಥಾಪನೆಯ ಈಶ್ವರೀ ಕಾರ್ಯ !’ ಈ ಕುರಿತು ವಿಶೇಷ ಸಂವಾದ !

ಕಳೆದ ೮೦೦ ವರ್ಷಗಳಿಂದ ಮೌಲ್ವಿ, ಮಿಶನರಿ ಹಾಗೂ ಮಾರ್ಕ್ಸವಾದಿಗಳು ಭಾರತೀಯ ಸಂಸ್ಕೃತಿಯನ್ನು ನಾಶ ಮಾಡಲು ಪ್ರಯತ್ನಿಸಿದರು. ದೇಶದಲ್ಲಿ ೧೦೦ ಕೋಟಿಗೂ ಹೆಚ್ಚು ಹಿಂದೂಗಳಿದ್ದರೂ ದೇಶದಲ್ಲಿ ಹಿಂದೂಗಳ ವಿರುದ್ಧ ಸದ್ದಿಲ್ಲದೇ ಕಾನೂನುಗಳನ್ನು ರೂಪಿಸಲಾಯಿತು. ಇಂತಹ ಸಮಯದಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ‘ಭಾರತವು ಹಿಂದೂ ರಾಷ್ಟ್ರವಾಗಬೇಕು’ ಎಂಬ ಸಂಕಲ್ಪವನ್ನು ಎಲ್ಲರೆದುರು ಮಂಡಿಸಿದರು. ಆಗ ನಮಗೆ ಆಶ್ಚರ್ಯ ಮತ್ತು ಅಸಾಧ್ಯ ಎಂದೆನಿಸುತ್ತಿತ್ತು; ಆದರೆ ರಾಮಜನ್ಮಭೂಮಿಯ ನಿರ್ಮಾಣ, ಕಾಶಿ ವಿಶ್ವನಾಥ ದೇವಾಲಯಕ್ಕಾಗಿ ಹೋರಾಟ ಸಹಿತ ಅನೇಕ ಘಟನೆಗಳನ್ನು ನೋಡಿ ಹಿಂದೂ ರಾಷ್ಟ್ರ ಸ್ಥಾಪನೆಯ ದೃಷ್ಟಿಯಿಂದ ಹಿಂದೂಗಳು ಕೃತಿಶೀಲರಾಗುತ್ತಿದ್ದಾರೆ. ಈಗ ಮಾತ್ರ ಹಿಂದೂ ರಾಷ್ಟ್ರದ ಸ್ಥಾಪನೆಯು ವಾಸ್ತವದಲ್ಲಿ ಆಗುತ್ತಿರುವುದು ಕಾಣಿಸುತ್ತಿದೆ. ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆ ಇವರು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನೀಡಿದ ದಿಶೆಗನುಸಾರ ಎಲ್ಲರೂ ಆಚರಣೆ ಮಾಡಬೇಕು ಎಂದು ಪಶ್ಚಿಮ ಬಂಗಾಲದ ‘ಶಾಸ್ತ್ರ ಧರ್ಮ ಪ್ರಚಾರ ಸಭಾ’ದ ಪ್ರಧಾನಕಾರ್ಯದರ್ಶಿ ಪೂ. ಶಿವನಾರಾಯಣ ಸೇನ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ‘ಪರಾತ್ಪರ ಗುರು ಡಾ. ಆಠವಲೆ ಇವರ ಹಿಂದೂ ರಾಷ್ಟ್ರ ಸ್ಥಾಪನೆಯ ಈಶ್ವರೀ ಕಾರ್ಯ !’ ಈ ಆನ್‌ಲೈನ್ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಈ ಸಮಯದಲ್ಲಿ ಅನುಭವಕಥನವನ್ನು ಹೇಳುತ್ತಿರುವಾಗ ‘ಪಿತಾಂಬರಿ ಪ್ರಾಡಕ್ಟ್ಸ ಪ್ರೈ.ಲಿ.’ನ ವ್ಯವಸ್ಥಾಪಕ ಸಂಚಾಲಕ ಶ್ರೀ. ರವೀಂದ್ರ ಪ್ರಭುದೇಸಾಯಿ ಇವರು ಮಾತನಾಡುತ್ತಾ, ಮೊದಲು ನಾನು ವಿವಿಧ ಹಿಂದುತ್ವನಿಷ್ಠ ಹಾಗೂ ಸಾಮಾಜಿಕ ಸಂಘಟನೆಗಳೊಂದಿಗೆ ಕಾರ್ಯ ಮಾಡುತ್ತಿದ್ದೆ. ಅದೇ ರೀತಿ ಅಧ್ಯಾತ್ಮದ ಗ್ರಂಥಗಳನ್ನು ಓದುತ್ತಿದ್ದೆ; ಆದರೆ ಯಾವಾಗ ಸನಾತನದ ಸಂಪರ್ಕಕ್ಕೆ ಬಂದೆ, ಆಗ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆ ಇವರು ಅಧ್ಯಾತ್ಮವನ್ನು ವೈಜ್ಞಾನಿಕ ಭಾಷೆಯಲ್ಲಿ ಮಾಡಿದ ವಿವೇಚನೆಯು ಇಷ್ಟವಾಯಿತು. ಮುಂದೆ ಸಾಧನೆಯನ್ನು ಮಾಡಿದಾಗ ನನಗೆ ನಿಜವಾದ ಅರ್ಥದಲ್ಲಿ ಆನಂದ ಮತ್ತು ಸಮಾಧಾನ ಸಿಕ್ಕಿತು ಎಂದು ಹೇಳಿದರು. ಈ ಸಮಯದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಸಾರಕ ಶ್ರೀ. ಅಭಯ ವರ್ತಕ ಇವರು ಮಾತನಾಡುತ್ತಾ, ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ಅವರ ಗುರುಗಳ ಆಶೀರ್ವಾದದಿಂದ ಸನಾತನ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಜನರನ್ನು ಸಾಧನೆಯತ್ತ ಹೊರಳಿಸಿದರು. ಅದೇ ರೀತಿ ಅಧ್ಯಾತ್ಮವನ್ನು ಶಾಸ್ತ್ರೀಯ ಪರಿಭಾಷೆಯಲ್ಲಿ ಪ್ರಚಾರ ಮಾಡಿದರು. ಮುಂದೆ ವಿಶ್ವಕಲ್ಯಾಣಕ್ಕಾಗಿ ಈಶ್ವರೀ ರಾಜ್ಯ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕೆಂದು ದೇಶಾದ್ಯಂತ ಹಿಂದೂ ರಾಷ್ಟ್ರಜಾಗೃತಿ ಸಭೆಗಳ ಆಯೋಜನೆಯನ್ನು ಮಾಡಿ ಹಿಂದೂ ರಾಷ್ಟ್ರದ ಕಾರ್ಯಕ್ಕೆ ವೇಗ ನೀಡಿದರು. ದೇಶಾದ್ಯಂತ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಸತ್ಸಂಗ ಮತ್ತು ಧರ್ಮಶಿಕ್ಷಣ ವರ್ಗಗಳನ್ನು ಆರಂಭಿಸಿದರು. ಧರ್ಮಕಾರ್ಯಕ್ಕಾಗಿ ಹಿಂದೂಗಳನ್ನು ಸಂಘಟಿಸಿದರು. ಇದಕ್ಕಾಗಿ ಪರಾತ್ಪರ ಗುರು ಡಾ. ಆಠವಲೆ ಇವರು ವೈಜ್ಞಾನಿಕ ಪರಿಭಾಷೆಯಲ್ಲಿ ಅಧ್ಯಾತ್ಮ, ಸಾಧನೆ, ಆಚಾರಧರ್ಮ, ಆಯುರ್ವೇದ, ಹಿಂದೂ ರಾಷ್ಟ್ರ ಇತ್ಯಾದಿ ವಿವಿಧ ವಿಷಯಗಳ ಕುರಿತು ೩೫೪ ಗ್ರಂಥಗಳನ್ನು 17 ಭಾಷೆಗಳಲ್ಲಿ 88 ಲಕ್ಷದ 84 ಸಾವಿರ ಪ್ರತಿಗಳನ್ನು ಪ್ರಕಾಶಿಸಿದರು. ಇಂದು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಧ್ಯಾತ್ಮಿಕ ಬಲ ನೀಡುವ ಕಾರ್ಯವನ್ನು ಸನಾತನ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು. ಕೊಲ್ಲಾಪುರದಲ್ಲಿನ ಶೀವಸೇನೆಯ ಕರವೀರ ತಾಲೂಕಿನ ಮುಖಂಡ ಶ್ರೀ. ರಾಜು ಯಾದವ ಇವರು ಮಾತನಾಡುತ್ತಾ, ಛತ್ರಪತಿ ಶಿವಾಜಿ ಮಹಾರಾಜರು ಸ್ವತಃ ಸಾಧನೆ ಮಾಡಿದರು ಮತ್ತು ಮಾವಳೆ(ಸೈನ್ಯ)ಯರನ್ನು ನಿರ್ಮಿಸಿ ಹಿಂದವಿ ಸ್ವರಾಜ್ಯದ ಸ್ಥಾಪಿಸಿದರು. ನಾವು ಸಹ ಸಾಧನೆಯ ಬಲದಿಂದ ಹಿಂದೂ ರಾಷ್ಟ್ರವನ್ನು ತರಬಹುದು, ಇದು ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿದ್ದಾರೆ. ಇಂದು ಹಿಂದೂ ರಾಷ್ಟ್ರದ ಕುರಿತು ಎಲ್ಲಾ ಕಡೆಗಳಲ್ಲಿ ಚರ್ಚೆ ನಡೆಯುತ್ತಿದೆ ಮತ್ತು ಆ ದೃಷ್ಟಿಯಿಂದ ನಾವೆಲ್ಲರೂ ಮಾರ್ಗಕ್ರಮಣ ಮಾಡುತ್ತಿದ್ದೇವೆ ಎಂದು ಹೇಳಿದರು.