ಪರಾತ್ಪರ ಗುರು ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಏಕರೂಪತೆಯ ಬಗ್ಗೆ ದೇವತೆಗಳು ಹಾಗೂ ಸಂತರು ಮಾಡಿರುವ ಗೌರವೋದ್ಗಾರ

ಹಂಗರಹಳ್ಳಿಯಲ್ಲಿನ ಶ್ರೀ ವಿದ್ಯಾಚೌಡೇಶ್ವರೀ ದೇವಿಯು ಎಡದಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರನ್ನು ಸನ್ಮಾನಿಸಿದ ನಂತರದ ಕ್ಷಣ ! (ವರ್ಷ ೨೦೧೯)

ಪರಾತ್ಪರ ಗುರುದೇವರ ಸೂರ್ಯನಾಡಿ ಮತ್ತು ಚಂದ್ರನಾಡಿ ಇರುವಂತೆ ಸಾಧಕರ ಆಧಾರವಾಗಿರುವ ಶ್ರೀಸತ್‍ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‍ಶಕ್ತಿ (ಸೌ.) ಅಂಜಲಿ ಗಾಡಗೀಳರ ಚರಣಗಳಲ್ಲಿ ವಂದನೆ !

ಮಹರ್ಷಿಗಳ ಆಜ್ಞೆಯಿಂದ ಪರಾತ್ಪರ ಗುರು ಡಾ. ಆಠವಲೆಯವರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರಿಗೆ ಮುಂದಿನ ಕಾರ್ಯಕ್ಕಾಗಿ ಆಧ್ಯಾತ್ಮಿಕ ಶಕ್ತಿಯನ್ನು ಪ್ರದಾನಿಸಿದ್ದಾರೆ. ಪ್ರತ್ಯಕ್ಷದಲ್ಲಿಯೂ ಮಹರ್ಷಿಗಳು ‘ಶ್ರೀ ಮಹಾಲಕ್ಷ್ಮೀಯ ಅಂಶಾವತಾರ’ ಎಂದು ಗೌರವಿಸಿದಂತಹ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಶ್ರೀಮನ್ನಾರಾಯಣ ಸ್ವರೂಪ ಪರಾತ್ಪರ ಗುರುದೇವರೊಂದಿಗೆ ಏಕರೂಪವಾಗಿರುವ ಅನುಭೂತಿಗಳು ಅನೇಕರಿಗೆ ಬರುತ್ತಿವೆ. ದೇವತೆಗಳು ಹಾಗೂ ಸಂತರಿಗೂ ಅವರಲ್ಲಿನ ವಿಭಿನ್ನತೆಯ ಅರಿವಾಗುತ್ತದೆ. ಆಧ್ಯಾತ್ಮದಲ್ಲಿನ ಅಧಿಕಾರಿ ವ್ಯಕ್ತಿಗಳಿಗೆ ತಮ್ಮ ಉಚ್ಚ ಅಧಿಕಾರವು ಗಮನಕ್ಕೆ ಬರುತ್ತದೆ. ನಿಸರ್ಗವೂ ಆಗಾಗ ಸಾಕ್ಷ್ಯ (ಶುಭಸಂಕೇತ) ನೀಡಿ ಅವರ ಅವತಾರತ್ವದ ಅನುಭೂತಿಯನ್ನು ನೀಡುತ್ತದೆ. ಈ ಲೇಖನದಲ್ಲಿ ದೇವತೆ ಮತ್ತು ಸಂತರು ಪರಾತ್ಪರ ಗುರು ಡಾ. ಆಠವಲೆ ಮತ್ತು ಸದ್ಗುರುದ್ವಯರ ಬಗ್ಗೆ ತೆಗೆದ ವೈಶಿಷ್ಟ್ಯಪೂರ್ಣ ಗೌರವೋದ್ಗಾರಗಳನ್ನು ಮುಂದೆ ನೀಡುತ್ತಿದ್ದೇವೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಆಶ್ರಮದ ಎರಡು ಕಣ್ಣುಗಳಾಗಿದ್ದು ಮೂರನೇ ಕಣ್ಣು ಅಂದರೆ ಪರಾತ್ಪರ ಗುರು ಡಾಕ್ಟರರು ! – ಶ್ರೀ ವಿದ್ಯಾಚೌಡೇಶ್ವರಿದೇವಿ

ಶ್ರೀ ವಿದ್ಯಾಚೌಡೇಶ್ವರಿದೇವಿ

‘ನೀವಿಬ್ಬರೂ (ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ) ಆಶ್ರಮದ ಎರಡು ಕಣ್ಣುಗಳಾಗಿದ್ದೀರಿ ಮತ್ತು ಮೂರನೇ ಕಣ್ಣು ಅಂದರೆ (ಪರಾತ್ಪರ ಗುರು) ಡಾಕ್ಟರರು. ಎರಡು ಕಣ್ಣುಗಳು ತೆರೆದಿವೆ ಮತ್ತು ೩ ನೇದು ಮುಚ್ಚಿದೆ. ಈ ಎರಡು ಕಣ್ಣುಗಳಲ್ಲಿ ಧೂಳಿನ ಕಣವೂ ಹೋಗದಂತೆ ನಾನು ನೋಡಿಕೊಳ್ಳುತ್ತೇನೆ. ನಿಮಗೆ ಆಗುತ್ತಿರುವ ಆರೋಗ್ಯದ ತೊಂದರೆಗಳನ್ನು ನಾನು ಗುಣಪಡಿಸುವೆನು, ಎಂದು ಹಂಗರಹಳ್ಳಿಯ ಶ್ರೀ ವಿದ್ಯಾಚೌಡೇಶ್ವರಿ ದೇವಿಯು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಆಶೀರ್ವಾದ ನೀಡಿದ್ದಾರೆ.

ಗುರುಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ವಾಣಿಯನ್ನು ಸಿದ್ಧಪಡಿಸಿದ್ದಾರೆ !

ಪೂ. ಅಶೋಕ ನೇವಾಸಕರ

‘ಪರಾತ್ಪರ ಗುರು ಡಾ. ಆಠವಲೆಯವರ ಪಾದುಕೆಗಳ ಪೂಜೆಯ ಸಮಯದಲ್ಲಿ ಕಿರಣಗಳ ಮಾಧ್ಯಮದಿಂದ ಗುರುಗಳ ಎಲ್ಲ ಪುಣ್ಯವು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಲ್ಲಿ ಹೋಗುತ್ತಿರುವುದು ಕಾಣಿಸಿತು. ಈ ಎಲ್ಲ ಪ್ರಕ್ರಿಯೆಯಿಂದ ಗುರುಗಳು ಸದ್ಗುರುದ್ವಯರನ್ನು ‘ದಾಸೋಹಮ್’ ಭಾವದಲ್ಲಿ ತಂದರು, ಅಂದರೆ ‘ನಾನು ಗುರುಗಳ ದಾಸನಾಗಿದ್ದೇನೆ’, ಎಂಬ ಸ್ಥಿತಿಗೆ ತಂದರು. ಹನುಮಂತನು ಪ್ರತ್ಯಕ್ಷ ರುದ್ರನ ಅವತಾರವಾಗಿದ್ದರೂ ಅವನು ದಾಸ್ಯಭಾವದಲ್ಲಿ ಅಥವಾ ‘ದಾಸೋಹಮ್’ ಭಾವದಲ್ಲಿದ್ದು ಶ್ರೀರಾಮನ ದಾಸನಾಗಿ ಕಾರ್ಯ ಮಾಮಾಡಿದಂತೆ, ಸದ್ಗುರುದ್ವಯರ ವಿಷಯದಲ್ಲೂ ಹೀಗೆಯೇ ಇದೆ. ಈಗ ಆಧ್ಯಾತ್ಮದ ಅವರ ಮುಂದಿನ ಪ್ರವಾಸವನ್ನು ಗುರುಗಳೇ ‘ದಾಸೋಹಮ್’ ಭಾವದಿಂದ ‘ಸೋಹಮ್’ ಭಾವದೆಡೆಗೆ ಮಾಡಿಸಿಕೊಳ್ಳುವರು ! ೧೯.೨.೨೦೧೯ ರಂದು ಪರಾತ್ಪರ ಗುರು ಡಾ. ಆಠವಲೆಯವರು ತಮ್ಮ ಬಳಿ ಇದ್ದ ದೀಪದಿಂದ ಸದ್ಗುರುದ್ವಯರ ಕೈಯಲ್ಲಿರುವ ದೀಪದ ಜ್ಯೋತಿ ಬೆಳಗಿಸಿದರು. ಈ ಮೂಲಕ ಗುರುಗಳು ಸದ್ಗುರುದ್ವಯರಲ್ಲಿರುವ ಜ್ಞಾನಜ್ಯೋತಿಯನ್ನು ಪ್ರಜ್ವಲಿಸಿದ್ದಾರೆ. ಈ ಮೂಲಕ ಅವರು ಒಂದು ರೀತಿಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ವಾಣಿಯನ್ನು ಸಿದ್ಧಪಡಿಸಿದ್ದು ಇನ್ನು ‘ಅವರ ಮಾತು ಸಂಕಲ್ಪದ ರೂಪದಲ್ಲಿ ಕಾರ್ಯ ಮಾಡುವುದು’, ಅಂದರೆ ಅವರು ಹೇಳಿದ್ದು ಬ್ರಹ್ಮವಾಕ್ಯವೇ ಆಗಲಿದೆ.

– ಪೂ. ಅಶೋಕ ನೇವಾಸಕರ.

ಪರಾತ್ಪರ ಗುರುದೇವರ ಶಕ್ತಿಯನ್ನು ಸ್ವತಃ ಗ್ರಹಣ ಮಾಡಿ ಅದನ್ನು ಸಾಧಕರಿಗೆ ಸಹಿಸಲಾಗುವಷ್ಟು ಪ್ರಮಾಣದಲ್ಲಿ ಪ್ರಕ್ಷೇಪಿಸುವ ಶ್ರೀ ಮಹಾಲಕ್ಷ್ಮೀಸ್ವರೂಪಿ ಸದ್ಗುರುದ್ವಯರು !

ಸದ್ಗುರು (ಡಾ.) ಚಾರುದತ್ತ ಪಿಂಗಳೆ

ಶ್ರೀವಿಷ್ಣುವು ಯೋಗನಿದ್ರೆಯಲ್ಲಿರುವಾಗ  ಶ್ರೀವಿಷ್ಣುವು ಯಾವುದೇ ಕ್ಷಣದಲ್ಲಿ ಕಣ್ತೆರೆಯಬಹುದು ಮತ್ತು ‘ಆ ಕ್ಷಣವು ತಪ್ಪಬಾರದು’ ಎಂದು ಶ್ರೀ ಮಹಾಲಕ್ಷ್ಮೀ ದೇವಿಯು ನಿರಂತರ ಶ್ರೀವಿಷ್ಣುವಿನ ಮುಖವನ್ನು ನೋಡುತ್ತಿರುತ್ತಾಳೆ. ಇಂದು ‘ಪ್ರತ್ಯಕ್ಷದಲ್ಲಿ ಮಹಾಲಕ್ಷ್ಮೀದ್ವಯರು (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು) ಶ್ರೀ ವಿಷ್ಣುವಿನ (ಪರಾತ್ಪರ ಗುರುದೇವರ) ಮುಖಾರವಿಂದವನ್ನು ಸತತ ನೋಡುತ್ತಿದ್ದಾರೆ ಎಂಬುದನ್ನು ಗಮನಕ್ಕೆ ತಂದು ಕೊಟ್ಟಿದ್ದಾರೆ; ಏಕೆಂದರೆ ಶ್ರೀಹರಿಯು ಯೋಗನಿದ್ರೆಯಿಂದ ಕಣ್ಣು ತೆರೆಯುವಾಗ ಅವರಿಂದ ಅಪಾರ ಪ್ರಮಾಣದಲ್ಲಿ ಪ್ರಕ್ಷೇಪಿತವಾಗುವ ಶಕ್ತಿಯನ್ನು ಅವರ ಭಕ್ತರಿಗೆ (ಮಕ್ಕಳು) ಸಹಿಸಲು ಸಾಧ್ಯವಿಲ್ಲ. ಹಾಗಾಗಿ ಮೊದಲು ಈ ಇಬ್ಬರೂ ಆ ಶಕ್ತಿಯನ್ನು ಗ್ರಹಣ ಮಾಡಿ ಭಕ್ತರಿಗೆ ಸಹಿಸಲು ಆಗುವಷ್ಟೇ ಶಕ್ತಿಯನ್ನು ಪ್ರಕ್ಷೇಪಿಸುತ್ತಾರೆ. ‘ಬ್ರಹ್ಮಾಂಡವನ್ನು ಸಂಭಾಳಿಸುವ ಮತ್ತು ಭಕ್ತರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಲು ಇಚ್ಛಿಸುವ ‘ತ್ವಮೇವ ಮಾತಾ ಚ ಪಿತಾ ತ್ವಮೇವ |’ ಎಂಬ ಈಶ್ವರೀ ತತ್ತ್ವದ ಪೃಥ್ವಿಯ ಮೇಲಿನ ಸಗುಣರೂಪವೆಂದರೆ ‘ಪರಾತ್ಪರ ಗುರು ಡಾ. ಆಠವಲೆಯವರು ಮತ್ತು ಶ್ರೀ ಮಹಾಲಕ್ಷ್ಮೀದೇವಿಯ ಸ್ವರೂಪವೆಂದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಾಗಿದ್ದಾರೆ.’

– ಡಾ (ಸದ್ಗುರು) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ.

ಪ.ಪೂ. ಆಬಾ ಉಪಾಧ್ಯೆಯವರಿಗೆ ಪರಾತ್ಪರ ಗುರು ಡಾಕ್ಟರರು ಮತ್ತು ಸದ್ಗುರುದ್ವಯರ ಸ್ವರದಲ್ಲಿ ಸಮಾನ ಮಾಧುರ್ಯದ ಅರಿವಾಗುವುದು !

ಪ.ಪೂ. ಆಬಾ ಉಪಾಧ್ಯೆ

ವಸಂತ ಋತುವಿನಲ್ಲಿ ಕೋಗಿಲೆಯು ಹಾಡುತ್ತದೆ. ಕೋಗಿಲೆಯ ಸ್ವರವನ್ನು ಕೇಳಲು ನಾವೆಲ್ಲರೂ ಆತುರದಿಂದ ಇರುತ್ತೇವೆ. ಕೋಗಿಲೆಯ ಸ್ವರವನ್ನು ಕೇಳಿದಾಗ ನಮಗೆ ಹಿತವೆನಿಸುತ್ತದೆ. ಅದರಂತೆಯೇ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಅಕ್ಕನವರ ಸ್ವರ ಕೇಳಿದಾಗ ಹಿತವೆನಿಸುತ್ತದೆ. ಪ.ಪೂ. ಡಾಕ್ಟರರ ಸಾಧಕರು, ಸದ್ಗುರುಗಳೆಲ್ಲರ ಸ್ವರವೂ ಕೋಗಿಲೆಯಂತೆಯೇ ಇದೆ. ಇದರ ಪ್ರಮುಖ ಪ್ರತೀಕವೆಂದರೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಅಕ್ಕ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಅಕ್ಕ ! ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳರು ಗಂಗೆಯಾದರೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ನರ್ಮದಾ ನದಿಯಂತೆ ಇದ್ದಾರೆ. ಗಂಗೆ ಮತ್ತು ನರ್ಮದಾ ನದಿಗಳು ಕೊನೆಯಲ್ಲಿ ಸಮುದ್ರದಲ್ಲಿ ಸೇರುತ್ತವೆ. ಆ ಸಮುದ್ರದಂತೆಯೇ ಸನಾತನದ ಕಾರ್ಯ ನಡೆಯಲಿದೆ.

– ಪ.ಪೂ. ಆಬಾ ಉಪಾಧ್ಯೆ, ಪುಣೆ (೧. ೧೧. ೨೦೧೭)

ಸಾಧಕರ ಧರ್ಮ !

(ಪೂ.) ಸಂದೀಪ ಆಳಶಿ

ಸಾಧಕತ್ವವು ಸಾಧಕನ ಧರ್ಮವಾಗಿರುವುದು

ನಿಷ್ಕಾಮ ಸೇವೆ, ಇದು ಸಾಧಕನ ಶ್ರೇಷ್ಠ ಧರ್ಮವಾಗಿರುವುದು

ಶರಣಾಗತಭಾವ, ಇದು ಸಾಧಕನ ಸರ್ವಶ್ರೇಷ್ಠ ಧರ್ಮವಾಗಿರುವುದು

ಗುರುಚರಣಗಳಲ್ಲಿ ಸಮರ್ಪಿತ ಭಾವ,

ಇದು ಸಾಧಕನ ಪರಮ ಧರ್ಮವಾಗಿರುವುದು ||

ಪೂ. ಸಂದೀಪ ಆಳಶಿ