ಪೋರ್ಚುಗೀಸರು ‘ಇನ್‌ಕ್ವಿಝಿಶನ್’ ಮೂಲಕ ನಡೆಸಿದ ದೌರ್ಜನ್ಯದ ಇತಿಹಾಸವನ್ನು ಜಗತ್ತಿನ ಮುಂದೆ ತರದೇ ಹಿಂದೂ ಸಮಾಜವು ಸುಮ್ಮನೇ ಕುಳಿತುಕೊಳ್ಳುವುದಿಲ್ಲ! – ರಮೇಶ ಶಿಂದೆ

‘ಗೋವಾ ಫೈಲ್ಸ್’ : ಇನ್‌ಕ್ವಿಝಿಶನ್’ನ ದೌರ್ಜನ್ಯಗಳು ?’ ಕುರಿತು ವಿಶೇಷ ಆನ್‌ಲೈನ್ ಸಂವಾದ !

ಗೋವಾ ಸೇರಿದಂತೆ ಇಡೀ ಕೊಂಕಣ ಪ್ರದೇಶವು ಭಗವಾನ್ ಪರಶುರಾಮನ ಭೂಮಿಯಾಗಿದೆ, ಇದು ಐತಿಹಾಸಿಕ, ಪೌರಾಣಿಕ ಸತ್ಯವಾಗಿದೆ. ಗೋವಾದ ಭೂಮಿ ಕ್ರೈಸ್ತ ಪಂಥದ ಉದಯವಾಗುವ ಮೊದಲಿನಿಂದಲೂ ಅಸ್ತಿತ್ವದಲ್ಲಿದೆ. ಆದಾಗ್ಯೂ, ಗೋವಾ ಇದು ‘ವಾಸ್ಕೋ ಡ’ಗಾಮಾ’ ಮತ್ತು ‘ಕ್ಸೇವಿಯರ್’ನ ಭೂಮಿಯೆಂದು ಹೇಳಿ ಅವರನ್ನು ವೈಭವೀಕರಿಸಲಾಗಿದೆ. ಇದೇ ಕ್ಸೇವಿಯರ್ ನು ಗೋವಾದಲ್ಲಿ ‘ಇನ್‌ಕ್ವಿಝಿಶನ್’ ಅನ್ವಯಿಸಿದನು. ಗೋವಾದಲ್ಲಿ ‘ಇನ್‌ಕ್ವಿಝಿಶನ್’ ಕಾಲದ ಉಳಿದಿರುವ ಏಕೈಕ ಪ್ರಮುಖ ಸಾಕ್ಷ್ಯವೆಂದರೆ ‘ಹಾತ್ ಕಾತರೋ’ ಕಂಬ. ಆ ಕಾಲದಲ್ಲಿ ಇದೇ ಕಂಬಕ್ಕೆ ಕಟ್ಟಿ ಹಿಂದೂಗಳ ಕೈಗಳನ್ನು ಕತ್ತರಿಸಲಾಯಿತು. ಹಳೆ ಗೋವಾದಲ್ಲಿ ‘ಹಾತ್ ಕಾತರೊ’ ಕಂಬ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟ ಸ್ಥಿತಿಯಲ್ಲಿದೆ. ಈ ಇತಿಹಾಸವನ್ನು ಅಳಿಸಿ ಹಾಕಲು ಸರಕಾರ ಮತ್ತು ಪುರಾತತ್ವ ಇಲಾಖೆಗಳ ಮೂಲಕ ಷಡ್ಯಂತ್ರ ನಡೆಯುತ್ತಿದೆ. ಸ್ಪೇನ್ ಮತ್ತು ರಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ, ‘ಇನ್‌ಕ್ವಿಝಿಶನ್’ ಕಾಲದ ಪುರಾವೆಗಳು ಮತ್ತು ಅವಶೇಷಗಳನ್ನು ಸಂರಕ್ಷಿಸಲಾಗಿದೆ ಮತ್ತು ಇಡೀ ಜಗತ್ತು ನೋಡುವಂತೆ ವಸ್ತುಸಂಗ್ರಹಾಲಯಗಳಲ್ಲಿ ಇರಿಸಲಾಗಿದೆ; ಆದರೆ, ಗೋವಾದಲ್ಲಿ ‘ಹಾತ ಕಾತರೋ’ ಕಂಬ ಅಂದರೆ ‘ಇನ್‌ಕ್ವಿಝಿಶನ್ ಪಿಲ್ಲರ್’ ಇದರ ಸತ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಪೋರ್ಚುಗೀಸರು ನಡೆಸಿದ ದೌರ್ಜನ್ಯದ ಇತಿಹಾಸವನ್ನು ಮರೆಮಾಚಲಾಗುತ್ತಿದೆ, ಆದರೆ ಹಿಂದೂ ಸಮಾಜವು ಈಗ ಎಚ್ಚೆತ್ತುಕೊಳ್ಳುತ್ತಿದೆ ಮತ್ತು ಹಿಂದೂ ಸಮುದಾಯದ ಮೇಲೆ ಪೋರ್ಚುಗೀಸರು ನಡೆಸಿದ ದೌರ್ಜನ್ಯವನ್ನು ‘ಇನ್‌ಕ್ವಿಝಿಶನ್’ ಮತ್ತು ‘ಹಾತ್ ಕಾತರೋ’ಗಳ ಮೂಲಕ ಬೆಳಕಿಗೆ ತರುವ ವರೆಗೆ ನಾವು ಸುಮ್ಮನೇ ಕುಳಿತುಕೊಳ್ಳುವುದಿಲ್ಲ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಪ್ರತಿಪಾದಿಸಿದರು. ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಗೋವಾ ಫೈಲ್ಸ್’- ‘ಇನ್‌ಕ್ವಿಝಿಶನ್’ನ ದೌರ್ಜನ್ಯಗಳು?’ ವಿಶೇಷ ಆನ್‌ಲೈನ್ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ಈ ವಿಶೇಷ ಸಂವಾದದಲ್ಲಿ ‘ಇನ್‌ಕ್ವಿಝಿಶನ್’ನ ಸ್ವರೂಪವನ್ನು ತೋರಿಸುವ ವೀಡಿಯೋವನ್ನು ತೋರಿಸಲಾಯಿತು. ಜಗತ್ತಿನಾದ್ಯಂತ ಯಾವ ರೀತಿ ‘ಇನ್‌ಕ್ವಿಝಿಶನ್’ ಮಾಡಲಾಯಿತು, ಎಂಬುದರ ಚಿತ್ರಸಹಿತ ಮತ್ತು ಐತಿಹಾಸಿಕ ಸಂದರ್ಭ ಸಹಿತವಾಗಿ ರಾಷ್ಟ್ರೀಯ ಐತಿಹಾಸಿಕ ಸಂಶೋಧನೆ ಮತ್ತು ತುಲನಾತ್ಮಕ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ. ನೀರಜ್ ಅತ್ರಿ ಇವರು ಈ ವೀಡಿಯೋ ಮುಖಾಂತರ ನಿರೂಪಿಸಿದರು. ‘ಛತ್ರಪತಿ ಶಿವಾಜಿ ಮಹಾರಾಜ ಮ್ಯೂಸಿಯಂ ಆಫ್ ಇಂಡಿಯನ್ ಹಿಸ್ಟ್ರಿ, ಪುಣೆ’ ಇದರ ವತಿಯಿಂದ ತಯಾರಿಸಲಾದ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪ್ರಕಾಶಿತವಾದ ಚಿತ್ರ ಫಲಕಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.

ಗೋವಾದಲ್ಲಿ ‘ಇನ್‌ಕ್ವಿಝಿಶನ್’ನ್ನು ಜಾರಿಗೊಳಿಸಲು ಜವಾಬ್ದಾರನಾಗಿರುವ ಮತ್ತು ಯಾರ ನೇತೃತ್ವದಿಂದ ಗೋವಾದಲ್ಲಿ ಹಿಂದೂಗಳ ಶೋಷಣೆ ಮಾಡಲಾಯಿತೋ ಆ ಫ್ರಾನ್ಸಿಸ್ ಕ್ಸೇವಿಯರ್.ಗೆ ಸಂತ ಸ್ಥಾನಮಾನ ನೀಡಲಾಗುತ್ತಿದೆ. ಹಿಂದೂಗಳ ಮೇಲಿನ ದೌರ್ಜನ್ಯವನ್ನು ಮರೆಮಾಚಲಾಗಿದೆ, ‘ಗೋವಾ ಫೈಲ್ಸ್’ ಮೂಲಕ ಜಗತ್ತಿನ ಜನರ ಮುಂದೆ ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವುದು ಈ ಕಾರ್ಯಕ್ರಮದ ಹಿಂದಿನ ಉದ್ದೇಶವಾಗಿದೆ ಎಂದು ಗೋಮಾಂತಕ ಮಂದಿರ ಮಹಾಸಂಘದ ಕಾರ್ಯದರ್ಶಿ ಶ್ರೀ. ಜಯೇಶ ಥಳಿಯವರು ಈ ವೇಳೆ ಹೇಳಿದರು.

ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ್ ರಾಜಹಂಸ್ ಇವರು ಮಾತನಾಡುತ್ತಾ, ಗೋವಾದ ವೋಟ್ ಬ್ಯಾಂಕ್ ರಕ್ಷಣೆಗಾಗಿ ಇಲ್ಲಿ ಸೇಂಟ್ ಕ್ಸೇವಿಯರ್‌ನ ವೈಭವೀಕರಣ ಮಾಡಲಾಯಿತು. ಪೋರ್ಚುಗೀಸರಿಗೆ ಇಲ್ಲಿ ಅನುಕಂಪದ ವಾತಾವರಣ ನಿರ್ಮಾಣವಾಯಿತು. ಪೋರ್ಚುಗೀಸರ ಅಮಾನವೀಯ ದೌರ್ಜನ್ಯದ ಇತಿಹಾಸವನ್ನು ಇಲ್ಲಿನ ಶಾಲಾ ಪಠ್ಯಪುಸ್ತಕಗಳಲ್ಲಿಯೂ ಕಲಿಸಿಲ್ಲ. ಪೋಪ್ ಆ ದೇಶಗಳಿಗೆ ಹೋಗಿ ಜಗತ್ತಿನಾದ್ಯಂತ ನಡೆದ ‘ಇನ್‌ಕ್ವಿಝಿಶನ್’ ಗಾಗಿ ಕ್ಷಮೆಯಾಚಿಸಿದರು; ಆದರೆ, ಗೋವಾದಲ್ಲಿ ನಡೆದ ‘ಇನ್‌ಕ್ವಿಝಿಶನ್’ ಬಗ್ಗೆ ಇನ್ನೂ ಗೋಮಾಂತಕಿಯರ ಕ್ಷಮೆ ಕೇಳಿಲ್ಲ. ಗೋವಾ ಸೇರಿದಂತೆ ಎಲ್ಲೆಡೆ ಹಿಂದೂಗಳ ಬೇಡಿಕೆಯಂತೆ ಗೋವಾದಲ್ಲಿ ನಡೆದ ‘ಇನ್‌ಕ್ವಿಝಿಶನ್’ಗೆ ಪೋಪ್ ಕ್ಷಮೆ ಯಾಚಿಸಬೇಕು, ಎಂದರು.