ಹಿಂದೂ ಸಂಸ್ಕೃತಿಯನ್ನು ಗೌರವಿಸದಿದ್ದರೆ ಬಹಿಷ್ಕಾರದ ಶಸ್ತ್ರ ಬಳಸುವೆವು ! – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಎಚ್ಚರಿಕೆ

‘ಮಲಬಾರ್ ಗೋಲ್ಡ್’ನಿಂದ ಕರೀನಾ ಖಾನ್ ಬದಲಿಗೆ ತಮನ್ನಾ ಭಾಟಿಯಾದ ಹೊಸ ಜಾಹೀರಾತು ಭಿತ್ತರ !

ಶ್ರೀ ರಮೇಶ ಶಿಂದೆ

‘ಅಕ್ಷಯ ತೃತೀಯ’ವು ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ದಿನದಂದು ಹಿಂದೂ ಸಂಪ್ರದಾಯದ ಪ್ರಕಾರ ಹೆಚ್ಚಿನ ಪ್ರಮಾಣದ ಚಿನ್ನವನ್ನು ಖರೀದಿಸಲಾಗುತ್ತದೆ; ಆದರೆ ಈ ಸಂದರ್ಭದಲ್ಲಿ ‘ಮಲಬಾರ್ ಗೋಲ್ಡ್ ಅಂಡ್ ಡೈಮಂಡ್’ವು ಅಕ್ಷಯ ತೃತಿಯಾದ ಸಂದರ್ಭದಲ್ಲಿ ‘ರಮಜಾನ’ನ ಜಾಹೀರಾತು ಪ್ರಕಟಿಸಿದಂತೆ ನಟಿ ಕರೀನಾ ಕಪೂರ್ ಖಾನ್ ಅವರ ಹಣೆಗೆ ಕುಂಕುಮ ಅಥವಾ ಟಿಕ್ಲಿ ಧರಿಸದೆ ತಮ್ಮ ಆಭರಣಗಳನ್ನು ಜಾಹೀರಾತು ಮಾಡಿದೆ. ಈ ಮೂಲಕ ಉದ್ದೇಶಪೂರ್ವಕವಾಗಿ ಹಿಂದೂ ಸಮಾಜದ ಭಾವನೆಗಳಿಗೆ ಧಕ್ಕೆ ತರಲು ಮತ್ತು ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ಪ್ರಯತ್ನಿಸಲಾಯಿತು. ಹಿಂದೂ ಹಬ್ಬಗಳ ಸಂದರ್ಭದಲ್ಲಿಯೂ ಹಿಂದೂಗಳ ಧಾರ್ಮಿಕ ಭಾವನೆಗಳು, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸದಿದ್ದರೆ, ಹಿಂದೂಗಳು ಕೂಡ ಈ ಉತ್ಪನ್ನಗಳನ್ನು ಬಹಿಷ್ಕರಿಸಬೇಕು. ಇದನ್ನು ವಿರೋಧಿಸಲು ಹಿಂದೂ ಜನಜಾಗೃತಿ ಸಮಿತಿ ಟ್ವಿಟ್ಟರ್ ನಲ್ಲಿ #No_Bindi_No_Businessಎಂಬ ಹ್ಯಾಷ್ ಟ್ಯಾಗ್ ಬಳಸಿ ಅಭಿಯಾನ ಆರಂಭಿಸಿತು ಮತ್ತು ಅದಕ್ಕೆ ಹಿಂದೂಗಳು ಬೃಹತ್ಪ್ರಮಾಣದಲ್ಲಿ ಸ್ಪಂದಿಸಿದ್ದಾರೆ. ಮರುದಿನ ‘ಮಲಬಾರ್ ಗೋಲ್ಡ್’ವು ಬಿಂದಿಗೆ ಹಾಕದಿರುವ ಕರೀನಾ ಕಪೂರ್-ಖಾನ್ ಬದಲಿಗೆ ನಟಿ ತಮನ್ನಾ ಭಾಟಿಯಾ ಅವರ ಹೊಸ ಜಾಹೀರಾತನ್ನು ಪ್ರಸಾರ ಮಾಡಿತು. ಇದು ಹಿಂದೂಗಳ ಸಂಘಟಿತ ಪ್ರತಿಭಟನೆಯ ಫಲವಾಗಿದೆ. ಹಿಂದೂಗಳ ಹಣ ಬೇಕು, ಆದರೆ ಹಿಂದೂ ಸಂಸ್ಕೃತಿ-ಸಂಪ್ರದಾಯ ಬೇಡ, ಇದು ನಡೆಯುವುದಿಲ್ಲ. ಹಿಂದುಸ್ಥಾನದಲ್ಲಿ ವ್ಯಾಪಾರ ಮಾಡಬೇಕಾದರೆ ಹಿಂದೂ ಸಂಸ್ಕೃತಿಯನ್ನು ಗೌರವಿಸಬೇಕು. ಹಿಂದೂ ಸಂಸ್ಕೃತಿಯನ್ನು ಗೌರವಿಸದಿದ್ದರೆ ಹಿಂದೂ ಸಮಾಜವು ಬಹಿಷ್ಕಾರದ ಶಸ್ತ್ರವನ್ನು ಬಳಸುವುದು ಎಂಬುದನ್ನು ಕಂಪನಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ಎಚ್ಚರಿಕೆ ನೀಡಿದರು.

ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯು ‘ಹಿಂದೂ ಹಬ್ಬ ಹರಿದಿನಗಳಲ್ಲಿ ಹಿಂದೂವಿರೋಧಿ ಪ್ರಚಾರ?’ ಎಂಬ ಆನ್‌ಲೈನ್ ‘ವಿಶೇಷ ಸಂವಾದ’ವನ್ನು ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಿದ್ದ ಇತಿಹಾಸ ಮತ್ತು ಸಂಸ್ಕೃತಿ ಚಿಂತಕ ನ್ಯಾಯವಾದಿ ಸತೀಶ ದೇಶಪಾಂಡೆ ಮಾತನಾಡುತ್ತಾ, ಕಾಂಗ್ರೆಸ್‌ನ ಆಡಳಿತದಲ್ಲಿ ಎಡಪಂಥೀಯರಿಗೆ ರಾಜಾಶ್ರಯ ಸಿಕ್ಕಿದ್ದರಿಂದ ವಿವಿಧ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಸಮಾಜದಲ್ಲಿ ಹಿಂದೂವಿರೋಧಿ ವಿಚಾರಗಳನ್ನು ಬಿಂಬಿಸಲಾಯಿತು. ಇದರ ಪರಿಣಾಮವಾಗಿ ಇಂದು ಟಿಕ್ಲಿ, ಕುಂಕುಮ ಇಲ್ಲದ ಜಾಹೀರಾತುಗಳು ಪ್ರಸಾರವಾಗುತ್ತಿವೆ. ಅದನ್ನು ಅಭ್ಯಾಸಪೂರ್ಣವಾಗಿ ವಿರೋಧಿಸಬೇಕು’ ಎಂದು ಹೇಳಿದರು. ಈ ವೇಳೆ ಕರ್ನಾಟಕದ ಪತ್ರಕರ್ತೆ ಶ್ರೀಲಕ್ಷ್ಮಿ ರಾಜಕುಮಾರ ಇವರು ಮಾತನಾಡುತ್ತಾ, ಇದು ಹಿಂದೂಗಳ ಗುರುತನ್ನು ಅಳಿಸಲು ಆರಂಭಿಸಿರುವ ‘ಸಾಂಸ್ಕೃತಿಕ ಜಿಹಾದ್’ ಎಂದರು. ಇಂದು ಕೊಲ್ಲಿ ರಾಷ್ಟ್ರಗಳಲ್ಲಿ ಮಹಿಳಾ ಪತ್ರಕರ್ತರು ಹಿಜಾಬ್ ಧರಿಸಿ ಸುದ್ದಿ ಓದುತ್ತಾರೆ. ಹಾಗಾದರೆ ಭಾರತದಲ್ಲಿ ಹಣೆಯಲ್ಲಿ ಕುಂಕುಮ ಇಟ್ಟು ಮಾಡಿದರೆ ಅದು ಹೇಗೆ ಪ್ರತಿಗಾಮಿಯಾಗಬಹುದು ? ನಮ್ಮ ಧಾರ್ಮಿಕ ಆಚರಣೆಗಳ ಹಿಂದಿರುವ ವಿಜ್ಞಾನ ಹಿಂದೂಗಳಿಗೆ ತಲುಪಬೇಕು ಎಂದು ಹೇಳಿದರು. ಈ ವೇಳೆ ‘ಸನಾತನ ಸಂಸ್ಥೆ’ಯ ಧರ್ಮಪ್ರಚಾರಕರಾದ ಶ್ರೀ. ಅಭಯ ವರ್ತಕ ಇವರು ಮಾತನಾಡುತ್ತಾ, ಕೇವಲ ‘ಮಲಬಾರ್’ನವರಷ್ಟೇ ಅಲ್ಲ ತನಿಷ್ಕ್, ಫ್ಯಾಬ್ ಇಂಡಿಯಾ, ಮಿಂತ್ರಾ, ಜಾವೇದ್ ಹಬೀಬ್, ಮಾನ್ಯವರ್ ಬ್ರ್ಯಾಂಡ್ ಮತ್ತಿತರರು ಈ ಹಿಂದೆ ಹಿಂದೂವಿರೋಧಿ ಆಕ್ಷೇಪಾರ್ಹ ಜಾಹೀರಾತುಗಳನ್ನು ಮಾಡಿದ್ದಾರೆ. ಯಾವುದೇ ಜಾಹೀರಾತು ಮುಸ್ಲಿಮರು ಅಥವಾ ಇತರ ಪಂಥಗಳ ವಿರುದ್ಧವಲ್ಲ; ಏಕೆಂದರೆ ಅವರು ಧರ್ಮಕ್ಕಾಗಿ ಸಂಘಟಿತರಾಗಿದ್ದಾರೆ. ಹಾಗಾಗಿ ಅವರ ವಿರುದ್ಧ ಪ್ರಚಾರ ಮಾಡುವ ಧೈರ್ಯ ಯಾರಿಗೂ ಇಲ್ಲ. ಇಂತಹ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ಹಿಂದೂಗಳು ಸ್ವಧರ್ಮದ ರಕ್ಷಣೆಗಾಗಿ ಕಾನೂನುರಿತ್ಯ ಹೋರಾಟ ನಡೆಸಬೇಕು. ಇದರ ವಿರುದ್ಧ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.