8 ರಾಜ್ಯಗಳಲ್ಲಿನ ಹಿಂದೂಗಳಿಗೆ ‘ಅಲ್ಪಸಂಖ್ಯಾತರ ಸ್ಥಾನಮಾನ’ ನೀಡುವ ಬದಲು ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ ! – ಶ್ರೀ. ರಮೇಶ ಶಿಂದೆ

ಶ್ರೀ ರಮೇಶ ಶಿಂದೆ

8 ರಾಜ್ಯಗಳಲ್ಲಿನ ಹಿಂದೂಗಳಿಗೆ ‘ಅಲ್ಪಸಂಖ್ಯಾತರ ಸ್ಥಾನಮಾನ’ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿ?ಯದಲ್ಲಿ, ‘ಅಲ್ಪಸಂಖ್ಯಾತರು ಯಾರು ?’ ಎಂಬುದನ್ನು ನಿರ್ಧರಿಸುವ ಹಕ್ಕು ರಾಜ್ಯ ಸರಕಾರಗಳಿಗೆ ಇರಲಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಅದಕ್ಕನುಸಾರ ಆ ರಾಜ್ಯಗಳಲ್ಲಿ ಕೆಲವು ಶೇಕಡಾದಷ್ಟಿರುವ ಹಿಂದೂಗಳು ಅಲ್ಪಸಂಖ್ಯಾತರ ಸ್ಥಾನಮಾನ ಪಡೆದರೂ ಅಲ್ಲಿನ ಹಿಂದೂಗಳಿಗೆ ಯಾವ ಉಪಯೋಗವೂ ಆಗುವುದಿಲ್ಲ; ಏಕೆಂದರೆ ಅದರಿಂದು ಮುಸಲ್ಮಾನರ ‘ಅಲ್ಪಸಂಖ್ಯಾತ’ ಸ್ಥಾನಮಾನವನ್ನು ರದ್ದಾಗುವುದಿಲ್ಲ. ಅಲ್ಲದೆ, ಅಲ್ಪಸಂಖ್ಯಾತ ವರ್ಗದ ಪಾರ್ಸಿ, ಸಿಕ್ಖ್, ಜೈನ್, ಜ್ಯೂ ಮುಂತಾದ ಸಮಾಜವನ್ನು ಹೋಲಿಸಿದರೆ, ಅಲ್ಪಸಂಖ್ಯಾತರ ಸಚಿವಾಲಯದಲ್ಲಿ ಮುಸಲ್ಮಾನರು ಹೆಚ್ಚಿನ ಆರ್ಥಿಕ ಸಹಾಯ ಮತ್ತು ಎಲ್ಲಾ ಯೋಜನೆಗಳು ಮತ್ತು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಹಾಗಾಗಿ ಅಲ್ಪಸಂಖ್ಯಾತರಾಗಿದ್ದರೂ ಹಿಂದೂಗಳಿಗೆ ಇದರಿಂದ ಯಾವುದೇ ವಿಶೇಷ ಪ್ರಯೋಜನವಾಗುವುದಿಲ್ಲ. ಅದಕ್ಕಿಂತ ಹಿಂದೂಗಳು ‘ಬಹುಸಂಖ್ಯಾತರ ಸ್ಥಾನಮಾನ’ವನ್ನು ಪಡೆದು ಭಾರತದಾದ್ಯಂತ ಹಿಂದೂ ರಾಷ್ಟ್ರಕ್ಕಾಗಿ ಒತ್ತಾಯಿಸುವುದು ಹೆಚ್ಚು ಸೂಕ್ತವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಹಿಂದೂಗಳಿಗೆ ಅಲ್ಪಸಂಖ್ಯಾತರ ಸ್ಥಾನಮಾನ – ಎಷ್ಟು ಪ್ರಯೋಜನಕಾರಿ ?’ ಎಂಬ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಶ್ರೀ. ಶಿಂದೆಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಅಲ್ಪಸಂಖ್ಯಾತರಾಗಲು ಬೇಡಿಕೆ ಇಟ್ಟ ನಂತರ ಹಿಂದೂಗಳು ಪುನಃ ಹಿಂದೂ ರಾಷ್ಟ್ರವನ್ನು ಬೇಡಲು ಸಾಧ್ಯವಾಗುವುದಿಲ್ಲ ಏಕೆಂದರೆ ಅಲ್ಪಸಂಖ್ಯಾತ ಸಮಾಜದವರ ಮಾತನ್ನು ಯಾರು ಕೇಳುವವರು ? ಇಂಗ್ಲೆಂಡ್‌ನಲ್ಲಿ 22 ಬಿಷಪ್‌ಗಳು ಮೇಲ್ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಅವರು ತಮ್ಮ ಧರ್ಮದ ವಿರುದ್ಧ ಯಾವುದೇ ಕಾನೂನನ್ನು ಜಾರಿಗೆ ತರಲು ಬಿಡುವುದಿಲ್ಲ. ಪ್ರತಿಯೊಂದು ದೇಶವು ಬಹುಸಂಖ್ಯಾತರ ಹಿತಾಸಕ್ತಿಗಳನ್ನು ನೋಡಿಕೊಳ್ಳುತ್ತದೆ; ಆದರೆ, ಭಾರತದಲ್ಲಿ ‘ಸೆಕ್ಯುಲರ್’ ಪದವನ್ನು ತಂದು ಬಹುಸಂಖ್ಯಾತ ಹಿಂದೂಗಳ ಎಲ್ಲ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಸವೋಚ್ಚ ನ್ಯಾಯಾಲಯದ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಇವರು, ಮುಸಲ್ಮಾನ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ‘ಶರಿಯಾ’ಕ್ಕನುಸಾರ ಎಲ್ಲಾ ವ್ಯವಹಾರಗಳು ನಡೆಯುತ್ತಿದ್ದು ಅಲ್ಲಿ ಹಿಂದೂ, ಸಿಕ್ಖ್ ಇವರ ಜನಸಂಖ್ಯೆ ಕ್ಷೀಣಿಸುತ್ತಿದೆ. ಅಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಬೇಕು. ತದ್ವಿರುದ್ಧ ಭಾರತವನ್ನು ‘ಸೆಕ್ಯುಲರ್’ ಎಂದು ಘೋಷಿಸಿದ್ದರೂ, ಮುಸಲ್ಮಾನರು ಮತ್ತು ಕ್ರೈಸ್ತರಿಗೇ ಅಲ್ಪಸಂಖ್ಯಾತರೆಂದು ವಿಶೇಷ ಸ್ಥಾನಮಾನ ಏಕೆ ? 2002 ರಲ್ಲಿ ಸರ್ವೋಚ್ಚ ನ್ಯಾಯಾಲಯವು ತೀರ್ಪಿನಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರು ಇರುವುದಿಲ್ಲ’ ಎಂದು ಹೇಳಿತು. ಭಾರತದಲ್ಲಿ ಯಾವ ಸಮುದಾಯವು ಸಾಧಾರಣ 200 ಸಂಸದರು, 1 ಸಾವಿರ ಶಾಸಕರು ಮತ್ತು 5 ಸಾವಿರ ಸ್ಥಳೀಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬಹುದೋ, ಆ ಸಮುದಾಯ ಅಲ್ಪಸಂಖ್ಯಾತವಾಗಿರಲು ಹೇಗೆ ಸಾಧ್ಯ ? ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಉಮೇಶ ಶರ್ಮಾ ಇವರು ಮಾತನಾಡುತ್ತಾ, ಮುಸಲ್ಮಾನ ಮತ್ತು ಕ್ರೈಸ್ತರಿಗೆ ವಿಶೇಷ ಸೌಲಭ್ಯಗಳನ್ನು ನೀಡಿ ಹಿಂದೂಗಳನ್ನು ವಂಚಿಸಲಾಗುತ್ತಿದೆ. ಅಲ್ಪಸಂಖ್ಯಾತರ ಸ್ಥಾನಮಾನ ಮುಸಲ್ಮಾನರ ಓಲೈಕೆಗಾಗಿ ಇದೆ. ಸಂವಿಧಾನದ 14 ನೇ ಪರಿಚ್ಛೇದದ ಪ್ರಕಾರ ಎಲ್ಲರಿಗೂ ಸಮಾನ ಹಕ್ಕುಗಳಿರುವುದರಿಂದ ನಿರ್ದಿಷ್ಟ ಸಮುದಾಯಕ್ಕೆ ವಿಶೇಷ ಹಕ್ಕುಗಳನ್ನು ನೀಡುವುದು ನಿಲ್ಲಿಸಬೇಕು.