ಸಮಾಜದಲ್ಲಿ ಕೋಮುಭಾವನೆಯನ್ನು ಕೆರಳಿಸುವ ಎಂಐಎಂ ಪಕ್ಷದ ವಕ್ತಾರ ಶೇಖ್ ಝಿಯಾ ನೋಮಾನಿ ಮೇಲೆ ಕಾನೂನುಕ್ರಮ ಜರುಗಿಸಿ

ಉತ್ತರ ಪ್ರದೇಶ ಮೂಲದ ಶೇಖ್ ಝಿಯಾ ನೋಮಾನಿ ಎಂಬವರು ಬೆಂಗಳೂರಿನಲ್ಲಿ ವಾಸವಾಗಿದ್ದು ಸದ್ಯ ಎಂಐಎಂ ಪಕ್ಷದ ವಕ್ತಾರರಾಗಿ ಕೆಲಸ ಮಾಡುತ್ತಾ ರಾಜ್ಯದಲ್ಲಿ ಕೋಮು ಸೌಹಾರ್ದವನ್ನು ಕೆಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತಿದೆ.

ಹಿಂದೂ ಜನಜಾಗೃತಿ ಸಮಿತಿಯು ಕಾನೂನು ಚೌಕಟ್ಟಿನಲ್ಲಿ ಸಮಾಜ ಕಾರ್ಯವನ್ನು ಮಾಡುತ್ತಿದೆ. ಆದರೆ ಇವರು ವ್ಯಾಪಾರದ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರ ವಿರುದ್ಧ ಪೊಲೀಸ್ ಠಾಣಿಯಲ್ಲಿ ದೂರು ನೀಡಲು ಹೋಗಿದ್ದು, ಪೋಲಿಸರು ಇದು ದಾಖಲಾರ್ಹ ಪ್ರಕರಣವಲ್ಲವೆಂದು ಲಿಖಿತವಾಗಿ ನೀಡಿದರೂ ಪುನಃ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೇ ಪೊಲೀಸರ ವಿರುದ್ದವೇ ಹೇಳಿಕೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಈ ಮೂಲಕ ಅವರು ಸರ್ಕಾರವನ್ನು ಗುರಿಯಾಗಿಸಿ ಕೆಲಸ ಮಾಡುವುದು ಗಮನಕ್ಕೆ ಬರುತ್ತದೆ.

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ವಿರುದ್ಧ ದೂರ ದಾಖಲಿಸಲು ಪ್ರಯತ್ನಿಸುವ ಇವರು ಹಲವು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಹಿಂದೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಾಮ ಮಂದಿರದ ಬಗ್ಗೆ ಅಂತಿಮ ತೀರ್ಪು ನೀಡಿದಾಗಲೂ ಆ ತೀರ್ಪನ್ನು ಟೀಕಿಸುವುದು, ಕರ್ನಾಟಕದಲ್ಲಿ ಹಿಜಾಬ್ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ನೀಡಿದ ಅಂತಿಮ ಆದೇಶವನ್ನು ಟೀಕಿಸುವುದು, ದೇಶದ್ರೊಹದ ಅಪರಾಧದ ಚಟುವಟಿಕೆಗಳಲ್ಲಿ ಬಂಧಿತನಾದ ಉಮರ್ ಖಲಿದ್‌ನನ್ನು ಬೆಂಬಲಿಸುವುದು, ಪಾಕಿಸ್ಥಾನವನ್ನು ಹೊಗಳುವುದು, ಶ್ರೀರಾಮನ ಅಪಮಾನ ಮಾಡುವುದು, ಶ್ರೀರಾಮ ಮಂದಿರದ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲವು ಆದೇಶ ನೀಡಿದಾಗಲೂ ಮಾನ್ಯ ಎಲ್ ಕೆ ಅಡ್ವಾಣಿಯವರನ್ನು ಭಯೋತ್ಪಾದಕ ಎಂದು ಹೇಳುವುದು ಹೀಗೆ ಹಲವು ರೀತಿಯಲ್ಲಿ ಫೇಸ್.ಬುಕ್ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವುದು, ದೇಶವಿರೋಧಿ , ನ್ಯಾಯಾಂಗವಿರೋಧಿ ಹಿಂಸೆಗೆ ಪ್ರಚೋದನೆಯನ್ನು ಮಾಡುವ ಪೊಸ್ಟ್ ಮಾಡಿರುವುದು ಗಮನಕ್ಕೆ ಬರುತ್ತದೆ.

ಈ ರೀತಿಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಕೆಲಸ ಮಾಡುವ ಮತ್ತು ಕೋಮು ಭಾವನೆಯನ್ನು ಕೆರಳಿಸುವ ಇಂತಹ ಸಮಾಜಘಾತುಕ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.