ಆಭರಣಗಳಿಂದ ಸ್ತ್ರೀಯರ ರಕ್ಷಣೆಯಾಗುತ್ತದೆ !

ಆಭರಣಗಳು ಸ್ತ್ರೀಯರನ್ನು ರಜ-ತಮಾತ್ಮಕ ಲಹರಿಗಳಿಂದ ರಕ್ಷಿಸುತ್ತವೆ : ಸ್ತ್ರೀಯು ಆದಿಶಕ್ತಿಯ ರೂಪವಾಗಿದ್ದಾಳೆ. ಸ್ತ್ರೀಯು ಮೂಲತಃ ರಜೋಪ್ರವೃತ್ತಿಯವಳಾಗಿದ್ದಾಳೆ, ಇದರಿಂದ ಅವಳ ಮೈಮೇಲಿರುವ ಆಭರಣಗಳು ಅವಳನ್ನು ವಾಯುಮಂಡಲದಲ್ಲಿನ ರಜತಮಾತ್ಮಕ ಲಹರಿಗಳ ಭ್ರಮಣದಿಂದ ನಿರ್ಮಾಣವಾಗುವ ಇಂಧನದಿಂದ ರಕ್ಷಿಸುತ್ತವೆ. ಪ್ರತಿಯೊಂದು ಆಭರಣವು ಸ್ತ್ರೀಯರನ್ನು ಸಂರಕ್ಷಣಾಕವಚದಂತೆ ರಕ್ಷಿಸುತ್ತದೆ. ಸ್ತ್ರೀಯರು ಪುರುಷರಿಗಿಂತ ಹೆಚ್ಚು ಸಂವೇದನಾಶೀಲರಾಗಿರುವುದರಿಂದ ಅವರು ವಾಯುಮಂಡಲದಲ್ಲಿನ ರಜತಮಾತ್ಮಕ ಲಹರಿಗಳಿಗೆ ಕೂಡಲೇ ಸ್ಪಂದಿಸುತ್ತಾರೆ. ಆದುದರಿಂದ ಮೊದಲಿನಿಂದಲೂ ಆಭರಣಗಳನ್ನು ಉಪಯೋಗಿಸಿ ಸ್ತ್ರೀಯರನ್ನು ರಕ್ಷಿಸಲಾಗುತ್ತದೆ. – ಓರ್ವ ವಿದ್ವಾಂಸ (ಪೂ.)ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೭.೧೨.೨೦೦೫, ರಾತ್ರಿ ೮.೦೨