ಹಿಂದೂಗಳ ಶ್ರದ್ಧಾಸ್ಥಾನವನ್ನು ಅವಮಾನಿಸಿದ ಚಿತ್ರನಟರ, ನಿರ್ಮಾಪಕರ, ಕಂಪನಿಗಳ ಚಲನಚಿತ್ರಗಳು ಮತ್ತು ಉತ್ಪಾದನೆಗಳಿಗೆ ಹಿಂದೂಗಳು ಬಹಿಷ್ಕಾರ ಹಾಕಬೇಕು !

ಮಹಾಭಾರತ ಗ್ರಂಥವನ್ನು ಅವಮಾನಿಸಿದ್ದಕ್ಕಾಗಿ ತಮಿಳುನಾಡಿನ ಹಿಂದೂ ಸಂಘಟನೆಗಳಿಂದ ಕಮಲ ಹಸನ್ ವಿರುದ್ಧ ದೂರು

ಹಿಂದೂಗಳ ಧಾರ್ಮಿಕಗ್ರಂಥಗಳ ಅವಮಾನಿಸುವವರ ವಿರುದ್ಧ ಯಾರಾದರೂ ದೂರು ನೀಡುವ ಮೊದಲೇ ಸರಕಾರವು ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ! ಸಲ್ಮಾನ ರಶ್ದಿ ಇವರ ‘ಸಟಾನಿಕ್ ವರ್ಸೆಸ್ ಪುಸ್ತಕದ ಮೇಲೆ ಯಾರಾದರೂ ನಿಷೇಧ ಹೇರಲು ಆಗ್ರಹಿಸುವ ಮೊದಲೇ ಸರಕಾರವು ನಿಷೇಧ ಹೇರಿತ್ತು, ಎಂಬುದನ್ನು ಗಮನಿಸಬೇಕು !

ಚೆನ್ನೈ – ಚಿತ್ರ ನಟ ಕಮಲ ಹಸನ್ ಇವರು ಹಿಂದೂಗಳ ಧಾರ್ಮಿಕ ಗ್ರಂಥ ಮಹಾಭಾರತದ ವಿಷಯದಲ್ಲಿ ಅವಮಾನಿಸುವ ಹೇಳಿಕೆಯನ್ನು ನೀಡಿರುವುದರಿಂದ ತಮಿಳುನಾಡಿನ ಹಿಂದೂ ಮಕ್ಕಳ ಕಚ್ಛೀ ಎಂಬ ಹಿಂದುತ್ವನಿಷ್ಠ ಸಂಘಟನೆಯು ಪೊಲೀಸರಲ್ಲಿ ದೂರು ನೀಡಿದೆ. ಅದರ ಜೊತೆಗೆ ಅಕಿಲಾ ಹಿಂದೂ ಮಹಾಸಭೆಯು ಕೊಯಂಬತ್ತೂರಿನ ಜಿಲ್ಲಾಧಿಕಾರಿಗಳಲ್ಲಿ ದೂರು ದಾಖಲಿಸಿದೆ. (ತಕ್ಷಣ ದೂರು ದಾಖಲಿಸುವ ಹಿಂದುತ್ವನಿಷ್ಠ ಸಂಘಟನೆಗಳಿಗೆ ಅಭಿನಂದನೆ ! – ಸಂಪಾದಕರು)