ಪ.ಪೂ.ಪಾಂಡೆ ಮಹಾರಾಜರ ಅಮೂಲ್ಯ ವಿಚಾರಧನ ದೇಶದ ನಾಗರಿಕರನ್ನು ಎಲ್ಲ ದೃಷ್ಟಿಯಿಂದ ಸಕ್ಷಮಗೊಳಿಸುವುದೇ ನಿಜವಾದ ರಕ್ಷಣೆಯಾಗಿದೆ !

ಪ.ಪೂ.ಪಾಂಡೆ ಮಹಾರಾಜ

೬.೬.೨೦೧೬ ರಂದು ದೈನಿಕ ಸನಾತನ ಪ್ರಭಾತದಲ್ಲಿ ಪ್ರಕಟವಾದ ಭಾರತೀಯ ಸೇನೆಯ ಎಲ್ಲಕ್ಕಿಂತ ದೊಡ್ಡ ಶಸ್ತ್ರಉಗ್ರಾಣವೆಂದು ಗುರುತಿಸಲ್ಪಡುವ ಮಹಾರಾಷ್ಟ್ರದ ಪುಲಗಾವ್ (ವರ್ಧಾ)ನಲ್ಲಿನ ಉಗ್ರಾಣಕ್ಕೆ ಬೆಂಕಿ ತಗಲಿರುವ ವಾರ್ತೆಯನ್ನು ಓದಿದಾಗ ರಕ್ಷಣೆಯ ವಿಷಯದಲ್ಲಿ ನನ್ನ ಮನಸ್ಸಿನಲ್ಲಿ ಮೂಡಿದ ವಿಚಾರ ಪ್ರಕ್ರಿಯೆಯನ್ನು ಇಲ್ಲಿ ಕೊಡುತ್ತಿದ್ದೇನೆ. ಬೆಂಕಿ ತಗಲುವಂತಹ ಪರಿಸ್ಥಿತಿ ಏಕೆ ನಿರ್ಮಾಣವಾಯಿತು, ಎಂಬುದು ತನಿಖೆಯ ನಂತರ ತಿಳಿಯುವುದು.

ಭಾಗ ೧

೧. ದೇಶದ ಸದ್ಯಸ್ಥಿತಿ

೧ ಅ. (ಅ) ಸತ್ಯಮೇವ ಜಯತೇ ! : ಎಂಬುದು ಸರಕಾರದ ಧ್ಯೇಯವಾಕ್ಯವಾಗಿರುವಾಗ ದೇಶದ ಸ್ಥಿತಿಯು ಅಸತ್ಯಮೇವ ಜಯತೆಯಾಗಿದೆ. ಸದ್ಯ ಯಾವುದೇ ಮಾಧ್ಯಮವನ್ನು ನೋಡಿದರೆ, ಸುಳ್ಳು ಹೇಳು; ಆದರೆ ಪದೇಪದೇ ಹೇಳು, ಅದರಿಂದ ಅದು ಸತ್ಯವಾಗುತ್ತದೆ, ಎಂಬ ತತ್ತ್ವದ ಮೇಲೆ ಕಾರ್ಯ ಮಾಡುತ್ತದೆ. ಸನಾತನ ಸಂಸ್ಥೆಯಂತಹ ಅಧ್ಯಾತ್ಮದ ಪ್ರಚಾರ-ಪ್ರಸಾರ ಮಾಡುವ ಸಂಸ್ಥೆಯು ನಿರಂತರ ವಿಚಾರಣೆಗೆ ಗುರಿಯಾಗಬೇಕಾಗುತ್ತದೆ. ಸುಳ್ಳು ಹೇಳುವವರನ್ನು ಮಾಧ್ಯಮಗಳು ವೈಭವೀಕರಿಸುತ್ತಿವೆ. ಅವರನ್ನು ರಕ್ಷಿಸಲಾಗುತ್ತದೆ. ಸತ್ಯವು ಹೊರಗೆ ಬೀಳುವಾಗ ಮಾತ್ರ ಈ ಮಾಧ್ಯಮಗಳು ಬಾಯಿಮುಚ್ಚಿ ಕುಳಿತುಕೊಳ್ಳುತ್ತವೆ.

೧ ಆ. ಸದ್ರಕ್ಷಣಾಯ ಖಲನಿಗ್ರಹಣಾಯ ಅಲ್ಲ, ಅಸತ್‌ರಕ್ಷಣಾಯ ಸತ್ನಿಗ್ರಹಣಾಯ ! : ಸದ್ರಕ್ಷಣಾಯ ಖಲನಿಗ್ರಹಣಾಯ | ಅಂದರೆ ಸಜ್ಜನರ ರಕ್ಷಣೆ ಹಾಗೂ ದುಷ್ಟರಿಗೆ ಭಯವಾಗುವಂತಹ (ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ |), ಪೊಲೀಸರ ಧ್ಯೇಯವಾಕ್ಯವಾಗಿರುವಾಗ ಅದರ ಉಲ್ಟಾ ಸ್ಥಿತಿ ಕಾಣಿಸುತ್ತಿದೆ. ಅಸತ್‌ರಕ್ಷಣಾಯ ಸತ್ನಿಗ್ರಹಣಾಯ | ಇಂತಹ ಸ್ಥಿತಿ ಅಸ್ತಿತ್ವದಲ್ಲಿದೆ. ಸಂತರನ್ನು ಬಂಧಿಸುವುದು, ಅವರಿಗೆ ಕಿರುಕುಳ ಕೊಡುವುದು ಇತ್ಯಾದಿ ನಡೆಯುತ್ತಿದೆ. ದುಷ್ಟರಿಗೆ ಸೌಲಭ್ಯಗಳನ್ನು ನೀಡುವುದು, ಅವರನ್ನು ಓಲೈಸುವುದು, ಅವರಿಗೆ ಸಹಾಯ ಮಾಡುವುದು ಇತ್ಯಾದಿ ಎಲ್ಲೆಡೆ ಕಾಣಿಸುತ್ತಿದೆ. ತಮಿಳುನಾಡಿನ ಕಾಂಚೀ ಕಾಮಕೋಟಿ ಪೀಠಾಧೀಶ್ವರ ಶ್ರೀ ಜಯೇಂದ್ರ ಸರಸ್ವತಿ ಇವರ ಪ್ರಕರಣ, ಸನಾತನ ಸಂಸ್ಥೆಯ ಮಡಗಾಂವ್ ಪ್ರಕರಣ, ಸಾಧ್ವಿ ಪ್ರಜ್ಞಾಸಿಂಗ್ ಇವರ ಮಾಲೆಗಾವ್ ಪ್ರಕರಣ ಇತ್ಯಾದಿಗಳನ್ನು ನೋಡುವಾಗ ಇದು ಸ್ಪಷ್ಟವಾಗಿ ಕಾಣಿಸುತ್ತದೆ.

೨. ಹಿಂದಿನ ಕಾಲದಲ್ಲಿದ್ದ ದೇಶದ ಸ್ಥಿತಿ ಹಾಗೂ ಇಂದಿನ ಕಾಲದಲ್ಲಿನ ದೇಶದ ಸ್ಥಿತಿಯಲ್ಲಿನ ವ್ಯತ್ಯಾಸ

೨ ಅ. ಯಥಾ ರಾಜಾ ತಥಾ ಪ್ರಜಾ ! : ಹಿಂದಿನ ಕಾಲದಲ್ಲಿ ಯಥಾ ರಾಜಾ ತಥಾ ಪ್ರಜಾ ಎಂಬ ಸುವಚನದಂತೆ ರಾಜ ಧಾರ್ಮಿಕ ಹಾಗೂ ಪ್ರಜೆಗಳು ಧರ್ಮಾಚರಣೆ ಮಾಡುತ್ತಿದ್ದ ಕಾರಣ ರಾಜನಿಗೆ ಪ್ರಜೆಗಳ ಕಲ್ಯಾಣದ ಬಗ್ಗೆ ಚಿಂತೆಯಿತ್ತು. ನಮ್ಮ ರಾಜ್ಯದಲ್ಲಿ ಬ್ರಾಹ್ಮತೇಜ ಹಾಗೂ ಕ್ಷಾತ್ರತೇಜಯುಕ್ತ ನಾಗರಿಕರಿರಬೇಕು, ಬಹಳಷ್ಟು ಹಾಲು ಕೊಡುವ ಗೋಮಾತೆಯಿರಬೇಕು, ಸರ್ವಗುಣಸಂಪನ್ನ ಬುದ್ಧಿವಂತ ಸ್ತ್ರೀಯರಿರಬೇಕು, ಅವರು ಸಂದರ್ಭಾನುಸಾರ ನೇತೃತ್ವ ಮಾಡುವವರಾಗಿರಬೇಕು, ಯುವಕರು ರಥಿ, ಮಹಾವೀರ, ಬಲಶಾಲಿ, ಪರಾಕ್ರಮಿಗಳಾಗಿರಬೇಕು ಹಾಗೂ ಸಭೆಗಳಿಗಾಗಿ ಉಪಯುಕ್ತವಾಗಿರಬೇಕು, ಇದಕ್ಕಾಗಿ ರಾಜರು ಪ್ರಯತ್ನಿಸುತ್ತಿದ್ದರು. ಹೀಗೆ ಎಲ್ಲೆಡೆ ಆಗುವ ಧರ್ಮಾಚರಣೆಯಿಂದಾಗಿ ವಾತಾವರಣವು
ಚೈತನ್ಯಯುಕ್ತವಾಗಿರುತ್ತಿತ್ತು. ಆದ್ದರಿಂದ ಸಹಜವಾಗಿಯೇ ನಿಸರ್ಗ ಸಹ ಸಹಕಾರ ನೀಡುತ್ತಿತ್ತು. ಅವರಿಗೆ ಬೇಕೆನಿಸಿದಾಗ ಮಳೆಯಾಗುತ್ತಿತ್ತು. ವನಸ್ಪತಿಗಳು ಸಹ ಫಲಪುಷ್ಪಗಳಿಂದ ತುಂಬಿ ತುಳುಕುತ್ತಿದ್ದವು. ಹಿಂದಿನ ಕಾಲದಲ್ಲಿ ಸ್ತ್ರೀಯರು ಆಭರಣಗಳನ್ನು ಹಾಕಿಕೊಂಡು ರಾತ್ರಿ – ಅಪರಾತ್ರಿ ಪ್ರವಾಸ ಮಾಡುತ್ತಿದ್ದರು. ಈಗ ಅವರ ರಕ್ಷಣೆಯಾಗುತ್ತಿದೆಯೇ ? ನಕ್ಸಲ್‌ವಾದಿಗಳು ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡುತ್ತಾರೆ. ಇದು ಎಂತಹ ರಕ್ಷಣೆ ? ಕೇವಲ ಅಧಿಕಾರವನ್ನು ಉಪಭೋಗಿಸುವ ಸಲುವಾಗಿ ಕಾರ್ಯ ನಡೆಯುತ್ತಿರುವುದು ಕಾಣಿಸುತ್ತದೆ.

೨ ಆ. ಯಥಾ ಪ್ರಜಾ ತಥಾ ರಾಜ : ಇಂದಿನ ಸ್ಥಿತಿ ಯಥಾ ಪ್ರಜಾ ತಥಾ ರಾಜ, ಎನ್ನುವ ಹಾಗಿದೆ. ಗೂಂಡಾಗಳು ಹಣ ನೀಡಿ ಚುನಾವಣೆಯನ್ನು ಗೆಲ್ಲುತ್ತಾರೆ. ಇಂತಹ ಜನರು ನಾಗರಿಕರನ್ನು ಹೇಗೆ ರಕ್ಷಿಸುವರು ? ಆದ್ದರಿಂದ ಇಂತಹ ಗೂಂಡಾಗಳು ನಾಗರಿಕರ ಆರೋಗ್ಯದ ಕಡೆಗೆ, ಸಮೃದ್ಧಿಯ ಕಡೆಗೆ ಗಮನ ಹರಿಸದೆ ತಮ್ಮ ಸ್ವಾರ್ಥವನ್ನು ಸಾಧಿಸಲು ಭ್ರಷ್ಟಾಚಾರ ಮಾಡುವುದು ಕಾಣಿಸುತ್ತದೆ. ಆದ್ದರಿಂದ ದೇಶದ ಸ್ಥಿತಿ ಹೀಗೆ ದಯನೀಯವಾಗಿದೆ.

೨ ಇ. ಯೋಗಕ್ಷೇಮಂ ವಹಾಮ್ಯಹಮ್ | : ಪ್ರತಿಯೊಂದು ಜೀವವನ್ನು ಎಲ್ಲ ದೃಷ್ಟಿಯಿಂದ ಕಲ್ಯಾಣ ಮಾಡುವ ಸಾಮರ್ಥ್ಯವು ಭಗವಂತನಲ್ಲಿದೆ. ಕೇವಲ ಜೀವಿಸುವ ಸಲುವಾಗಿ ಭಗವಂತನು ಮನುಷ್ಯ ಪ್ರಾಣಿಯನ್ನು ಕಳುಹಿಸಿದ್ದಲ್ಲ. ಪಶುಪಕ್ಷಿಗಳು ಸಹ ಜೀವಿಸುತ್ತವೆ. ಪ್ರತಿಯೊಬ್ಬ ಮಾನವನು ತನ್ನ ಉದ್ಧಾರ ಮಾಡಿಕೊಳ್ಳಬೇಕೆಂದು ಭಗವಂತನು ಇಲ್ಲಿಗೆ ಕಳುಹಿಸಿದ್ದಾನೆ. ೮೪ ಲಕ್ಷ ಯೋನಿಗಳ ಮೂಲಕ ಪ್ರವಾಸ ಮಾಡದೆ ಮಾನವಜನ್ಮವು ಲಭಿಸುವುದಿಲ್ಲ. ಈಗ ಸಿಕ್ಕಿರುವ ಜನ್ಮವನ್ನು ಯೋಗ್ಯ ಪದ್ಧತಿಯಲ್ಲಿ ಉಪಯೋಗಿಸಿ ಸಾಧನೆ ಮಾಡಲು ಹಾಗೂ ಆಧ್ಯಾತ್ಮಿಕ ಉನ್ನತಿ ಮಾಡಿಕೊಂಡು ಈಶ್ವರಪ್ರಾಪ್ತಿ ಮಾಡಿಕೊಳ್ಳುವ ಸಲುವಾಗಿ ನೀಡಲಾಗಿದೆ. ಅದಕ್ಕಾಗಿ ಅವನಿಗೆ ರಕ್ಷಣೆ ಸಿಗುವುದು ಅಪೇಕ್ಷಿತವಿದೆ. ಜೀವಕ್ಕೆ ತನ್ನ ಕೈಯಿಂದಾಗುವ ಪ್ರತಿಯೊಂದು ಕರ್ಮದ ಫಲವನ್ನು ಉಪಭೋಗಿಸಿ ಮುಗಿಸಲಿಕ್ಕಿದೆ. ತನ್ನ ಕೈಯಿಂದಾಗುವ ಪ್ರತಿಯೊಂದು ಯೋಗ್ಯ-ಅಯೋಗ್ಯ ಕರ್ಮದ ಲೆಕ್ಕಾಚಾರವನ್ನು ಚಿತ್ರಗುಪ್ತನು ಇಡುತ್ತಾನೆ. ಈ ರೀತಿ ಭಗವಂತನ ನಿಯೋಜನೆಯೆಂದು ತಿಳಿದು ಪ್ರತಿಯೊಬ್ಬರೂ ತಮ್ಮ ಕಾರ್ಯವು ಯಜ್ಞ ಕರ್ಮವೆಂದು ಮಾಡಲಿಕ್ಕಿದೆ. ಹಿಂದಿನ ಕಾಲದ ರಾಜರು ಇದನ್ನು ತಿಳಿದು ರಾಜ್ಯ ನಡೆಸುತ್ತಿದ್ದರು.

೨ ಈ. ದುರ್ಬಲ ಪ್ರಜೆಯೆಂದು ದುರ್ಬಲ ರಾಜ : ಸತ್ಯದ ಪಕ್ಷವನ್ನು ವಹಿಸಿ ಅದನ್ನು ಪ್ರಸ್ಥಾಪಿಸಲು ಕಠೋರವಾಗಿರುವುದು ಸರಕಾರದ ಹೊಣೆಯಾಗಿದೆ. ಹೀಗಿರುವಾಗ ರಾಜನು ದುರ್ಬಲವಾಗಿರುವುದರಿಂದ ಕಠೋರವಾದ ಹೇಳಿಕೆಗಳನ್ನು ನೀಡುವುದಿಲ್ಲ. ಅವರು ದುಷ್ಟರನ್ನು ಓಲೈಸುತ್ತಾರೆ, ಮತಕ್ಕಾಗಿ ಸುಳ್ಳು ಆಶ್ವಾಸನೆ ನೀಡಿ ಚುನಾವಣೆಯನ್ನು ಗೆಲ್ಲುತ್ತಾರೆ, ನಾಗರಿಕರನ್ನು ಸಕ್ಷಮಗೊಳಿಸುವ ಕಡೆಗೆ ದುರ್ಲಕ್ಷ ಮಾಡುತ್ತಾರೆ. ಹೀಗೆ ಇಂದಿನ ಸ್ಥಿತಿಯಿದೆ.

೩. ಸರಕಾರವೆಂದರೇನು ? ಅದರ ಕರ್ತವ್ಯ ಯಾವುದು ? ಹಾಗೂ ದೇಶದ ಪ್ರಸ್ತುತ ಸರಕಾರದ ಸ್ಥಿತಿಯನ್ನು ಸುಧಾರಿಸಲು ಹೇಳಿದ ಉಪಾಯಗಳು

೩ ಅ. ಶಾಸನ(ಸರಕಾರ)ವೆಂದರೆ ಶಕ್ತಿಪೀಠ ! ಸರಕಾರವು ಶಕ್ತಿಪೀಠವಾಗುವ ಆವಶ್ಯಕತೆಯಿದೆ : ಶ+ಆಸನ; ಶ=ಶಕ್ತಿ; ಆಸನ=ಸ್ಥಾನ, ಪೀಠ; ಶಾಸನ ವೆಂದರೆ ಶಕ್ತಿಪೀಠ ! ರಾಜ್ಯವೆಂದರೆ ಒಂದು ದೊಡ್ಡ ಕುಟುಂಬವಾಗಿದೆ, ಎಂದು ತಿಳಿದು ರಾಜ್ಯ ಶಾಸನವು ಕಾರ್ಯ ಮಾಡುವ ಆವಶ್ಯಕತೆಯಿದೆ. ಅದು ಶಕ್ತಿಪೀಠ ಆಗಿರಬೇಕು. ಅದು ನಾಗರಿಕರ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಹೀಗೆ ಎಲ್ಲ ತರಹದ ಸಮಸ್ಯೆಗಳನ್ನು ನಿವಾರಿಸುವಂತದ್ದಾಗಿರಬೇಕು. ಅದಕ್ಕಾಗಿ ಆಡಳಿತದ ಮಂತ್ರಿಗಳು ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಯಲ್ಲಿ ಪರಿಪೂರ್ಣವಾಗಿರಬೇಕು. ಆಯಾ ವಿಷಯಗಳಲ್ಲಿ ಅವರು ಪರಿಪೂರ್ಣವಾಗಿರಬೇಕು. ಅವರಿಗೆ ನಾಗರಿಕರ ವಿಷಯದಲ್ಲಿ ಮಮತೆ ಹಾಗೂ ಆತ್ಮೀಯತೆ ಇರಬೇಕು. ಅದಕ್ಕಾಗಿ ಅವರು ಆಧ್ಯಾತ್ಮಿಕ ದೃಷ್ಟಿಯಲ್ಲಿ ಸಂತರು ಅಥವಾ ಗುರುಗಳ ಸ್ಥಿತಿಗೆ ಸರಿ ಸಮಾನವಾಗಿರಬೇಕು.

೩ ಆ. ಇಷ್ಟರವರೆಗೆ ಸರಕಾರ ಚೈತನ್ಯಶಕ್ತಿಯ ಮೌಲ್ಯವನ್ನು ತಿಳಿದುಕೊಳ್ಳದೆ ಅದಕ್ಕನುಸಾರ ಕೃತಿ ಮಾಡದಿರುವುದು : ಚೈತನ್ಯಶಕ್ತಿಯು ಶಾಶ್ವತವಾಗಿದ್ದು ಅದು ಎಂದಿಗೂ ನಿಷ್ಕ್ರಿಯವಾಗುವುದಿಲ್ಲ; ಆದರೆ ಯಾವುದೇ ಸರಕಾರ ಬಂದರೂ ಅದಕ್ಕೆ ಇದರ ಮೌಲ್ಯ ತಿಳಿಯದಿರುವುದರಿಂದ ಅದು ಸಾತ್ತ್ವಿಕತೆ, ನೈತಿಕ ಮೌಲ್ಯವನ್ನು ಹೆಚ್ಚಿಸುವ ಕೃತಿ ಹಾಗೂ ಸ್ವಭಾವದೋಷ ಮತ್ತು ಅಹಂ ನಿರ್ಮಾಲನ ಮಾಡುವ ಧರ್ಮಶಿಕ್ಷಣಕ್ಕೆ ಮಹತ್ವ ನೀಡಲಿಲ್ಲ. ಇಂದಿನ ಸರಕಾರವೂ ಈ ದೃಷ್ಟಿಯಲ್ಲಿ ಪ್ರಯತ್ನಿಸುತ್ತಿರುವುದು ಕಾಣಿಸುವುದಿಲ್ಲ.

೩ಇ. ಸದಾಚಾರವು ಕೇವಲ ಒಂದು ಪಂಥಕ್ಕಾಗಿರದೆ ಅದು ಸಂಪೂರ್ಣ ಮನುಕುಲದ ಕಲ್ಯಾಣಕ್ಕಾಗಿರುವುದು : ನಿಜವಾದ ಧರ್ಮಾಚರಣಿಯು ಯಾವತ್ತೂ ದುರಾಚಾರ ಮಾಡುವುದಿಲ್ಲ. ಸದಾಚಾರವೇ ಅವನ ಧರ್ಮವಾಗಿರುತ್ತದೆ. ಅದು ಸಂಪೂರ್ಣ ಮನುಕುಲದ ಕಲ್ಯಾಣಕ್ಕಾಗಿ ಇರುತ್ತದೆ. ಇದನ್ನು ಗುರುತಿಸಿ ಅದಕ್ಕೆ ಮಹತ್ವ ನೀಡುವ ಕಾರ್ಯವು ಸರಕಾರದ್ದಾಗಿರುತ್ತದೆ; ಆದರೆ ಪ್ರಜೆಗಳನ್ನು ಸದಾಚಾರಿಗಳನ್ನಾಗಿ ಮಾಡುತ್ತಿರುವುದು ಕಾಣಿಸುವುದಿಲ್ಲ.

೩ ಈ. ದೇಶವನ್ನು ಸಕ್ಷಮಗೊಳಿಸಲು ಅದರ ನಾಗರಿಕರನ್ನು ಮೊದಲು ಸಕ್ಷಮಗೊಳಿಸುವ ಅವಶ್ಯಕತೆಯಿರುವುದು : ದುರ್ಬಲ, ದುರಾಚಾರಿ ಹಾಗೂ ವ್ಯಸನಾಧೀನ ಯುವಕರ ರಕ್ಷಣೆಯಾಗ ಬೇಕೆಂದು ಪ್ರಯತ್ನ ನಡೆದಿದೆಯೇ ? ಮೊದಲು ನಾಗರಿಕರನ್ನು ಸಕ್ಷಮಗೊಳಿಸದೆ ಕೇವಲ ರಕ್ಷಣೆಯ ವಿಚಾರ ಮಾಡುವುದು ಎಷ್ಟರ ಮಟ್ಟಿಗೆ ಯೋಗ್ಯ ವಾಗಿದೆ ? ಅದಕ್ಕಾಗಿ ಮೊದಲು ನಾಗರಿಕರನ್ನು ಸಕ್ಷಮಗೊಳಿಸುವುದು ಆವಶ್ಯಕವಾಗಿದೆ.

೩ ಉ. ದೇಶದ ಪ್ರತಿಯೊಂದು ಜೀವಕ್ಕೆ ಭೌತಿಕ ಹಾಗೂ ಪಾರಮಾರ್ಥಿಕ ದೃಷ್ಟಿಯಿಂದ ಸೌಲಭ್ಯಗಳನ್ನು ನೀಡುವುದು ಶಕ್ತಿಪೀಠದ ಅಂದರೆ ಸರಕಾರದ ಹೊಣೆಯಾಗಿದ್ದು ಇದಕ್ಕೆ ಅಡಚಣೆಯನ್ನುಂಟು ಮಾಡುವ ಶತ್ರುಗಳಿಂದ ಅವರನ್ನು ರಕ್ಷಣೆ ಮಾಡುವುದು ಸಹ ಅದರ ಹೊಣೆಯಾಗಿರುವುದು : ನಾಗರಿಕರು ಅಂದರೇನು ? ರಾಜ್ಯದಲ್ಲಿ ಜನ್ಮಪಡೆದ ವ್ಯಕ್ತಿಗಳು. ವ್ಯಕ್ತಿಗಳೆಂದರೆ ಜೀವಗಳು. ೮೪ ಲಕ್ಷ ಯೋನಿಗಳಿಂದ ಪ್ರವಾಸ ಮಾಡಿ ಬಂದಿರುವ ಮಾನವ ಜೀವಗಳು ! ಈ ಜೀವಗಳಿಗೆ ತಾಯಿಯ ಉದರದಲ್ಲಿರುವಾಗ ಹಿಂದಿನ ಜನ್ಮದ ಸ್ಮರಣೆಯಿರುವುದರಿಂದ ಅದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಾ ಇರುತ್ತದೆ, ಹೇ ಭಗವಂತಾ, ನನ್ನನ್ನು ಇದರಿಂದ ಶೀಘ್ರದಲ್ಲಿ ಮುಕ್ತಗೊಳಿಸು. ನಾನು ಇಲ್ಲಿಂದ ಹೊರಗೆ ಬಂದ ನಂತರ ಸಾಧನೆ ಮಾಡಿ ನನ್ನಲ್ಲಿನ ದೋಷಗಳ ನಿವಾರಣೆ ಮಾಡಿ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತನಾಗುವೆನು. ತಾಯಿಯ ಉದರದಿಂದ ಹೊರಗೆ ಬಂದ ನಂತರ ಆ ಜೀವವು ಮಾಯೆಯಲ್ಲಿ ಬದ್ಧವಾಗುತ್ತದೆ ಹಾಗೂ ಭಗವಂತನಿಗೆ ನೀಡಿದ ಆಶ್ವಾಸನೆಯನ್ನು ಮರೆಯುತ್ತದೆ. ಈ ದೃಷ್ಟಿಯಿಂದ ಜೀವಕ್ಕೆ ಶಿಕ್ಷಣ ನೀಡಿ (ಮೂಲಸ್ವರೂಪವನ್ನು ಅರಿವು ಮೂಡಿಸುವುದು) ಅದಕ್ಕೆ ಭೌತಿಕ ಹಾಗೂ ಪಾರಮಾರ್ಥಿಕ ದೃಷ್ಟಿಯಲ್ಲಿ ಸೌಲಭ್ಯಗಳನ್ನು ನೀಡುವುದು ಶಕ್ತಿಪೀಠದ ಅಂದರೆ ಸರಕಾರದ ಹೊಣೆ ಯಾಗಿದೆ. ಇದಕ್ಕೆ ಅಡ್ಡಿಪಡಿಸುವ ಎಲ್ಲ ಶತ್ರುಗಳಿಂದ ರಕ್ಷಣೆ ಮಾಡುವುದು ಅದರ ಹೊಣೆಯಾಗಿದೆ.
– ಪ.ಪೂ. ಪರಶರಾಮ ಪಾಂಡೆ, ಸನಾತನ ಆಶ್ರಮ, ದೇವದ್, ಪನವೇಲ್. (೬.೬.೨೦೧೬)